Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಬೀಚನಹಳ್ಳಿ ಗ್ರಾಮದಲ್ಲಿ ಬಾರಿ ಗಾತ್ರದ ಹೆಬ್ಬಾವು ರಕ್ಷಣೆ

 

ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿ ಬೀಚನಹಳ್ಳಿ ಗ್ರಾಮದ ಪುಟ್ಟಸ್ವಾಮಿಗೌಡರ ಕ ಗದ್ದೆಯಲ್ಲಿ ಕಬ್ಬಿನ ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ಸುಮಾರು 12 ಅಡಿ ಉದ್ದದ,35 —40 ಕಿಲೋ ತೂಕದ ಹೆಬ್ಬಾವು ಇಂಡಿಯನ್ ರಾಕ್ ಪೈಥಾನ್ ಕಾಣಿಸಿಕೊಂಡಿದೆ. ಕಾರ್ಮಿಕರು ಮತ್ತು ಗ್ರಾಮಸ್ಥರು ಸರ್ಪ ಮಿತ್ರ ವೈದ್ಯ ಕುದರುಗುಂಡಿ ಮಹೇಶ್ ಕುಮಾರ್,ಮಂಡ್ಯ ತಾಲೂಕು ಅರಣ್ಯಾಧಿಕಾರಿ ಶೈಲಜಾ ರವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಸ್ನೇಕ್ ಮಹೇಶ್ ರವರು ಇಲಾಖೆಯ ಗಸ್ತು ಅರಣ್ಯ ಪಾಲಕರಾದ ಸಿ. ರಾಜೇಶ್, ಹೆಚ್. ಪ್ರತಾಪ್ ಮತ್ತು ವಾಹನ ಚಾಲಕ ಚಂದ್ರು ರವರೊಂದಿಗೆ ಸ್ಥಳಕ್ಕೆ ದೌಡಾಯಿಸಿ ಹಾವನ್ನು ರಕ್ಷಿಸಿ ಸೂಕ್ತ ಸ್ವಾಭಾವಿಕ ಪರಿಸರದಲ್ಲಿ ಹಾವನ್ನು ಸ್ವತಂತ್ರಗೂಳಿಸಿದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಸುತ್ತ ಮುತ್ತಲಿನ ಗ್ರಾಮಸ್ಥರು, ಯುವ ಮುಖಂಡರಾದ ಶಂಕರ್, ರಮೇಶ್, ಪುಟ್ಟಸ್ವಾಮಿ, ಶಿವು ಹಾಗೂ ಕೂಲಿ ಕಾರ್ಮಿಕರು, ಸುಮಾರು ವರ್ಷಗಳಿಂದ5000ಕ್ಕೂಹೆಚ್ಚು ಉರಗ ಮತ್ತು ವನ್ಯಜೀವಿ ಜೀವಿಗಳನ್ನುರಕ್ಷಿಸುತ್ತಾ, ಅರಣ್ಯ ಇಲಾಖೆಗೆ ಸಹಾಯ ಮಾಡುತ್ತಿರುವ ಸ್ವಯಂಸೇವಕ ಸರ್ಪ ಮಿತ್ರ ಕುದರುಗುಂಡಿ ವೈದ್ಯ ಮಹೇಶ್ ಕುಮಾರ್ ಮತ್ತು ಇಲಾಖೆಯ ಕಾರ್ಯವನ್ನು ಶ್ಲಾಘಿಸಿದರು.

ಸರ್ಪ ಮಿತ್ರ ವೈದ್ಯ ಕುದರುಗುಂಡಿ ಮಹೇಶ್ ಕುಮಾರ್ 988022835

Leave a Reply

Your email address will not be published. Required fields are marked *

error: Content is protected !!