ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ಎಲ್ಲಾ ವೃಂದದ ನೌಕರರ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಮಂಡ್ಯ ಜಿಲ್ಲಾ ಸಮಿತಿ ರವರ ನೇತೃತ್ವದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಆರ್.ಡಿ.ಪಿ.ಆರ್ ಕುಟುಂಬದ ಸದಸ್ಯರು ಮಂಡ್ಯ ನಗರದ ಜಿಲ್ಲಾ ಪಂಚಾಯತ್ ಕಛೇರಿ ಎದುರು ೨ನೇ ದಿನವೂ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಸಿದ್ದು,ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಬಳಿ ಅಕ್ಟೋಬರ್ 7 ರಂದು ಪ್ರಾರಂಭವಾದ ಧರಣಿ 2ನೇ ದಿನಕ್ಕೆ ಕಾಲಿಟ್ಟಿದು, ತಮ್ಮ ವಿವಿಧ ಬೇಡಿಕೆಗಳು ಈಡೇರುವವರೆಗೂ ಧರಣಿ ಮುಂದುವರೆಸುತ್ತೇವೆ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಟಿ.ಎ.ಪ್ರಶಾಂತ್ ಬಾಬು , ಪಿಡಿಒ ಮತ್ತು ಕಾರ‍್ಯದರ್ಶಿ ಕನಿಷ್ಠ ಮೂರ‍್ನಾಲ್ಕು ವರ್ಷ ಒಂದೇ ಪಂಚಾಯಿತಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಇದರಿಂದ ಪಂಚಾಯಿತಿ ಅಭಿವೃದ್ಧಿಯಾಗಲಿದೆ. ಕೇರಳ ಮಾದರಿಯಲ್ಲಿ ವೇತನ, ಗೌರವಧನ ನೀಡಬೇಕು. ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಶಿಷ್ಟಾಚಾರದ ವ್ಯಾಪ್ತಿಗೆ ಬರಬೇಕು. ಸರಕಾರಿ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆಯ ಫಲಕಗಳಲ್ಲಿ ಅವರ ಹೆಸರನ್ನು ಹಾಕಬೇಕು. ಒಟ್ಟಾರೆ ಪಂಚಾಯಿತಿ ನೌಕರರ ಸಮಸ್ಯೆಗಳಿಗೆ ಸರಕಾರ ಕಿವಿಯಾಗಬೇಕೆಂದು ಆಗ್ರಹಿಸಿದರು.

ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ರಾಜ್ಯ ಸಂಚಾಲಕ ಉಪ್ಪರಕನಹಳ್ಳಿ ನಾಗೇಶ್ ಮಾತನಾಡಿ , ಪ್ರತಿಭಟನೆಯು ೨ನೇ ದಿನಕ್ಕೆ ಕಾಲಿಟ್ಟಿದ್ದು ಸರ್ಕಾರದ ಗಮನಕ್ಕೆ ತಲುಪಿದ್ದೆ , ನಾವು ಮೂಲಭೂತ ಸೌಕರ್ಯದ ಕೆಲಸವನ್ನು ನಿರ್ವಹಿಸಿ, ಆನ್ಲೈನ್ ಸೇವೆಗಳನ್ನು ಸ್ಥಗಿತ ಗೊಳಿಸಿ ನಂತರ ಪ್ರತಿಭಟನಾ ಸ್ಥಳಕ್ಕೆ ಬಂದು ಸೇರುತ್ತೇವೆ. ನಮ್ಮ ಪ್ರತಿಭಟನೆಯನ್ನು ಸರ್ಕಾರ ಹಾಗೂ ಜನಪ್ರತಿನಿದಿಗಳು ಹಗುರವಾಗಿ ತೆಗೆದುಕೊಳ್ಳಬಾರದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಯನ್ನು ಜನರಿಗೆ ನೇರವಾಗಿ ತಲುಪಿಸುವಲ್ಲಿ ನಮ್ಮ ಪಾತ್ರ ಹೆಚ್ಚಿದೆ ಆದ್ದರಿಂದ ನಮ್ಮ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕೆಂದು ಒತ್ತಾಹಿಸಿದರು.
ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟ ಜಿಲ್ಲಾ ಶಾಖೆಯ ಉಪಾಧ್ಯಕ್ಷೆ ಸುವರ್ಣವತಿ ಮಾತನಾಡಿ , ಒಂದೇ ಗ್ರಾಮ ಪಂಚಾಯಿತಿಯಲ್ಲಿ ೨ ಪಿಡಿಒ ಗಳು ಕೆಲಸ ನಿರ್ವಹಿಸುತ್ತಿರುವುದರಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿದೆ , ೧೫ನೇ ಹಣ ಕಾಸಿನ ಯೋಜನೆಯ ಅನುದಾನಗಳು ಕೂಡ ಇನ್ನು ಬಿಡುಗಡೆಯಾಗಿಲ್ಲ , ಸಾರ್ವಜನಿಕರು ಅಭಿವೃದ್ಧಿ ಕೆಲಸಗಳು ಹಾಗದ್ದೆ ಇದ್ದಾಗ ಪಂಚಾಯಿತಿ ಬಗ್ಗೆ ನಂಬಿಕೆ ಕಳೆದು ಕೊಂಡಿದ್ದಾರೆ ಆದ್ದರಿಂದ ಸರ್ಕಾರವು ನಮ್ಮ ಹಲವು ಸಮಸ್ಯೆಗಳ ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರದೀಪ್ ಸಿದ್ದೇಗೌಡ , ಮಹೇಶ್ ,ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ಎಲ್ಲಾ ವೃಂದದ ನೌಕರರ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಮಂಡ್ಯ ಜಿಲ್ಲಾ ಸಮಿತಿಯ ಎಲ್ಲ ಸದಸ್ಯರು ಹಾಜರಿದ್ದರು.


Leave a Reply