Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಮಾಹಿತಿ ಹಕ್ಕು ಕಾಯ್ದೆಗೆ 19 ರ ಸಂಭ್ರಮ

ಮಾಹಿತಿ ಹಕ್ಕು ಕಾಯ್ದೆಯು 2005 ರ ಜೂನ್ 15 ರಂದು ಭಾರತ ಸಂಸತ್ತಿನಲ್ಲಿ ಅಂಗೀಕೃತಗೊಂಡಿತು ಮತ್ತು 2005ರ ಅಕ್ಟೋಬರ್ 12 ರಂದು ಜಾರಿಗೆ ಬಂದಿತು. ಇದರಿಂದ ಭಾರತದಲ್ಲಿ ಜನತೆ ತಮ್ಮ ಹಕ್ಕಿನಂತೆ ಸರ್ಕಾರಿ ಮಾಹಿತಿಯನ್ನು ಪಡೆಯುವ ಅವಕಾಶವನ್ನು ಪಡೆದುಕೊಂಡರು.

RTI ಕಾಯ್ದೆಯು ಜನರಿಗೆ ಸರ್ಕಾರದ ನಿರ್ಧಾರಗಳ ಬಗ್ಗೆ ಮಾಹಿತಿ ಪಡೆಯಲು, ತಮ್ಮ ಹಕ್ಕುಗಳನ್ನು ರಕ್ಷಿಸಲು, ಮತ್ತು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸಲು ಸಹಾಯ ಮಾಡಿದೆ.ಈ ಕಾನೂನಿನಿಂದ ಜನರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿದ್ದಾರೆ, ಮತ್ತು ಇದರಿಂದ ಸರಕಾರದ ಕೆಲಸ ಕಾರ್ಯಗಳಲ್ಲಿ ಹೆಚ್ಚು ಪಾರದರ್ಶಕತೆ ಬಂದಿದೆ.

RTI ಮೂಲಕ ಕಂದಾಯ ಹಂಚಿಕೆಗಳು, ಯೋಜನೆಗಳ ಅನುಷ್ಠಾನ, ಮತ್ತು ಆರ್ಥಿಕ ವ್ಯವಹಾರಗಳ ಬಗ್ಗೆ ಮಾಹಿತಿ ಪಡೆಯಲು ಜನರಿಗೆ ಅವಕಾಶ ಸಿಕ್ಕಿದೆ. RTI activists ಮತ್ತು ಸಮಾಜ ಸೇವಕರ ಸಹಕಾರದಿಂದ ಹಲವಾರು ಅಕ್ರಮಗಳನ್ನು ಬಹಿರಂಗಪಡಿಸಲಾಗಿದೆ.
RTI ಕಾಯ್ದೆಯು ಜಾರಿಯಾದ 19 ವರ್ಷಗಳ ನಂತರವೂ, ನಮ್ಮ ದೇಶದ ಹಲವಾರು ಭಾಗಗಳಲ್ಲಿ ಜನರು ಇದರ ಬಳಕೆಯ ಬಗ್ಗೆ ಮಾಹಿತಿ ಹೊಂದಿಲ್ಲ. RTI ಕಾಯ್ದೆಯ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ.

ಸಾರ್ವಜನಿಕರು RTI ಕಾಯ್ದೆಯನ್ನು ಸರಿಯಾಗಿ ಬಳಸಲು ಮತ್ತು ಅರ್ಜಿಗಳನ್ನು ಹಾಜರು ಮಾಡಲು ಸಹಾಯವಾಗುವಂತೆ ಸಹಾಯ ಕೇಂದ್ರಗಳು ಮತ್ತು ಸರ್ಕಾರಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಮಾಹಿತಿ ಹಕ್ಕು ಅರ್ಜಿಗಳಿಗೆ, ಆಯಾ ಇಲಾಖೆಗಳು ಸರಿಯಾದ ಸಮಯದಲ್ಲಿ ಉತ್ತರಿಸದೇ ನಿರ್ಲಕ್ಷ ವಹಿಸುತ್ತಿರುವುದು ಕಾನೂನಿನ ಉದ್ದೇಶವನ್ನು ಬುಡಮೇಲು ಮಾಡುತ್ತಿದೆ.

RTI activists ಮೇಲೆ ಕೆಲವು ಕಡೆಗಳಲ್ಲಿ ದೌರ್ಜನ್ಯಗಳು ಮತ್ತು ತೊಂದರೆಗಳು ಹೆಚ್ಚಾಗಿವೆ. ಸರ್ಕಾರದಿಂದ ಇವರಿಗೆ ಹೆಚ್ಚಿನ ರಕ್ಷಣೆ ನೀಡಬೇಕು.ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರ ಮತ್ತು ಸಾಮಾಜಿಕ ಹೋರಾಟಗಾರರ ಪರಿಶ್ರಮದ ಪರಿಣಾಮವಾಗಿ, ದೇಶದಲ್ಲಿ ದೂರುಗಳು ಮತ್ತು ಕಾನೂನು ಕ್ರಮಗಳ ಮೂಲಕ ಪಾರದರ್ಶಕತೆಯನ್ನು ಹೆಚ್ಚಿಸಲಾಗಿದೆ.ಇದು ಕಾನೂನಿನ ಮೇಲೆ ನಂಬಿಕೆ ಹೆಚ್ಚಿಸಲು ಸಹಾಯ ಮಾಡುತ್ತದೆ.

ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತಿಗಳು ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ RTI ಅರ್ಜಿಗಳನ್ನು ಸ್ವೀಕರಿಸಲು ಮತ್ತು ನಿಗದಿತ ಸಮಯದಲ್ಲಿ ಅರ್ಜಿಗಳಿಗೆ ಉತ್ತರಿಸುವ ನಿರ್ಣಯಗಳನ್ನು ಕೈಗೊಳ್ಳುವುದು RTI ಕಾಯ್ದೆಯ 19 ವರ್ಷಗಳ ಸಂಭ್ರಮವು ನಮ್ಮ ದೇಶದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ, ಮತ್ತು ಸಾಮಾಜಿಕ ನ್ಯಾಯದ ಕಡೆ ಒಂದು ದೊಡ್ಡ ಹೆಜ್ಜೆಯಾಗಿದೆ.

ಆದರೆ ಇನ್ನೂ ಹಲವಾರು ಸವಾಲುಗಳು ಮತ್ತು ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ, RTI ಕಾಯ್ದೆಯ ಬಗ್ಗೆ ಜನರ ಜಾಗೃತಿ ಮತ್ತು ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಹೆಚ್ಚು ಪ್ರಯತ್ನ ಮಾಡಬೇಕಾಗಿದೆ.ಈ ನಿಟ್ಟಿನಲ್ಲಿ, ಇನ್ನಷ್ಟು ಸಮರ್ಪಕ ಕ್ರಮಗಳು ಮತ್ತು ಮೇಲ್ವಿಚಾರಣೆಯ ಅಗತ್ಯವಿದ್ದು,ಅಂತಹ ವಿಷಯಗಳನ್ನು ನಿಯಂತ್ರಿಸಲು ಜನರು RTI ಫೈಲಿಂಗ್ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಹೊಂದಬೇಕು.

← Back

Thank you for your response. ✨

Leave a Reply

Your email address will not be published. Required fields are marked *

error: Content is protected !!