
ಮಂಡ್ಯ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಡಿಓ ಸಿ.ರುದ್ರಯ್ಯ ವಿರುದ್ಧ ಹಲವು ಅಕ್ರಮಗಳ ಬಗೆಗೆ ದೂರು ದಾಖಲಿಸಿದ್ದು, ಅಕ್ರಮಗಳು ಸಾಭೀತಾದರೂ ಕ್ಷೇತ್ರ ಶಾಸಕರಾಗಲಿ, ಸರ್ಕಾರವಾಗಲಿ ಹಿಡಿಗೊ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗದ ಕಾರಣ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ(ಟಿ.ಕೆ.ಹಳ್ಳಿ)ಯಲ್ಲಿ ಕುಡಿಯುವ ನೀರಿನ ಯೋಜನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಕಪ್ಪು ಭಾವುಟ ಪ್ರದರ್ಶನ ಮಾಡಲು ನಿರ್ಧರಿಸಿದ್ದೇವೆ , ಸದರಿ ಪಿಡಿಒ ವಿರುದ್ಧ ಇನ್ನಷ್ಟು ಅಕ್ರಮ ಪ್ರಕರಣಗಳಿದ್ದು, ಈ ಪ್ರಕರಣಗಳ ಸಾಕ್ಷ್ಯ ನಾಶ ಮಾಡುವ ಸಾಧ್ಯತೆಗಳಿವೆ. ಆದರೂ ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳದೇ ಅದೇ ಪಂಚಾಯಿತಿಯಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿರುವುದು ಸಾಕ್ಷ್ಯ ನಾಶದ ಹುನ್ನಾರವಾಗಿದೆ. ಇವರ ವಿರುದ್ಧ ದೂರುಗಳು ಹೆಚ್ಚಾದ ಹಿನ್ನಲೆ ಜಿಲ್ಲಾಧಿಕಾರಿಗಳು ಬೇರೆಡೆಗೆ ವರ್ಗ ಮಾಡಿದ್ದರೂ, ಪಿಡಿಓ ಸಿ.ರುದ್ರಯ್ಯ ಮತ್ತೆ ಅದೇ ಗ್ರಾ.ಪಂಗೆ ಬಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದರು. ಹೈಕೋರ್ಟಿನಲ್ಲೂ ಈ ಸಂಬಂಧ ತನಿಖೆ ಮಾಡುವಂತೆ ಜಿ.ಪಂ ಸಿಇಓಗೆ ಆದೇಶ ನೀಡಿದ್ದರೂ ತನಿಖೆ ಮಾಡದೇ ಈತನಿಗೆ ಜಿ.ಪಂ ಸಿಇಓ ಅವರೇ ಬೆನ್ನೆಲುಬಾಗಿದ್ದಾರೆ. ಸಿಇಓ ಅವರು ಕ್ರಮ ತೆಗೆದುಕೊಳ್ಳಲು ಅಕ್ಟೋಬರ್ ೩೧ರವರೆಗೆ ಕಾಲಾವಕಾಶವಿದೆ. ಪಿಡಿಓ ಅಕ್ರಮಗಳಿಗೆ ಶಾಸಕರ ಸಹಮತವೂ ಇದೆ ಎಂದು ಗಂಭೀರ ಆರೋಪ ಮಾಡಿದರು.
ಗೋಷ್ಠಿಯಲ್ಲಿ ಜೆಡಿಎಸ್ ಎಸ್ಸಿ,ಎಸ್ಟಿ ಅಧ್ಯಕ್ಷ ಕುಮಾರಸ್ವಾಮಿ,ದಲಿತ ಮುಖಂಡರಾದ ನಾಗರಾಜು , ರೈತ ಮುಖಂಡ ಅಣ್ಣಯ್ಯ , ನಾಗೇಂದ್ರ ಶಾಗ್ಯ, ಕೆ.ಆರ್.ರವೀಂದ್ರ ಹಾಜರಿದ್ದರು.

Leave a Reply