Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಬೂದನೂರು ಉತ್ಸವ – 2026 : ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜನೆ

ಮಕ್ಕಳು ಪಠ್ಯಪುಸ್ತಕಗಳ ಜೊತೆ ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ,ಸಂಗೀತ,ಕ್ರೀಡಾ ಆಶಕ್ತಿ ಯನ್ನು ಬೆಳೆಸಿಕೊಳ್ಳಬೇಕು ಜಿಲ್ಲೆಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಹೇಳಿದರು.
ಅವರು ಹೊಸ ಬೂದನೂರು ಗ್ರಾಮದ ಶ್ರೀ ಕಾಶಿ ವಿಶ್ವನಾಥ ಮತ್ತು ಅನಂತ ಪದ್ಮನಾಭ ಆವರಣದಲ್ಲಿ ಬೂದನೂರು ಉತ್ಸವ – 2026″ ಅಂಗವಾಗಿ ಏರ್ಪಡಿಸಲಾಗಿದ್ದ  ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೂದನೂರುನಲ್ಲಿ 12ನೇ ಶತಮಾನದಲ್ಲಿ ಕಾಶಿನಾಥೇಶ್ವರ ದೇವಾಲಯ ನಿರ್ಮಾಣವಾಗಿದ್ದು ಬೂದನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಜನರಿಗೆ ಪರಿಚಯಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಳೆದ ಬಾರಿ ಜಿಲ್ಲೆಯಲ್ಲಿ 19 ಸಾವಿರ ವಿದ್ಯಾರ್ಥಿಗಳು ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಬರೆದಿದ್ದು ರಾಜ್ಯದಲ್ಲಿ 12 ಸ್ಧಾನದಲ್ಲಿ ಮಂಡ್ಯ ಜಿಲ್ಲೆ ಬಂದಿತ್ತು.

ಜಿಲ್ಲೆಯಲ್ಲಿ ಕಳೆದ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 69% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಮರು ಪರೀಕ್ಷೆಯಲ್ಲಿ ಒಟ್ಟು ಶೇಕಡಾ 72 % ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.

ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ 83,000 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸಿ ಅದರಲ್ಲಿ 33 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣ ಹೊಂದಿದ್ದರು.
ವಿದ್ಯಾರ್ಥಿಗಳು ಗಣಿತ ಮತ್ತು ಆಂಗ್ಲ (ಇಂಗ್ಲಿಷ್ )ವಿಷಯದಲ್ಲಿ ಹೆಚ್ಚು ಅನುತ್ತೀರ್ಣವಾಗುತ್ತಿದ್ದು ಶಿಕ್ಷಕರು ವಿದ್ಯಾರ್ಥಿಗಳಿಗೆ ಗಣಿತ ಮತ್ತು ಇಂಗ್ಲಿಷ್ ವಿಷಯಗಳಿಗೆ ಹೆಚ್ಚು ಒತ್ತು ನೀಡಬೇಕು. ಅಧಿಕಾರಿಗಳು ಪೋಷಕರು ಮತ್ತು ಶಿಕ್ಷಕರ ಜೊತೆ ಸಭೆ ಮಾಡಿ ಉತ್ತಮ ಫಲಿತಾಂಶವನ್ನು ಜಿಲ್ಲೆಗೆ ತರಬೇಕು ಎಂದು ಸೂಚಿಸಿದರು



ಜಿಲ್ಲಾಧಿಕಾರಿ ಡಾ. ಕುಮಾರ್  ಮಾತನಾಡಿ ಮಕ್ಕಳ ಪ್ರತಿಭೆಯನ್ನು ಪೋಷಕರು ಗುರುತಿಸಬೇಕು. ಚಿತ್ರಕಲೆ ಎಂಬುದು ಪ್ರತಿಯೊಂದು ಮಗುವಿನಲ್ಲೂ ಹುಟ್ಟಿನಿಂದಲೇ ಬರುವಂತಹ ಕಲೆ. ಮಕ್ಕಳು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಒಳ್ಳೆಯ ವೇದಿಕೆಯಾಗಿದೆ ಎಲ್ಲರೂ ಮುಕ್ತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಹೇಳಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ ರವರು ಮಾತನಾಡಿ ಬೂದನೂರಿನ ಇತಿಹಾಸ ಮತ್ತು ನಿಸರ್ಗದ ಚಿತ್ರಣ ಮತ್ತು ಜಿಲ್ಲೆಯ ಐತಿಹಾಸಿಕ ಸ್ಥಳಗಳ ಮೇಲೆ ಅರಿವು ಮೂಡಿಸುವಂತಹ ಕಲಾಚಿತ್ರಗಳನ್ನು
ಬಿಡಿಸುವುದರ ಜೊತೆ ಬೂದನೂರು ಉತ್ಸವದಲ್ಲಿ ಶಾಲಾ ಮಕ್ಕಳ ಕಲೆ ಪ್ರತಿಭೆಯನ್ನು ಅನಾವರಣಗೊಳ್ಳಲು ಮಕ್ಕಳಿಗೆ ಅವಕಾಶವನ್ನು ಕಲ್ಪಿಸಿದೆ. ಮಕ್ಕಳು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.
ಎಸ್.ಎಸ್.ಎಲ್.ಸಿ ಪರೀಕ್ಷೆ ಇರುವುದರಿಂದ ಮಕ್ಕಳು ಆರೋಗ್ಯದ ಕಡೆ ಗಮನ ಹರಿಸಿಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಾಸಕರಾದ ಪಿ. ರವಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಶೋಭಾ ರಾಣಿ,ಮನ್ ಮುಲ್ ಅಧ್ಯಕ್ಷ ಶಿವಕುಮಾರ್, ತಹಶೀಲ್ದಾರ್ ವಿಶ್ವನಾಥ್, ಕಾರ್ಯ ನಿರ್ವಾಹಕ ಅಧಿಕಾರಿಲೋಕೇಶ್ ಮೂರ್ತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ವಾಮಿ ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!