Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಗ್ಯಾಸ್ ಕೊಡದಿದ್ದರೆ ಕಂಟ್ರೋಲ್ ರೂಂ ಸಂಪರ್ಕಿಸಿ

ಮಂಡ್ಯ: ಜಿಲ್ಲೆಯ ಗೃಹ ಬಳಕೆದಾರರು ಅವಧಿ ನಂತರ ಬುಕ್ಕಿಂಗ್ ಮಾಡಿಯೂ ವಿತರಕರು ಅನಿಲ ನೀಡದಿದ್ದಲ್ಲಿ ಕಂಟ್ರೋಲ್ ರೂಂ ದೂ.ಸಂ 08232-2204655 ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ. ಮಧ್ಯಪ್ರಾಚ್ಯ ದೇಶ ಗಳಲ್ಲಿ ಉಂಟಾಗಿರುವ ಯುದ್ಧದ ಬಿಕ್ಕಟ್ಟಿನಿಂದಾಗಿ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದಾಗಿ ಸಾರ್ವಜನಿಕರು ಗೊಂದಲ ಮತ್ತು ಆಂತಕಕ್ಕೆ ಒಳಗಾಗುತ್ತಿದ್ದಾರೆ.

ಈ ಬಗ್ಗೆ ಅನಿಲ ಕಂಪನಿ ವಿತರಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗೃಹ ಬಳಕೆದಾರ ರಿಗೆ ಸಿಲಿಂಡರ್‌ಗಳನ್ನು ಮತ್ತು ಕಾರ್ಯನಿರ್ವಹಿಸುತ್ತಿರುವ ಸರ್ಕಾರದ ಅನುದಾನಿತ ಹಾಸ್ಟೆಲ್‌, ಅಕ್ಷರ ದಾಸೋಹ ಸಂಸ್ಥೆ, ಆಸ್ಪತ್ರೆ, ಮಧ್ಯಾಹ್ನ ಉಪಹಾರ ಯೋಜನೆಯಡಿ ಆಹಾರ ವಿತರಿಸುವ ಸಂಸ್ಥೆ, ಅಂಗನವಾಡಿಗೆ ಕಡ್ಡಾಯವಾಗಿ ಆದ್ಯತೆ ಮೇಲೆ ವಾಣಿಜ್ಯ ಬಳಕೆ ಸಿಲಿಡರ್‌ಗಳನ್ನು ಯಾವುದೇ ಕೊರತೆಯಾದಂತೆ ಸರಬರಾಜು ಮಾಡಲು ಅನಿಲ
ಸರಬರಾಜು ಕಂಪನಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ತಿಳಿಸಿದ್ದಾರೆ.

ಅಲ್ಲದೇ, ಗೃಹ ಬಳಕೆದಾರರಿಗೆ ಸಮರ್ಪಕವಾಗಿ ಗೃಹ ಬಳಕೆ ಸಿಲಿಂಡರ್‌ಗಳನ್ನು ವಿತರಿಸುವ ಹಿನ್ನಲೆಯಲ್ಲಿ ಗ್ರಾಮಾಂತರ ಪ್ರದೇಶಕ್ಕೆ ಬುಕ್ಕಿಂಗ್ ಅವಧಿಯನ್ನು 45 ಮತ್ತು ನಗರ ಪ್ರದೇಶಕ್ಕೆ ಬುಕಿಂಗ್ ಅವಧಿಯನ್ನು 25 ದಿನಕ್ಕೆ ನಿಗದಿಪಡಿಸಲಾಗಿದೆ ಎಂದು ಅನಿಲ ಕಂಪನಿ ಅಧಿಕಾರಿಗಳು ತಿಳಿಸಿರುತ್ತಾರೆ.

ಆದ್ದರಿಂದ ಗೃಹ ಬಳಕೆದಾರರು ಸಹಕರಿಸಬೇಕು ಹಾಗೂ ಯಾವುದೇ ಆತಂತಕ್ಕೆ ಒಳಗಾಗಿ ತುರ್ತು ಅನಗತ್ಯ ಬುಕ್ಕಿಂಗ್ ಮಾಡಬಾರದು ಹಾಗೂ ಅನಿಲ ವಿತರಕ ಏಜೆನ್ಸಿಗಳಲ್ಲಿ ಸಾಲುಗಟ್ಟಿ ನಿಲ್ಲಬಾರದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!