
ಈ ಹಿಂದೆ ಇಂಡುವಾಳು ಗ್ರಾಪಂ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿದ್ದ ಸಿದ್ದರಾಜು, ದಯಾನಂದ, ಕಾರ್ಯದರ್ಶಿ ಮರಿಲಿಂಗಯ್ಯ ಹಾಗೂ ದ್ವಿತೀಯ ದರ್ಜೆ ಸಹಾಯಕಿ ರಾಣಿ ಅಮಾನತುಗೊಂಡ ಅಧಿಕಾರಿಗಳಾಗಿದ್ದಾರೆ.
ಇವರು ಇ-ಸ್ವತ್ತು ನಮೂನೆ 9/11 ಎ ವಿತರಿಸುವಲ್ಲಿ ಕರ್ತವ್ಯಲೋಪ ಎಸಗಿರುವುದು ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.ಅಮಾನತು ಗೊಂಡವರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಲಾಗಿದೆ. ಈ ಹಿನ್ನೆಲೆ ಯಲ್ಲಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರಸ್ಥಾನ ತೊರೆಯುವಂತಿಲ್ಲ ಎಂದು ಸೂಚಿಸಲಾಗಿದೆ. ಇದಲ್ಲದೆ, ಹಿಂದೆ ಪಿಡಿಒಗಳಾಗಿದ್ದ ಯೋಗೇಶ್ ಮತ್ತು ವಿಶಾಲಮೂರ್ತಿ ಎಂಬುವರನ್ನು ಅಮಾನತುಗೊಳಿಸಿ ಜಿಪಂ ಸಿಇಒ ಈ ಮೊದಲೇ ಆದೇಶಿಸಿದ್ದರು. ಮತ್ತೊಬ್ಬ ಪಿಡಿಒ ಬಿ.ವಿ.ಸೋಮು ನಿವೃತ್ತರಾಗಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆಗೆ ಸೂಚಿಸಲಾಗಿದೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐವರನ್ನು ಅಮಾನತುಗೊಳಿಸಲಾಗಿದ್ದು, ಒಬ್ಬರು ನಿವೃತ್ತ ಪಿಡಿಒ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.
ಕಡತ ನಾಪತ್ತೆ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕೆ.ಸಿ.ಎಸ್.ಆರ್. ನಿಯಮಗಳನ್ವಯ ಶಿಸ್ತುಕ್ರಮ ಜರುಗಿಸಲಾಗಿದ್ದು, ಈಗಾಗಲೇ ಅಮಾನತು ಗೊಂಡಿದ್ದ ಇಬ್ಬರು ಪಿಡಿಒ ವಿರುದ್ಧ ಇಲಾಖಾ ವಿಚಾರಣೆಗೆ ಸೂಚಿಸಲಾಗಿದೆ. ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರನ್ನು ಅಮಾನತು ಮಾಡ ಲಾಗಿದ್ದು, ನಿವೃತ್ತಿ ಹೊಂದಿರುವ ಒಬ್ಬ ನೌಕರರ ವಿರುದ್ಧ ವಿಳಂಬಕ್ಕೆ ಆಸ್ಪದವಿಲ್ಲದೆ ಇಲಾಖಾ ವಿಚಾರಣೆ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಕೆ.ಆರ್.ನಂದಿನಿ ಸಿಇಒ.ಮಂಡ್ಯ ಜಿಪಂ

Leave a Reply