Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಲಂಚ ಮತ್ತು ಭ್ರಷ್ಟಾಚಾರ ನಿಗ್ರಹಿಸಲು ಯುವ ಪೀಳಿಗೆಗೆ ಕಾನೂನಿನ ಅರಿವು ಮೂಡಿಸಬೇಕು – ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ

ಸಮಾಜದಲ್ಲಿ ನಡೆಯುತ್ತಿರುವ ಲಂಚ ಮತ್ತು ಭ್ರಷ್ಟಾಚಾರ ನಿಗ್ರಹಿಸಲು ಯುವ ಪೀಳಿಗೆಗೆ ಕಾನೂನಿನ ಅರಿವು ಮೂಡಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಶ್ರೀಯುತ ಸಂತೋಷ್ ಹೆಗ್ಡೆ ಯವರು ಹೇಳಿದರು.

ಅವರು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಮ್ಮಿಕೊಂಡಿದ್ದ ಮಾಹಿತಿ ಹಕ್ಕು ದಿನಾಚರಣೆ ಹಾಗೂ ಸಂಘಟನೆಯ 5 ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯುವಕರು ಈ ಭ್ರಷ್ಟ ವ್ಯವಸ್ಥೆ ವಿರುದ್ದ ಪ್ರಶ್ನೆ ಮಾಡುವ ಅರಿವನ್ನು ಯುವಕರು ಬೆಳೆಸಿಕೊಳ್ಳ ಬೇಕು. ರಾಜಕಾರಣಿ ಮಕ್ಕಳು ರಾಜಕಾರಣಿ ಗಳು ಆಗುವುದು ನಿಲ್ಲಬೇಕು. ಸಮಾಜದ ಬಗ್ಗೆ ಕಾಳಜಿ ಇರುವ ವ್ಯಕ್ತಿಗಳು ಮಾತ್ರ ರಾಜಕಾರಣದಲ್ಲಿ ಉಳಿಯಬೇಕು. ಶಿಕ್ಷಣದ ಜೊತೆಗೆ ಉತ್ತಮ ಸಮಾಜ ಕಟ್ಟುವಲ್ಲಿ ಯುವಕರು ಮುಂದಾಗಬೇಕು ಎಂದರು.

ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸಮಾಜದಲ್ಲಿನ ಭ್ರಷ್ಟಚಾರ ತಡೆಗಟ್ಟಲು ಗ್ರಾಮ ಪಂಚಾಯತಿ ಯಿಂದ ಪ್ರಾರಂಭ ಮಾಡಿ ವಿಧಾನ ಸೌದ ವರೆಗೆ ಭ್ರಷ್ಟ ಚಾರ ನಿರ್ಮೂಲನೆ ಅಭಿಯಾನ ಶುರು ಆಗಬೇಕು. ಹಾಗೂ ಸಾಮಾಜಿಕ ಹೋರಾಟಗಾರರಿಗೆ, ಮಾಹಿತಿ ಬೆಟ್ಟಲ್ಲಿಕ್ಕು ಕಾರ್ಯಕರ್ತರು ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕ ಹೋರಾಟ ಮಾಡುವುದರ ಮುಕಾಂತರ ಭ್ರಷ್ಟಚಾರದ ವಿರುದ್ದ ದ್ವನಿ ಆಗಬೇಕು ಎಂದು ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ಮಾಹಿತಿ ಹಕ್ಕು ಆಯೋಗದಿಂದ ಅಧಿಕಾರಿಗಳಿಗೆ ದಂಡ ಹಾಕಿಸಿದ ಸಾಮಾಜಿಕ ಕಾರ್ಯಕರ್ತರಿಗೆ ‘ವಿಚಾರ ಕ್ರಾಂತಿ ರತ್ನ ‘ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಹಿತಿ ಹಕ್ಕು ಅಧ್ಯಾಯನ ಕೇಂದ್ರದ ವೀರೇಶ್ ಬೆಳ್ಳೂರ್,ಸಂಸ್ಥಾಪಕರಾದ ಹೆಚ್ ಜಿ ರಮೇಶ್ ಕುಣಿಗಲ್, ರಾಜ್ಯಾಧ್ಯಕ್ಷರಾದ ಚೆನ್ನಯ್ಯ ಎಂ ವಸ್ತ್ರದ್, ಸಂಘಟನೆಯ ಓಂಕಾರಪ್ಪ, ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!