Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಮಂದಗೆರೆ :  ಗ್ರಾ.ಪಂ ಅವಧಿ ಮುಗಿದ
ನಂತರ ಬಿಲ್ ಪಾಸ್…!!

ಮಂಡ್ಯ : ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅವಧಿ ಮುಗಿದ ನಂತರವೂ 3.70 ಲಕ್ಷ ರು.ಗೂ ಹೆಚ್ಚು
ಹಣವನ್ನು ನಿಯಮಬಾಹೀರವಾಗಿ ಏಜೆನ್ಸಿಯವರಿಗೆ ಪಾವತಿಸಿರುವ ಪ್ರಕರಣ ಕೆ.ಆರ್‌.ಪೇಟೆ
ತಾಲೂಕು ಮಂದಗೆರೆ ಗ್ರಾಮ ಪಂಚಾಯಿತಿಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಮಂದಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿಕ್ಕಮಂದಗೆರೆ ಗ್ರಾಮದ ಸಿ.ಪಿ.ಭರತ್‌ ಅವರು ಕೆ.ಆರ್‌.ಪೇಟೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ ಅವರಿಗೆ ದೂರು ನೀಡಿದ್ದಾರೆ.
ಕೆ.ಆರ್‌.ಪೇಟೆ ತಾಲೂಕಿನ ಮಂದಗೆರೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅವಧಿಯು 7 ಫೆಬ್ರವರಿ 2026ಕ್ಕೆ ಅಂತ್ಯಗೊಂಡಿದೆ. ಆದರೆ, ಪಂಚಾಯಿತಿ ಪಿಡಿಓ ಮತ್ತು ಅಧ್ಯಕ್ಷರು ಫೆ.8ರಂದು ಮಾದೇಶ್‌ ಏಜೆನ್ಸಿಗೆ 1,78,200 ರು., ಮಾರುತಿ ಎಂಟರ್‌ಪ್ರೈಸಸ್‌ಗೆ 21,350 ರು., ಕಾವೇರಿ ಎಲೆಕ್ಟ್ರಿಕಲ್ಸ್‌ಗೆ 98564 ರು. ಹಾಗೂ ಫೆ.9ರಂದು
ಟಿ.ಎ.ಲೋಕೇಶ ಏಜೆನ್ಸಿಗೆ 81 ಸಾವಿರ ರು.ಹಣವನ್ನು ಪಾವತಿಸಿರುವುದನ್ನು ದಾಖಲೆಗಳ ಸಹಿತ
ಇಓಗೆ ನೀಡಿದ್ದಾರೆ.
ಈ ಗ್ರಾಮ ಸ್ವರಾಜ್‌ನಲ್ಲಿ ಮಾಹಿತಿ ಕಂಡುಬಂದಿರುವುದರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!