Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ರೈತ ಸಂಘದ ಮಂಡ್ಯ ತಾಲೂಕು ಅಧ್ಯಕ್ಷರಾಗಿ ಮಲ್ಲಿಗೆರೆ ಅಣ್ಣಯ್ಯ ನೇಮಕ

ಕರ್ನಾಟಕ ರಾಜ್ಯ ರೈತ ಸಂಘದ ಮಂಡ್ಯ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಮಲ್ಲಿಗೆರೆ ಅಣ್ಣಯ್ಯನವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪು ಗೌಡ ಹೇಳಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯನವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸ್ಕ್ರೀನಿಂಗ್ ಕಮಿಟಿಯ ಸಭೆ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಗೌರವ ಅಧ್ಯಕ್ಷರಾಗಿ ಹೊಳಲು ಗ್ರಾಮದ ಪಟೇಲರಾಮು, ಪ್ರಧಾನ ಕಾರ್ಯದರ್ಶಿಯಾಗಿ ಕೊಮ್ಮೆರಹಳ್ಳಿ ಆನಂದ್ ಕುಮಾರ್, ಖಜೋಂಜಿಯಾಗಿ ಬೂದನೂರು ಪುಟ್ಟಸ್ವಾಮಿ, ಸಂಚಾಲಕರಾಗಿ ಭೂತನ ಹೊಸೂರು ಸಂತೋಷ್, ಉಪಾಧ್ಯಕ್ಷರು ಹಾಗೂ ಸಹ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗಿದೆ. ನೂತನ ಪದಾಧಿಕಾರಿಗಳು ರೈತರ,ಸಾರ್ವಜನಿಕರ ನ್ಯಾಯಪರ ಕೆಲಸಗಳನ್ನು ಮಾಡುವ ಮೂಲಕ ರಾಜ್ಯ ರೈತ ಸಂಘವನ್ನು ಬೆಳೆಸಿ ಎಂದರು.

ನೂತನ ಅಧ್ಯಕ್ಷ ಮಲ್ಲಿಗೆರೆ ಅಣ್ಣಯ್ಯ ಮಾತನಾಡಿ ಸ್ಕ್ರೀನಿಂಗ್ ಕಮಿಟಿ ಸದಸ್ಯರು ಸೇರಿದಂತೆ ರೈತ ಸಂಘದ ಎಲ್ಲಾ ಪ್ರಮುಖರು ಮಂಡ್ಯ ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಿ ಜವಾಬ್ದಾರಿಯನ್ನು ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ನೀಡಿರುವ ಜವಾಬ್ದಾರಿಯನ್ನು ತಾಳ್ಮೆಯಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಹೋಗುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜವರೇಗೌಡ ವಿಜಯ್ ಕುಮಾರ್, ಹನುಮೇಗೌಡ,ರಮೇಶ್, ಲತಾ ಶಂಕರ್ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *

error: Content is protected !!