Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಎಎಸ್ಪಿ ಗಂಗಾಧರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕುಂದು ಕೊರತೆ ಸಭೆ

ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯನ್ನು ಮಂಡ್ಯ ನಗರದ ಮಂಡ್ಯ ಉಪ ವಿಭಾಗದ ಆರಕ್ಷಕ ಉಪಾಧಿಕ್ಷಕರ ಕಚೇರಿಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಏರ್ಪಡಿಸಲಾಗಿತ್ತು.

ಸಭೆಯಲ್ಲಿ 200ಕ್ಕೂ ಹೆಚ್ಚು ದಲಿತ ಮುಖಂಡರು ಹಾಗೂ ಸಮಾಜದವರು ಭಾಗವಹಿಸಿ ದಲಿತ ಜನಾಂಗದವರ ಕುಂದು ಕೊರತೆಯ ಬಗ್ಗೆ ಚರ್ಚಿಸಿದರು. ದಲಿತರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸಭೆಯಲ್ಲಿ ಮಂಡ್ಯ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರಮೇಶ್, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಜಾಯ್ ಆಂತೋನಿ, ಮಹೇಶ್, ಶಿವಪ್ರಸಾದ್ ರಾವ್, ನವೀನ್ ಸುಪೆಕರ್, ಸಂತೋಷ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳಾದ ವೆಂಕಟೇಶ್,ಸುನಿಲ್, ದೀಕ್ಷಿತ್ ಕುಮಾರ್, ರಘುಪ್ರಕಾಶ್,ಕೃಷ್ಣಮೂರ್ತಿ ದಲಿತ ಮುಖಂಡರುಗಳಾದ ವೆಂಕಟಗಿರಿಯಯ್ಯ, ಹುರಗಲವಾಡಿ ರಾಮಯ್ಯ, ಗಂಗರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!