Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಹಳೇಬೂದನೂರಿನ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರದ ಸಿಬ್ಬಂದಿಗಳು ಅಮಾನತು

ಮಂಡ್ಯತಾಲೂಕಿನ ಹಳೇಬೂದನೂರು ಗ್ರಾಮದಲ್ಲಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರದ ಐವರು ಸಿಬ್ಬಂದಿಯನ್ನು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅಮಾನತುಗೊಳಿಸಿ ಸ್ಥಳದಲ್ಲೇ ಆದೇಶ ಹೊರಡಿಸಿದ್ದಾರೆ.

ಕೇಂದ್ರದ ಕಲಾ, ಸುಧಾ, ಕಾವ್ಯ, ಅಂಬಿಕಾ ಮತ್ತು ನಯನ ಅಮಾನತಿಗೆ ಒಳಗಾದವರು. ಆಹಾರ ನಿಗಮದ ಅಧ್ಯಕ್ಷರು ಮತ್ತು ಸದಸ್ಯರು ಪರಿಶೀಲನೆಗೆಂದು ಮಂಗಳವಾರ ಕೇಂದ್ರಕ್ಕೆ ತೆರಳಿದಾಗ ಅಲ್ಲಿ ಸಿಬ್ಬಂದಿಯಲ್ಲಿ ಎರಡು ಗುಂಪು ಗಳಾಗಿ ಕಾರ್ಯನಿರ್ವಹಿಸುತ್ತಿರುವುದು. ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಆರೋಪ-ಪ್ರತ್ಯಾ ರೋಪದಲ್ಲಿ ತೊಡಗಿರುವುದು ಕಂಡುಬಂದಿತು. ಶಿಶು ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ ಸುಮಾರು 22 ಬಾರಿ ಕೇಂದ್ರಕ್ಕೆ ಭೇಟಿ ನೀಡಿದ್ದರೂ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರು. ಎಂದು ಡಾ.ಎಚ್.ಕೃಷ್ಣ ವಿವರಿಸಿದರು. ಕೇಂದ್ರದಲ್ಲಿ ಎಷ್ಟು ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಷ್ಟು ಮಂದಿ ಬಂದಿದ್ದಾರೆ, ಎಷ್ಟು ಜನ ಬಂದಿಲ್ಲ ಎಂಬ ಬಗ್ಗೆ ರಿಜಿಸ್ಟರ್‌ನಿರ್ವಹಣೆ ಮಾಡಿಲ್ಲ. ಎಂಎಸ್‌ಪಿಎಸ್‌ನವರೇ ಅಂಗನವಾಡಿಗಳಿಗೆ ನೀಡಲಾಗುವ ಆಹಾರಪದಾರ್ಥಗಳನ್ನು ಸಿದ್ಧಪಡಿಸಿ ನೀಡಬೇಕು. ಆದರೆ, ಯಂತ್ರ ಕೆಟ್ಟು ನಿಂತಿದೆ ಎಂದು ಹೇಳುತ್ತಿದ್ದಾರೆ. ಕೇವಲ ಪ್ಯಾಕಿಂಗ್ ಮಾಡುವುದಕ್ಕೆ ಇಷ್ಟೊಂದು ಜನರ ಅಗತ್ಯವಿಇಲ್ಲ ಎಂದು ತಿಳಿಸಿದರು.

ಸಿಬ್ಬಂದಿ ಗುಂಪುಗಾರಿಕೆಯನ್ನು ದೂರವಿಟ್ಟು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಅಲ್ಲಿಯವರೆಗೆ ಸಿಬ್ಬಂದಿ ಕೆಲಸಕ್ಕೆ ಬರುವುದು ಬೇಡ. ಅವರು ಒಗ್ಗಟ್ಟಿನಿಂದ ಕರ್ತವ್ಯ ನಿರ್ವಹಿಸುವ ಮನಸ್ಥಿತಿಗೆ ಬಂದಾಗ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಸಿಡಿಪಿಒ ರವರಿಗೆ ಸೂಚಿಸಿದರು.

Leave a Reply

Your email address will not be published. Required fields are marked *

error: Content is protected !!