
ಕುಡಿಯುವ ನೀರು, ಬೀದಿ ದೀಪಗಳ ನಿರವಣಿಗೆ ಸಂಬಂಧಿಸಿದಂತೆ ಸಾಮಗ್ರಿಗಳನ್ನು ಖರೀದಿ ಮಾಡದಿದ್ದರೂ ಖರೀದಿ ಮಾಡಲಾಗಿದೆ ಎಂದು ಕೆಲವು ಏಜೆನ್ಸಿ ಗಳಿಗೆ ತಗ್ಗಹಳ್ಳಿ ಗ್ರಾಮ ಪಂಚಾಯಿತಿಯ ಪ್ರಭಾರ ಪಿಡಿಒ ಶ್ರೀನಿವಾಸಯ್ಯ ಪ್ರಭಾರಿ ಹುದ್ದೆ ವಹಿಸಿಕೊಂಡಿದ್ದ ಮೂರೆ ದಿನದಲ್ಲಿ ಹದಿನೈದನೇ ಹಣಕಾಸು ಯೋಜನೆಯಡಿ ಸಾಮಗ್ರಿಗಳನ್ನು ಖರೀದಿ ಮಾಡಿರುವುದಕ್ಕೆ ಯಾವುದೇ ವೋಚರ್ ಗಳಿಲ್ಲದಿದ್ದರೂ ಆನ್ಲೈನ್ ಪಾವತಿ, ಚೆಕ್ ಗಳ ಮೂಲಕ ₹ 54 ಲಕ್ಷ ಹಣ ಪಾವತಿ ಮಾಡಿರುವುದು ಬೆಳಕಿಗೆ ಬಂದಿತ್ತು . ಗ್ರಾಮಸ್ಥರು ಈ ಕುರಿತು ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ರವರ ಗಮನಕ್ಕೆ ತಂದ ತಕ್ಷಣವೇ ಅವರು ಮಂಡ್ಯ ತಾಲೂಕು ಪಂಚಾಯಿತಿ ಇಓ ಲೋಕೇಶ್ ಮೂರ್ತಿ ಅವರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿ ತನಿಖೆ ಮಾಡುವಂತೆ ಆದೇಶಿಸಿದ್ದರು, ಕೂಡಲೇ ಕಾರ್ಯಕ್ರಮದ ತಾಲೂಕು ಪಂಚಾಯಿತಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಖಾತೆಯಿಂದ ವರ್ಗಾವಣೆಗೊಂಡಿದ್ದ ಸಂಪೂರ್ಣ ಹಣವು ಏಜೆಂಟ್ ಗಳ ಖಾತೆಗೆ ವರ್ಗಾವಣೆಗೊಳದಂತೆ ಗ್ರಾಮ ಪಂಚಾಯಿತಿ ಹಣದ ಖಾತೆಯನ್ನು ತಟಸ್ಥ ಗೊಳಿಸಿ ಹಣ ವರ್ಗಾವಣೆಗೆ ಬ್ರೇಕ್ ಹಾಕಿದ್ದರು. ಅಷ್ಟರಲ್ಲಿ ಒಂಬತ್ತು ಲಕ್ಷದಷ್ಟು ಹಣ ಏಜೆನ್ಸಿ ಗಳಿಗೆ ಪಾವತಿಯಾಗಿತ್ತು.ಉಳಿದ ಹಣವು ಗ್ರಾಮ ಪಂಚಾಯಿತಿ ಖಾತೆಯಲ್ಲಿ ಇತ್ತು. ಅಧಿಕಾರಿಗಳು ಏಜೆನ್ಸಿಗಳ ಖಾತೆಗಳಲ್ಲಿ ಇದ್ದ ಗ್ರಾಮ ಪಂಚಾಯಿತಿ ಹಣವನ್ನು ಬ್ಯಾಂಕುಗಳಿಗೆ ಅಧಿಕಾರಿಗಳು ಪತ್ರ ವ್ಯವಹಾರ ನಡೆಸಿ ವಾಪಸ್ ತರುವಲ್ಲಿ ಯಶಸ್ವಿಯಾಗಿದ್ದರು. ಉಳಿದ ಹಣವು ಎರಡು ಏಜೆನ್ಸಿಗಳಿಂದ 6 ಲಕ್ಷಕ್ಕೂ ಹೆಚ್ಚು ಹಣವು ಗ್ರಾಮ ಪಂಚಾಯಿತಿ ಖಾತೆಗೆ ಜಮೆಯಾಗಿದೆ.
ಈ ಕುರಿತು ಮಂಡ್ಯ ತಾಲೂಕು ಪಂಚಾಯತಿ ಲೋಕೇಶ್ ಮೂರ್ತಿ ಮಾತನಾಡಿ ಹಣ ವರ್ಗಾವಣೆ ಆಗಿರುವ ಕುರಿತು ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆಯಲ್ಲಿ ಸಿಇಓ ರವರ ಮಾರ್ಗದರ್ಶನದಂತೆ ಕ್ರಮ ಕೈಗೊಂಡ ಪರಿಣಾಮ ಲಕ್ಷಾಂತರ ಹಣ ದುರುಪಯೋಗವಾಗುವುದು ತಪ್ಪಿದೆ, ವರ್ಗಾವಣೆಗೊಂಡಿದ್ದ ಹಣದಲ್ಲಿ ಒಂದು ಲಕ್ಷ ಹಣ ಹೊರತು ಪಡಿಸಿ ಉಳಿದ ಉಳಿದ ಹಣ ಗ್ರಾಮ ಪಂಚಾಯಿತಿ ಖಾತೆಗೆ ಮತ್ತೆ ಸೇರಿದೆ. ಈ ಹಣವನ್ನು ಸಾರ್ವಜನಿಕ ಕೆಲಸ ಕಾರ್ಯಗಳ ಉದ್ದೇಶಕ್ಕೆ ನಿಯಮನುಸಾರ ಬಳಸುವಂತೆ ತಗ್ಗಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ಹಣವು ಪೋಲಾಗುವುದನ್ನು ತಡೆದ ಮಂಡ್ಯ ತಾಲೂಕು ಪಂಚಾಯಿತಿ ಅಧಿಕಾರಿಗಳ ಕಾರ್ಯವನ್ನು ಗ್ರಾಮಸ್ಥರು ಪ್ರಶಂಶಿಸಿದ್ದಾರೆ.
ವರದಿ : ಎಂ.ಚಾಮರಾಜು

Leave a Reply