
ಮಂಡ್ಯ: ತಾಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಪ್ರಭಾರಿ ಹುದ್ದೆಯನ್ನು ವಹಿಸಿಕೊಂಡ ಮೂರೇ ದಿನದಲ್ಲಿ 54 ಲಕ್ಷ ರು. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಕರಾಮತ್ತು ಪ್ರದರ್ಶಿ ಸಿದ್ದ ಪಿಡಿಒ ಸಿ.ಶ್ರೀನಿವಾಸ ಯ್ಯ ಅವರನ್ನು ಜಿಪಂ ಸಿಇಓ ನಂದಿನಿ ಕೆಆರ್ ಅಮಾನತುಗೊಳಿಸಿದ್ದಾರೆ.
ಅಲಕೆರೆ ಗ್ರಾಮ ಪಂಚಾಯತಿಯಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಶ್ರೀನಿವಾಸಯ್ಯ ಅವರಿಗೆ ತಗ್ಗಹಳ್ಳಿ ಪಿಡಿಒ ಎಚ್. ಎಸ್.ಲಕ್ಷ್ಮೀ 16 ದಿನಗಳ ಕಾಲ ರಜೆ ಮೇಲೆ ತೆರಳಿದ್ದ ರಿಂದ ಹೆಚ್ಚುವರಿ ಪ್ರಭಾರ ಹುದ್ದೆಯನ್ನು ನೀಡಲಾಗಿತ್ತು. ಈ ಸಮಯದಲ್ಲಿ ಕರ್ತವ್ಯ ಲೋಪವೆಸಗಿ ಹದಿನೈದನೇ ಹಣಕಾಸು ಯೋಜನೆಯಡಿ ಸೋಲಾರ್‌ಲೈಟ್‌ಗಳು, ಪೈಪ್‌ಗಳು ಹಾಗೂ ಎಲೆಕ್ನಿಕ್ ಸಾಮಗ್ರಿ ಗಳನ್ನು ಖರೀದಿ ಮಾಡಿರುವುದಕ್ಕೆ ಯಾವುದೇ ವೋಚರ್‌ಗಳಿಲ್ಲದಿದ್ದರೂ ಆನ್‌ಲೈನ್ ಪಾವತಿ, ಚೆಕ್‌ಗಳ ಮೂಲಕ ಪಂಚಾಯ್ತಿ ಖಾತೆಯಲ್ಲಿದ್ದ 54 ಲಕ್ಷ ರು. ಹಣವನ್ನು ಪಾವತಿ ಮಾಡಿದ್ದರು. ತನಿಖೆ ಸಮಯದಲ್ಲಿ ಸಿ.ಶ್ರೀನಿವಾಸಯ್ಯ ಕರ್ತವ್ಯ ಲೋಪವೆಸಗಿರುವುದು ಸಾಬೀತಾಗಿದ್ದರಿಂದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)ರಡಿ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಪ್ರದತ್ತ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಅದರಂತೆ ತಾಪಂ ಇಒ ಎಸ್.ಎಂ.ಲೋಕೇಶಮೂರ್ತಿ ಅವರು ಮಾ.2ರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಸಿ.ಶ್ರೀನಿವಾಸಯ್ಯ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ. ಸಿ.ಶ್ರೀನಿವಾಸಯ್ಯ ಅಮಾನತ್ತಿನಲ್ಲಿರುವಾಗ ಕರ್ನಾಟಕರ ನಾಗರಿಕ ಸೇವಾ ನಿಯಮಾವಳಿ 1958 ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಆದರೆ, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡದಂತೆ ಸಿ.ಶ್ರೀನಿವಾಸಯ್ಯರವರಿಗೆ ಸೂಚಿಸಲಾಗಿದೆ.

Leave a Reply