Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ವಿಸಿ ನಾಲೆಗೆ ಇಳಿದು, ನೀರು ಪಾಲಾದ ಇಂಜಿನಿಯರ್ ವಿದ್ಯಾರ್ಥಿ

ಇಂಜಿನಿಯರ್  ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಈಜು ಬಾರದೇ ಇದ್ದರೂ ವಿಸಿ ನಾಲೆಗೆ ಇಳಿದು, ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಯಲಿಯೂರು – ಕಾಳೆನಹಳ್ಳಿ ಬಳಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಅನಿಲ್ ಕುಮಾರ್ ಹಾಗೂ ಉಮಾ ದಂಪತಿಯ ಪುತ್ರ ಯಶ್ವಂತ್ (22) ಎಂದು ಗುರುತಿಸಲಾಗಿದೆ.

ಕಾವೇರಿ ಇಂಜಿನಿಯರ್ ಕಾಲೇಜಿನಲ್ಲಿ ಯಶವಂತ್ ಬಿಇ ಓದುತ್ತಿದ್ದ ಯಶ್ವಂತ್‌ ಶನಿವಾರ ಮಧ್ಯಾಹ್ನ ಕಾಲೇಜಿನಿಂದ ಸ್ನೇಹಿತರೊಂದಿಗೆ ವಿಸಿ ನಾಲೆ ಬಳಿ ಬಂದಿದ್ದ ಯಶ್ವಂತ್‌ ಈಜಲು ಇಳಿದಿದ್ದಾನೆ. ಈಜು ಬರದೇ ಹೋದರೂ ನಾಲೆಗೆ ಇಳಿದ ಯಶ್ವಂತ್‌ ಹಾಗೂ ಆತನ ಇಬ್ಬರು ಸ್ನೇಹಿತರು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.

ಇದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ತಕ್ಷಣ ಸಹಾಯಕ್ಕೆ ಮುಂದಾಗಿದ್ದಾರೆ. ಇಬ್ಬರು ಯುವಕರನ್ನು ರಕ್ಷಣೆ ಮಾಡಿದರೂ ಯಶ್ವಂತ್‌ ಮಾತ್ರ ನೀರುಪಾಲಾಗಿದ್ದಾನೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಯಶ್ವಂತ್‌ ಮೃತದೇಹಕ್ಕಾಗಿ ಸ್ಥಳೀಯರೊಂದಿಗೆ ಹುಡುಕಾಟ ನಡೆಸಿ,ಕತ್ತಲಾದ ಕಾರಣ ಶೋದ ಕಾರ್ಯವನ್ನು ಮುಂದೂಡಿದರು. ಘಟನೆಯು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave a Reply

Your email address will not be published. Required fields are marked *

error: Content is protected !!