Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ದೊಡ್ಡ ಗರುಡನಹಳ್ಳಿ ಡೈರಿ ಅಧ್ಯಕ್ಷರಾಗಿ ಸೋಮಶೇಖರ್, ಉಪಾಧ್ಯಕ್ಷರಾಗಿ ಕೆಂಪರಾಜು ಆಯ್ಕೆ

ಮಂಡ್ಯ ತಾಲೂಕಿನ ದೊಡ್ಡ ಗರುಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ  ನೂತನ ಅಧ್ಯಕ್ಷ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತರಾದ ಸೋಮಶೇಖರ್ ಹಾಗೂ ಕೆಂಪರಾಜು ಆಯ್ಕೆಯಾದರು.
ಹಾಲು ಉತ್ಪಾದಕರ ಸಹಕಾರ ಸಂಘವು ಸ್ಥಾಪನೆಯಾಗಿ 48 ವರ್ಷಗಳಲ್ಲಿ ಕಳೆದ ಏಪ್ರಿಲ್ 26ರಂದು ಪ್ರಪ್ರಥಮ ಬಾರಿಗೆ ನಿರ್ದೇಶಕರ ಸ್ಥಾನಗಳಿಗೆ  ಚುನಾವಣೆ ನಡೆಯಿತು. ಆ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ  8, ಕಾಂಗ್ರೆಸ್ ಬೆಂಬಲಿತ 3 ನಿರ್ದೇಶಕರುಗಳು ಆಯ್ಕೆಯಾಗಿದ್ದರು.
ಇಂದು ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ  ಸೋಮಶೇಖರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೆಂಪರಾಜು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣೆಯ ಅಧಿಕಾರಿಯಾದ ವೆಂಕಟೇಶಮೂರ್ತಿ ಅಧ್ಯಕ್ಷರಾಗಿ ಸೋಮಶೇಖರ್, ಉಪಾಧ್ಯಕ್ಷರಾಗಿ ಕೆಂಪರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ವೆಂಕಟೇಶ್ ಮೂರ್ತಿ  ಘೋಷಿಸಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸೋಮಶೇಖರ್ ಮಾತನಾಡಿ ಎಲ್ಲಾ ನಿರ್ದೇಶಕರುಗಳು ಗ್ರಾಮದ ಮುಖಂಡರುಗಳು ನನ್ನನ್ನು ದೊಡ್ಡಗರುಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲಾ ನಿರ್ದೇಶಕರುಗಳು ಮುಖಂಡರು,ಯಜಮಾನರು ಸೇರಿದಂತೆ ಎಲ್ಲರಿಗೂ ಕೃತಜ್ಞತೆಗಳನ್ನು ಹೇಳುತ್ತೇನೆ, ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತೇನೆ ಎಂದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನಿರ್ದೇಶಕರುಗಳಾದ ಕರಿಗೌಡ, ಬೈರೇಗೌಡ, ದೇವರಾಜು, ಉಮೇಶ್, ಬೋರಲಿಂಗಯ್ಯ, ಪುಟ್ಟ ಲಿಂಗಯ್ಯ, ಭಾಗ್ಯಮ್ಮ, ಮೇಘನಾ, ಮುಖಂಡರುಗಳಾದ ಚನ್ನಕೇಶವ, ಪಟೇಲ್ ಆನಂದ್, ರಾಜೇಗೌಡ, ಅಂಗಡಿ ಆನಂದ್, ಸಚ್ಚಿದಾನಂದ, ರಾಮೇಗೌಡ, ಕುಮಾರ ಬಿಎಂಟಿಸಿ ಮನು ಸೇರಿದಂತೆ ಹಲವರು ಅಭಿನಂದಿಸಿದರು.

Leave a Reply

Your email address will not be published. Required fields are marked *

error: Content is protected !!