Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಹುಲಿಕೆರೆ ಗ್ರಾ.ಪಂ ಬಿಲ್ ಕಲೆಕ್ಟ‌ರ್ ಅಮಾನತು

ಸಾರ್ವಜನಿಕರಿಂದ ವಸೂಲಿ ಮಾಡಿದ ತೆರಿಗೆ ಹಣವನ್ನು ಸಕಾಲದಲ್ಲಿ ಪಂಚಾಯ್ತಿ ಖಾತೆಗೆ ಜಮಾ ಮಾಡದೆ ಉದ್ದೇಶ ಪೂರ್ವಕವಾಗಿ ತೆರಿಗೆ ವಸೂಲಾತಿಯಲ್ಲಿ ತಪ್ಪು ಲೆಕ್ಕ ಹಾಕಿ ಪಂಚಾಯ್ತಿಗೆಆರ್ಥಿಕ ನಷ್ಟ ಉಂಟು ಮಾಡಿರುವ ತಾಲೂಕು ಹುಲಿಕೆರೆ ಗ್ರಾ.ಪಂ ಬಿಲ್ ಕಲೆಕ್ಟರ್‌ನ್ನು ಗ್ರಾಪಂ ಆಡಳಿತಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಎನ್.ವಿ.ಹೇಮಂತ್ ಕುಮಾರ್ ಅಮಾನತುಗೊಂಡ ಬಿಲ್ ಕಲೆಕ್ಟರ್‌ . ಗ್ರಾಮ ಪಂಚಾಯ್ತಿಯಿಂದ ನೀಡಿರುವ ಜವಾಬ್ದಾರಿಗಳಲ್ಲಿ ಉದಾಸೀನತೆ, ನಿರ್ಲಕ್ಷ್ಯ, ಸರ್ಕಾರದ ಆದೇಶಗಳನ್ನು ಉಲ್ಲಂಘನೆ, ತಪ್ಪು ಮಾಹಿತಿ ಸಲ್ಲಿಕೆ ಸೇರಿದಂತೆ ಹಲವು ಆರೋಪಗಳಿಗೆ ಸಮಜಾಯಿಷಿ ಯನ್ನೂ ನೀಡದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ 113 ಮತ್ತು 64 ಅಧಿನಿಯಮಗಳ ಮೇರೆಗೆ ಗ್ರಾಪಂ ಆಡಳಿತಾಧಿಕಾರಿಗೆ ನೀಡಿರುವ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಇಲಾಖೆ ವಿಚಾರಣೆ ಕಾಯ್ದಿರಿಸಿ ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!