
ಮಂಡ್ಯ ನಗರದಲ್ಲಿರುವ ಲೋಕಪಾವನಿ ಮಹಿಳಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಸಿ.ಜೆ.ಸುಜಾತಕೃಷ್ಣ ಮತ್ತು ಉಪಾಧ್ಯಕ್ಷರಾಗಿ ಶಕುಂತಲಾ ಅವಿರೋಧವಾಗಿ ಆಯ್ಕೆಯಾದರು.
ಬಳಿಕ ಮಾತನಾಡಿದ ನೂತನ ಅಧ್ಯಕ್ಷೆ ಸಿ.ಜೆ.ಸುಜಾತಕೃಷ್ಣ, ಆಡಳಿತ ಮಂಡಳಿಯಲ್ಲಿ ೧೭ಮಂದಿ ನಿರ್ದೇಶಕರಿದ್ದು, ಎಲ್ಲರ ಒಮ್ಮತದಿಂದ ನಾವು ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇವೆ, ಎಲ್ಲರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಬ್ಯಾಂಕ್ ಅಭಿವೃದ್ದಿಗೆ ಶ್ರಮಿಸುತ್ತೇವೆ ಎಂದರು.
ನಗರದಲ್ಲಿ ಏಕೈಕ ಮಹಿಳಾ ಬ್ಯಾಂಕ್ ಲೋಕಪಾವನಿ ಸಹಕಾರ ಬ್ಯಾಂಕ್ ಇರುವುದು ಹೆಮ್ಮೆಯ ಪ್ರತೀಕ, ಹಿರಿಯ ಮಹಿಳಾಮಣಿಗಳ ಸಹಕಾರದಿಂದ ಬ್ಯಾಂಕ್ ಸ್ಥಾಪನೆಯಾಗಿದೆ, ನಾವು ಪುನರ‍್ಚೇತನಕ್ಕೆ ದುಡಿಯುತ್ತೇವೆ.
ನಮ್ಮ ಗೆಲುವಿಗೆ ಸಹಕಾರ ನೀಡಿದ ಎಲ್ಲಾ ಸದಸ್ಯರಿಗೂ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ಚುನಾವಣೆ ಅಧಿಕಾರಿಯಾಗಿ ಅನಿತಾ ಕರ್ತವ್ಯ ನಿರ್ವಹಿಸಿದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ನಿರ್ದೇಶಕರುಗಳು,ಹಿತೈಸಿಗಳು, ಬ್ಯಾಂಕಿನ ಸಿಬ್ಬಂದಿಗಳು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಲೋಕಪಾವನಿ ಮಹಿಳಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾದ ಕೆ.ಸಿ.ನಾಗಮ್ಮ, ಎಂ.ಬಿ.ಕಮಲಮ್ಮ, ರತ್ನಶ್ರೀ, ಹೇಮಲತಾ, ಪುಟ್ಟಗೌರಮ್ಮ, ಎಂ.ಜೆ.ವತ್ಸಲಾ, ಎನ್.ಎ.ರೇಣುಕಾ, ಲೀಲಾತಮ್ಮಣ್ಣ, ಅನುರಾಧಾ,ಪುಷ್ಪಾ, ಮೀನಾಕ್ಷಿ, ಎನ್.ಲತಾ, ಶ್ವೇತಾ,ಪುಟ್ಟಮ್ಮ, ಎಂ.ಬಿ. ಶಕುಂತಲಾ ,ಸುಜಾತ ಮಣಿ ನೌಕರರು, ಸಿಬ್ಬಂದಿಗಳು ಹಾಜರಿದ್ದರು.

Leave a Reply