Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಮನೆ ಕಳ್ಳತನ ಮಾಡುತ್ತಿದ್ದ ಕಳ್ಳರ ಬಂಧನ : ಕಾರು ಚಿನ್ನಾಭರಣ ವಶ

ಮಂಡ್ಯ : ಮಂಡ್ಯ ಜಿಲ್ಲೆಯ ಮಳವಳ್ಳಿ,ಹಲಗೂರು  ಸೇರಿದಂತೆ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ  ಮಹಿಳೆಯರಿಗೆ  ವಂಚಿಸಿ ಅವರ ಮೈ ಮೇಲೆ ಇದ್ದ ಚಿನ್ನಾಭರಣಗಳನ್ನು ದೋಚುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ  ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರಿನ ಬನ್ನೇರುಘಟ್ಟದ ಅಸ್ಕಾ ಮಸೀದಿ ಹತ್ತಿರದ ಎರಡನೇ ಕ್ರಾಸ್ ನಿವಾಸಿ ನಾಸಿರ್ ಅಹಮದ್ ಪುತ್ರ ಮುನಾಜೀರ್ ನನ್ನು ಬಂಧಿಸಲಾಗಿದೆ ಈತನಿಂದ 226 ಗ್ರಾಂ ಚಿನ್ನ, ಹೋಂಡಾ ಆಕ್ರಿನಾ ಬೈಕ್ ವಶಕ್ಕೆ ಪಡೆಯಲಾಗಿದ್ದು ಇದರ ಮೌಲ್ಯ 22.60 ಲಕ್ಷ ಆಗಿದೆ ಎಂದರು.
ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರಕರಣ, ಸಾತನೂರು ಹಾಗೂ ಕನಕಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದೇ ಮಾದರಿಯಲ್ಲಿ ವಂಚಿಸಿ ಚಿನ್ನಾಭರಣ  ದೋಚಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
ಮಳವಳ್ಳಿ ತಾಲೂಕು ಹಲಗೂರಿನ ನಾಗೇಂದ್ರ ಹೆಚ್.ಎನ್ ರವರ ಅತ್ತೆ ಕಮಲಮ್ಮರಿಗೆ ಸಂಜೆ  6-15 ಸಮಯದಲ್ಲಿ ಮನೆಯ ಬಳಿ  ಸಿಹಿ ತಿನಿಸನ್ನು ನೀಡಿದ್ದು, ಅದನ್ನು ತಿಂದ ನಂತರ ಕಮಲಮ್ಮ ಪ್ರಜ್ಞೆ ತಪ್ಪಿದ್ದು ಅನಂತರ ಅವರ ಮೈಮೇಲಿದ್ದ, 15 ಗ್ರಾಂ ತೂಕದ 6 ಚಿನ್ನದ ಬಳೆ, ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಸರ,6 ಗ್ರಾಂ ತೂಕದ ಚಿನ್ನದ ಉಂಗುರ ವನ್ನು ದೋಚಿ ಪರಾರಿಯಾಗಿದ್ದನು, ಒಟ್ಟಾರೆ 12 ಲಕ್ಷ ಮೌಲ್ಯದ 126 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿರುವ ಬಗ್ಗೆ ಹಲಗೂರು ಪೊಲೀಸ್ ಠಾಣೆಯಲ್ಲಿ ಕಮಲಮ್ಮರ ಅಳಿಯ ನಾಗೇಂದ್ರ ಪ್ರಕರಣ ದಾಖಲಿಸಿದ್ದರು.
ಪ್ರಕರಣ ಭೇದಿಸಲು  ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ ಸಿ.ಇ,ಗಂಗಾಧರಸ್ವಾಮಿ, ಮಳವಳ್ಳಿ ಡಿವೈ.ಎಸ್.ಪಿ ವಿ.ಕೃಷ್ಣಪ್ಪ  ಹಲಗೂರು ವೃತ್ತ ನಿರೀಕ್ಷಕ  ಶ್ರೀಧರ್ ಬಿ.ಎಸ್  ಮಾರ್ಗದರ್ಶನದಲ್ಲಿ ಹಲಗೂರು ಪೊಲೀಸ್ ಠಾಣೆ ಪೋಲಿಸ್ ಸಬ್ ಇನ್ ಸ್ಪೆಕ್ಟರ್  ಲೋಕೇಶ್  ನೇತೃತ್ವದಲ್ಲಿ ಅಪರಾಧ ಪತ್ತೆ ಸಿಬ್ಬಂದಿಯವರಾದ  ರಿಯಾಜ್ ಪಾಷ, ಪ್ರಭುಸ್ವಾಮಿ, ನಾಗೇಂದ್ರ, ರವಿಕಿರಣ್, ಲೋಕೇಶ್, ಸಿದ್ದರಾಜು, ಗೋವರ್ಧನ್, ಎಪಿಸಿ ಶಿವರಾಜು ತಂಡವನ್ನು ರಚಿಸಲಾಗಿತ್ತು.ಪೊಲೀಸರ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹಲಗೂರು ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಯವರ ಸೇವೆಯನ್ನು ಎಸ್ ಟಿ ಮಲ್ಲಿಕಾರ್ಜುನ ಬಾಲದಂಡಿಯವರು  ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!