
ಮಂಡ್ಯ: ಒಣ ಗಾಂಜಾವನ್ನು ಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಕೆ.ಆರ್.ಪೇಟೆ ಹಾಗೂ ಶ್ರೀರಂಗಪಟ್ಟಣ ಮುಖ್ಯ ರಸ್ತೆಯಲ್ಲಿರುವ ಮಾಣಿಕ್ಯ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ಬಳಿ ಅಬಕಾರಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪಾಂಡವಪುರ ಪಟ್ಟಣದ ವಿ.ಸಿ.ಕಾಲೋನಿ ನಿವಾಸಿ ಪ್ರಕಾಶ್ ಬಂಧಿತ ಆರೋಪಿ. ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು 2025 ಜೂ.2ರ ಸೋಮವಾರ ರಾತ್ರಿ ಪ್ರಕಾಶ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈತನನ್ನು ತಡೆದು ಪರಿಶೀಲಿಸಿದಾಗ ಸುಮಾರು 1.50 ಲಕ್ಷ ರೂ. ಬೆಲೆ ಬಾಳುವ 2.3೦೦ ಕೆ.ಜಿ. ಒಣ ಗಾಂಜಾ ಸಾಗಾಣೆ ಮಾಡುತ್ತಿದ್ದುದು ಕಂಡು ಬಂದಿದೆ.
ಮಂಡ್ಯ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಡಾ.ಆರ್. ನಾಗಶಯನ ಇವರ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ವಲಯದ ಅಬಕಾರಿ ನಿರೀಕ್ಷಕ ಪ್ರಪುಲ್ಲ ಚಂದ್ರ ವೈ ಜೆ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಚರಣೆಯಲ್ಲಿ ಅಬಕಾರಿ ಹೆಡ್ ಕಾನ್ಸ್ಟೇಬಲ್ ರಾಮು, ದಿಲೀಪ್ ಹಾಗೂ ವಾಹನ ಚಾಲಕರಾದ ನಾಗರಾಜು, ಸಂದೀಪ್ ಮತ್ತು ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Reply