
ತಾಲೂಕಿನ ಚಿಕ್ಕಮಂಡ್ಯ ಗ್ರಾಮಕ್ಕೆ ಹೊಂದಿಕೊಂಡಂತೆ ಕುಮಾರ್ ಎಂಬುವರಿಗೆ ಸೇರಿದ ಕೋಳಿ ಫಾರಂನ್ನು ತೆರವುಗೊಳಿಸಲು ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೋಳಿ ಫಾರಂಗೆ ಅಳವಡಿಸಿದ್ದ ತಂತಿ ಬೇಲಿಯನ್ನು ತೆರವುಗೊಳಿಸಿದರು.
ಸುದ್ಧಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಲೀಕ ಕುಮಾರ್ ಅವರು ವಾರದೊಳಗೆ ತೆರವು ಮಾಡುವುದಾಗಿ ಮಾಡಿದ ಮನವಿಯನ್ನು ಪುರಸ್ಕರಿಸಿ, ಗಡುವು ನೀಡಿ ವಾಪಸ್ಸಾದರು.
ಕುಮಾರ್ ಅವರು ಗ್ರಾಮಕ್ಕೆ ಹೊಂದಿಕೊAಡAತೆ ಕೋಳಿ ಫಾರಂ ನಿರ್ಮಿಸಿದ್ದರು. ಇದರಿಂದಾಗಿ ಸೊಳ್ಳೆ, ನೊಣಗಳ ಕಾಟ, ವಾಸನೆ ಬರುತ್ತಿದ್ದ ಕಾರಣ ಗ್ರಾಮಸ್ಥರು ಮತ್ತು ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿ ತಾಲೂಕು ಆಡಳಿತಕ್ಕೆ ದೂರು ಸಲ್ಲಿಸಿದ್ದರು. ದೂರಿನನ್ವಯ ಕಾರ್ಯೋನ್ಮುಖರಾದ ತಾಲೂಕು ಆಡಳಿತದ ಅಧಿಕಾರಿಗಳು, ಮಾಲೀಕ ಕುಮಾರ್‌ಗೆ ನೋಟೀಸ್ ನೀಡಿ ತೆರವುಗೊಳಿಸುವಂತೆ ಸೂಚಿಸಿದ್ದರು.
ನೋಟೀಸ್ ಕೊಟ್ಟು ಕಾಲಾವಕಾಶ ನೀಡಿದ್ದರೂ ಸಹ ಮಾಲೀಕ ಕೋಳಿ ಫಾರಂನ್ನು ಸ್ಥಳಾಂತರ ಅಥವಾ ತೆರವುಗೊಳಿಸಿರಲಿಲ್ಲ. ಇದರಿಂದ ಬೇಸತ್ತ ಅಧಿಕಾರಿಗಳು ಇಂದು ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಆಗಮಿಸಿ ಕೋಳಿ ಫಾರಂನ ರಕ್ಷಣೆಗಾಗಿ ಅಳವಡಿಸಿದ್ದ ತಂತಿ ಬೇಲಿಯನ್ನು ತೆರವುಗೊಳಿಸಿದರು. ತಕ್ಷಣ ಸ್ಥಳಕ್ಕೆ ಬಂದ ಮಾಲೀಕ ವಾರದೊಳಗೆ ತೆರವುಗೊಳಿಸುವುದಾಗಿ ಲಿಖಿತ ಭರವಸೆ ನೀಡಿದ ನಂತರ ಎಚ್ಚರಿಕೆಯ ಗಡುವು ನೀಡಿ ವಾಪಸ್ಸಾದರು.
ರಾಜಸ್ವ ನಿರೀಕ್ಷಕರಾದ ಪ್ರಭು, ಗ್ರಾಮ ಆಡಳಿತಾಧಿಕಾರಿ ತೇಜಸ್‌ಗೌಡ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸುನಿಲ್‌ಕುಮಾರ್, ಗ್ರಾ.ಪಂ. ಅಧ್ಯಕ್ಷ ಆನಂದ್, ಗ್ರಾ.ಪಂ. ಸದಸ್ಯರು, ಸಿಬ್ಬಂದಿಗಳು ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply