Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಮಂಡ್ಯ ಗ್ರಾಮಾಂತರ ಗ್ರಾ.ಪಂ  ಉಪಾಧ್ಯಕ್ಷರಾಗಿ ಜಯಮ್ಮ ಆಯ್ಕೆ

ಮಂಡ್ಯ: ತಾಲ್ಲೂಕಿನ ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಜಯಮ್ಮ ಅವರು ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದಿನ ಉಪಾಧ್ಯಕ್ಷೆ ಗೀತಾ ಸ್ವಾಮಿ ಅವರ ಅವಿಶ್ವಾಸದಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಗ್ರಾ.ಪಂ.ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ 22 ಸದಸ್ಯ ಬಲವಿರುವ ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿಯಲ್ಲಿ 14 ಮಂದಿ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.ಜಯಮ್ಮ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಲೋಕೇಶ್ ಮೂರ್ತಿ ಅವರು ಜಯಮ್ಮ  ಉಪಾಧ್ಯಕ್ಷರಾಗಿ ಅವಿರೋಧವಾಗಿ  ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
ನೂತನ ಉಪಾಧ್ಯಕ್ಷೆ ಜಯಮ್ಮ ಮಾತನಾಡಿ ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿಯ ಸದಸ್ಯರು  ನನ್ನನ್ನು ಉಪಾಧ್ಯಕ್ಷರಾಗಿ  ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷರ ಜೊತೆ ಅಭಿವೃದ್ಧಿ ಕಾರ್ಯಗಳನ್ನು  ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ  ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ, ಸದಸ್ಯರಾದ ಲೋಕೇಶ್, ಕುಮಾರ್, ಮಧುಕರ್, ನಂದಿನಿ, ಕಲಾವತಿ, ಪ್ರೇಮ, ನಂದಿನಿ, ಮಮತಾ, ಶಿವಮ್ಮ, ಪ್ರಶೀಲ, ನಿರ್ಮಲ, ವಿಶ್ವ, ಮುಖಂಡರಾದ ಟಿ.ಸಿ.ಶಂಕರೇಗೌಡ, ರೇವಣ್ಣ, ಮಹೇಶ್, ಪಿಡಿಒ ಸುನೀಲ್  ಕುಮಾರ್, ಕಾರ್ಯದರ್ಶಿ ಚೌಡಪ್ಪ, ಗ್ರಾಪಂ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!