Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಮಂಡ್ಯ ಜಿಲ್ಲೆಯಲ್ಲೂ ನರೇಗಾ ಯೋಜನೆಯ ಹಾಜರಾತಿಯಲ್ಲಿ ಲೋಪ..!

ವರದಿ : ಎಂ.ಚಾಮರಾಜು

ಮಂಡ್ಯ ಜಿಲ್ಲೆಯಾದ್ಯಂತ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ 2024-25 ರಲ್ಲಿ ನಡೆದಿರುವ ಸಮುದಾಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ  ಎನ್ಎಂಎಂಎಸ್ ( NMMS -National Mobile Monitoring System ),  ಮುಖಾಂತರ ಕೆಲಸಕ್ಕೆ ಹಾಜರಾದ ಕೂಲಿಯಾಳುಗಳ ದೈನಂದಿನ ಹಾಜರಾತಿಯ ಫೋಟೋಗಳನ್ನು ಸೆರೆ ಹಿಡಿದು  ದಾಖಲಿಸುವಲ್ಲಿ ಗೋಲ್ ಮಾಲ್ ನಡೆದಿರುವ ಶಂಕೆ ದಟ್ಟವಾಗಿ ವ್ಯಕ್ತವಾಗಿದೆ.

ಕೇಂದ್ರ ಸರ್ಕಾರ ಗುರುತಿಸಿರುವಂತೆ ರಾಷ್ಟ್ರೀಯ ಮೊಬೈಲ್ ಮಾನಿಟರಿ ಸಿಸ್ಟಂ ತಂತ್ರಾಂಶದಲ್ಲಿ ( NMMS ) ಕೆಲಸಕ್ಕೆ ಹಾಜರಾದ ಕೂಲಿಯಾಳುಗಳ ವಿವರ ಮತ್ತು ಫೋ ಟೋಗಳನ್ನು ಅಪ್‌ ಲೋಡ್ ಮಾಡುವಲ್ಲಿ ಹಾಗೂ ಸಂಜೆ ಸಮಯದಲ್ಲಿ ಎರಡನೇ ಬಾರಿ ಕೂಲಿಯಾಳುಗಳ ಫೋಟೋಗಳನ್ನು ಸೆರೆ ಹಿಡಿದು ಅಪ್‌ಲೋಡ್ ಮಾಡದಿರುವುದು  ಎನ್‌ಎಂಎಂಎಸ್ ದುರುಪಯೋಗ ಸಂಬಂಧ ಕೇಳಿಬರುತ್ತಿರುವ ದೂರುಗಳಿಗೆ ಪುಷ್ಟಿ ನೀಡಿದೆ.

2024 25ರ ಸಾಲಿನಲ್ಲಿ ಮಂಡ್ಯ ಜಿಲ್ಲೆ ಯಲ್ಲಿ ನಡೆದಿರುವ 4,582 ಸಮುದಾಯ ಕಾಮಗಾರಿಗಳಿಗೆ  ಸಂಬಂಧಿಸಿದಂತೆ
ಬೆಳಗಿನ ಅವಧಿಯಲ್ಲಿ  ಕೂಲಿಕಾರರ ಹಾಜರಾತಿ ಫೋಟೋಗಳನ್ನು   ಒಟ್ಟು  3,08,915  ಫೋಟೋ ಗಳನ್ನು ಸೆರೆ ಹಿಡಿಯಲಾಗಿದೆ . ಅದರಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆಯ ( ಎರಡು ಬಾರಿ ) ಅವಧಿಯಲ್ಲಿ ಸೆರೆಹಿಡಿಯಲಾದ ಒಟ್ಟು 1,70,596 ಫೋಟೋಗಳನ್ನು ಅಪ್ಲೋಡ್ ಮಾಡಲಾಗಿರುತ್ತದೆ. ಆದರೆ ಒಟ್ಟು 1,37,719 ಫೋಟೋಗಳನ್ನು ಬೆಳಗಿನ ಅವಧಿಯಲ್ಲಿ ಮಾತ್ರ ಸೆರೆ ಹಿಡಿಯಲಾಗಿದ್ದು , ಎರಡನೇ ಬಾರಿ ಹಿಡಿಯದೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ದಾಖಲೆ ಮುಖಾಂತರ ಕಂಡು ಬಂದಿದೆ.

ಕೆಆರ್ ಪೇಟೆ ತಾಲೂಕಿನಲ್ಲಿ 44922 ರಲ್ಲಿ 22812, ಮದ್ದೂರು ತಾಲೂಕಿನಲ್ಲಿ 1,04,589 ರಲ್ಲಿ 28,950, ಮಳವಳ್ಳಿ ತಾಲೂಕಿನಲ್ಲಿ 67,714 ರಲ್ಲಿ 33,052 ಮಂಡ್ಯ ತಾಲೂಕಿನಲ್ಲಿ 33,805 ರಲ್ಲಿ 11,306 ನಾಗಮಂಗಲ ತಾಲೂಕಿನಲ್ಲಿ 34,454 ರಲ್ಲಿ 29,923  ಪಾಂಡವಪುರ ತಾಲೂಕಿನಲ್ಲಿ  16,296 ರಲ್ಲಿ6,223 ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ 6,535 ರಲ್ಲಿ 5,453  ಫೋಟೋಗಳನ್ನು 2ನೇ ಬಾರಿ ಸೆರೆ ಹಿಡಿಯದೆ ಇರುವುದು ಕಂಡು ಬಂದಿರುತ್ತದೆ.

ಕೆಲಸಕ್ಕೆ ಹಾಜರಾದರವರ ಫೋಟೋಗಳನ್ನು ಎರಡನೇ ಬಾರಿ ಸೆರೆಹಿಡಿದು ಅಪ್ಲೋಡ್ ಮಾಡದಿರುವುದನ್ನು ಕಂಡು ಬಂದಿರುವುದನ್ನು ನೋಡಿದರೆ ನರೇಗಾ ಯೋಜನೆಯ ಕೂಲಿ ಹಣ ದುರುಪಯೋಗವಾಗುತ್ತಿದೆಯೇ ಎಂಬ ಅನುಮಾನಗಳು ಮೂಡುವುದಕ್ಕೆ ಕಾರಣವಾಗುತ್ತಿದೆ.
ಇದಕ್ಕೆ ಸಂಬಂಧಪಟ್ಟ ಕೆಳ ಹಂತದ ನೌಕರರು, ಅಧಿಕಾರಿಗಳಿಂದ ಹಿಡಿದು ಮೇಲ್ಮಟ್ಟದ ಅಧಿಕಾರಿಗಳ ವರೆಗೂ ಸರ್ಕಾರ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ  ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!