
ಮನರೇಗಾ ಯೋಜನೆಯಡಿ ನೂರು ಮಾನವ ದಿನ ಗಳ ಸೃಷ್ಟಿಸಬೇಕೆಂಬ ಕಾಯಿದೆಯೇನೋ ಇದೆ. ಆದರೆ, ನೂರು ದಿನಗಳ ಕೆಲಸ ಕೊಟ್ಟು ಕೂಲಿ ಹಣ ಬಿಡು ಗಡೆಯಾಗದಿದ್ದರೆ ಕೂಲಿಕಾರರೇ ಸಂಕಷ್ಟಕ್ಕೆ ಸಿಲುಕಬೇ ಕಾಗುತ್ತದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಶನಿವಾರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದಿಂದ ನಿಗದಿಪಡಿಸುವ ಮಾನವ ದಿನಗಳಿಗೆ ಅನುಗುಣವಾಗಿ ಅನುದಾನ ಬಿಡುಗಡೆಯಾಗುತ್ತದೆ. 100 ಮಾನವ ದಿನಗಳನ್ನು ಸೃಜನೆ ಮಾಡಬೇಕೆಂದು ಕೂಲಿಕಾರರಿಗೆ ಕೆಲಸ ನೀಡಬಹುದು. ಕೆಲಸ ಕೊಟ್ಟ ಬಳಿಕ ಕೂಲಿ ಪಾವತಿಗೆ ಹಣ ಬಿಡುಗಡೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟವಾಗುತ್ತದೆ. ಈಗಲೇ 6 ತಿಂಗಳು ವಿಳಂಬವಾಗಿ ಕೇಂದ್ರದಿಂದ ಅನುದಾನ ಬಿಡುಗಡೆಯಾಗಿದೆ ಎಂದು ಕೂಲಿ ಕಾರ್ಮಿಕ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಾಲಿನಲ್ಲಿ 52 ಲಕ್ಷ ಮಾನವ ದಿನಗಳ ಸೃಷ್ಟಿಗೆ ಸಿಇಒ ಅವರು ಬೇಡಿಕೆ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಅದರಲ್ಲಿ ಅರ್ಧದಷ್ಟನ್ನೂ ನೀಡದೆ ಕೇವಲ 19 ಲಕ್ಷ ಮಾನವ ದಿನಗಳ ಸೃಷ್ಟಿಗೆ ಅನುಮತಿಸಿದೆ. ಅದಕ್ಕೆ ಅನುಗುಣವಾಗಿ ಸಿಇಒ ಅವರು ಜಿಲ್ಲೆಯಲ್ಲಿ ಮಾನವ ದಿನಗಳನ್ನು ಸೃಜಿಸಿದ್ದಾರೆ. ಇದರ ಜೊತೆಗೆ 100 ದಿನಗಳ ಕೆಲಸ ನೀಡಬೇಕೆಂಬುದು ಮುಖಂಡರ ಬೇಡಿಕೆಯಾಗಿದೆ. ಇದಕ್ಕೆ ಬೇಡಿಕೆ ಕಡಿಮೆ ಇರುವ ಜಿಲ್ಲೆ ಗಳಿಂದ ಅನುದಾನವನ್ನು ತರಿಸಿಕೊಳ್ಳುವುದಕ್ಕೆ ಅವಕಾ ಶವಿದ್ದರೂ, ಅಲ್ಲಿ ಬೇಡಿಕೆ ಕಡಿಮೆ ಇಲ್ಲದಿದ್ದರೆ ಕೂಲಿಯನ್ನು ನೀಡುವುದಕ್ಕೆ ಹೇಗೆ ಸಾಧ್ಯ. ಕಾಯಿದೆಯನ್ನು ಜಾರಿಗೊಳಿಸುವ ಸಮಯದಲ್ಲಿ ವಾಸ್ತವವನ್ನೂ ನಾವು ಆಲೋಚಿಸಬೇಕಲ್ಲವೇ ಎಂದರು.
ಕೂಲಿಗೆ ಬೇಡಿಕೆ ಇರುವ ತಾಲೂಕುಗಳಿಗೆ ಕಡಿಮೆ ಕೂಲಿ ಬೇಡಿಕೆ ಇರುವ ತಾಲೂಕುಗಳಿಂದ ಮನರೇಗಾ ಅನುದಾನ ವರ್ಗಾವಣೆ ಮಾಡಬೇಕೆಂಬ ಮುಖಂಡರ ಬೇಡಿಕೆಗೆ ಸ್ಪಂದಿಸಿದ ಸಚಿವರು, ಕಡಿಮೆ ಕೂಲಿ ಬೇಡಿಕೆ ಇರುವ ತಾಲೂಕುಗಳಿಂದ ಶೇ.20 ರಷ್ಟು ಅನುದಾನವನ್ನು ಹೆಚ್ಚು ಬೇಡಿಕೆ ಇರುವ ತಾ ಲೂಕುಗಳಿಗೆ ವರ್ಗಾಯಿಸಿ ನೂರರಷ್ಟು ಪ್ರಗತಿ ಸಾಧನೆಗೆ ನೆರವಾಗುವಂತೆ ಸಿಇಒಗೆ ಸೂಚಿಸಿದರು.
ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡು ಗಡೆಗೆ ಅವಕಾಶವಿದ್ದರೆ ಮುಖ್ಯಮಂತ್ರಿ, ಪಂಚಾ ಯತ್ರಾಜ್ ಸಚಿವರುಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಗುತ್ತಿಗೆದಾರರಿಗೆ ಕೆಲಸ ನೀಡಿದರೆ ಕಠಿಣ ಕ್ರಮ
ಮದ್ದೂರು, ಕೆ.ಆರ್.ಪೇಟೆ ಮತ್ತು ಮಳವಳ್ಳಿ ತಾಲೂಕುಗಳಲ್ಲಿ ಮನರೇಗಾ ಕೆಲಸಗಳನ್ನು ಗುತ್ತಿಗೆದಾರ ರಿಂದ ಮಾಡಿಸುತ್ತಿರುವ ಬಗ್ಗೆ ಕೂಲಿ ಕಾರ್ಮಿಕ ಮು ಖಂಡರು ಸಚಿವರ ಗಮನಕ್ಕೆ ತಂದಾಗ, ಮನರೇಗಾ ಕಾಮಗಾರಿಗಳನ್ನು ಕೃಷಿ ಕೂಲಿಕಾರ್ಮಿಕರಿಂದಲೇ ಮಾಡಿಸಬೇಕು. ಗುತ್ತಿಗೆದಾರರಿಗೆ ಕೆಲಸ ನೀಡಿ ಯಂತ್ರೋಪಕರಣಗಳಿಂದ ಕೆಲಸ ಮಾಡಿಸುವುದು ಕಂಡುಬಂದಲ್ಲಿ ಅಂತಹ ಪಿಡಿಒ ಹಾಗೂ ಇಒಗಳ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.
ಕೃಷಿ ಕೂಲಿ ಕಾರ್ಮಿಕರು ಹಲವಾರು ಸಮಸ್ಯೆ ಗಳನ್ನು ಪರಿಹರಿಸಲು ಮನವಿಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ನಿಯಮಾನುಸಾರ ಪರಿಹರಿಸಬಹುದಾದ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿ ವರದಿ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ್, ಸಿಇಓ ನಂದಿನಿ ಕೆ. ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭಾಗವಹಿಸಿದ್ದರು.

Leave a Reply