
ಏಕಕಾಲಕ್ಕೆ ಗ್ರಾಮ ಪಂಚಾಯ್ತಿ ಹಾಗೂ ಜಾತಿ ಸಮೀಕ್ಷೆ ಕಾರ್ಯವನ್ನು ಮಾಡಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಜಾತಿ ಸಮೀಕ್ಷೆ ಕಾರ್ಯದಿಂದ ನಮ್ಮನ್ನು ಬಿಡುಗಡೆಗೊಳಿಸುವಂತೆ ಮಂಡ್ಯ ತಾಲೂಕು ಗ್ರಾಪಂ ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳು ತಾಪಂ ಮುಖ್ಯ ಕಾರ್ಯ ನಿರ್ವಾಹಕ ಆಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಪಂಚಾಯ್ತಿಯಲ್ಲಿ ಪ್ರತಿದಿನದ ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಗ್ರಾಪಂ ವ್ಯಾಪ್ತಿಯೊಳಗೆ ಜಾತಿ ಸಮೀಕ್ಷೆ ನಡೆಸುವಂತಿದ್ದರೆ ನಮಗೆ ಪಂಚಾಯ್ತಿ ಕೆಲಸದ ಜೊತೆಗೆ ಜಾತಿ ಸಮೀಕ್ಷೆ ನಡೆಸುವುದಕ್ಕೂ ಅನುಕೂಲವಾಗುತ್ತಿತ್ತು. ಬಸರಾಳು, ದುದ್ದ ಹೀಗೆ ಬೇರೆ ಬೇರೆ ಗ್ರಾಪಂ ಕಾರ್ಯದರ್ಶಿಗಳನ್ನು ನಗರ ಸೇರಿದಂತೆ ದೂರದ ಊರುಗಳಿಗೆ ನೇಮಕ ಮಾಡಲಾಗಿದೆ. ಜಾತಿ ಸಮೀಕ್ಷೆ ಕಾರ್ಯ ನಡೆಸುವುದಕ್ಕೆ ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ತಹಸೀಲ್ದಾರ್ ಅವರು ಯಾವುದೇ ಆದೇಶ ಹೊರಡಿಸಿಲ್ಲ ಎಂದು ತಿಳಿಸಿದರು.
ಪಂಚಾಯ್ತಿಯಿಂದ ಸಾರ್ವಜನಿಕರಿಗೆ ನೀಡಲಾಗುವ ಇ-ಸ್ವತ್ತು, ಮರಣ ಪ್ರಮಾಣ ಪತ್ರ, ಮಾಹಿತಿ ಹಕ್ಕಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಬೇಕಿರುವುದು ಕಾರ್ಯದರ್ಶಿ ಗಳ ಜವಾಬ್ದಾರಿ. ಜಾತಿ ಸಮೀಕ್ಷೆಯನ್ನೂ ನಡೆಸುತ್ತಾ ಪಂಚಾಯ್ತಿ ಕೆಲಸಗಳನ್ನು ನಿಭಾಯಿಸುವುದಕ್ಕೆ ದುಸ್ತರವಾಗುತ್ತಿದೆ. ಜಾತಿ ಸಮೀಕ್ಷೆ ಮುಗಿಯುವವರೆಗೆ ಈ ಜವಾಬ್ದಾರಿ ಗಳಿಂದ ವಿನಾಯಿತಿ ಕೊಡಬೇಕು .ಇಲ್ಲದಿದ್ದರೆ ಪ್ರತಿದಿನ ಹಾಜರಾತಿ ಹಾಕಲು ಬೆಳಗ್ಗೆ-ಸಂಜೆ ಪಂಚಾಯ್ತಿ ಗೆ ಬರಬೇಕು. ಹಾಜರಾತಿ ಹಾಕಿ ಮತ್ತೆ ಜಾತಿ ಸಮೀಕ್ಷೆಗೆ ತೆರಳುವುದು ಕಷ್ಟಕರವಾಗುತ್ತದೆ ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ನಮಗೆ ಜಾತಿ ಸಮೀಕ್ಷೆ ನೀಡಿರುವವರ ಹೆಸರನ್ನು ಪರಿಶೀಲಿಸಿದರೆ ಒಂದೊಂದು ದಿಕ್ಕಿಗೆ ಒಬ್ಬೊಬ್ಬರಿದ್ದಾರೆ. ಅಲ್ಲಿಗೆ ಹೋಗಿ ನಾವು ವಿಚಾರಣೆ ಮಾಡಬೇಕಿದೆ. ಇವೆಲ್ಲವೂ ಸಾಕಷ್ಟು ತೊಂದರೆ ಯಾಗುತ್ತಿರುವುದ ರಿಂದ ಕರ್ತವ್ಯ ನಿರ್ವಹಿಸು ವುದಕ್ಕೆ ತುಂಬಾ ತೊಂದರೆಯಾಗುತ್ತಿದೆ. ಅದಕ್ಕಾಗಿ ನಮ್ಮನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಎಂದರು.
ಜಾತಿ ಸಮೀಕ್ಷೆಗೆ ನೀಡಲಾಗಿರುವ ಆ್ಯಪ್ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಆನಂತರ ಸ್ಥಗಿತಗೊಳ್ಳುತ್ತದೆ. ನಗರ ವ್ಯಾಪ್ತಿಯೊಳಗೆ ಜನರೆಲ್ಲರೂ ನಿತ್ಯದ ಕೆಲಸಗಳಿಗೆ ಬೆಳಗ್ಗೆ 9 ಗಂಟೆಯಷ್ಟರಲ್ಲೇ ಹೊರಟುಹೋಗಿರುತ್ತಾ ರೆ. ಸಂಜೆ 6 ಗಂಟೆಯ ಸಮಯಕ್ಕೆ ಅವರು ಮನೆಗೆ ಬರುವುದು. ಮನೆಗೆ ಜನರು ಬರುವ ಹೊತ್ತಿಗೆ ಆ್ಯಪ್ ಕಾರ್ಯ ಸ್ಥಗಿತಗೊಂಡಿರುತ್ತದೆ ಎಂದು ಬೇಸರದಿಂದ ನುಡಿದರು.
ಈ ಸಂದರ್ಭದಲ್ಲಿ ಗ್ರಾ. ಪಂ ಕಾರ್ಯದರ್ಶಿಗಳಾದ ಸದಾಶಿವಮೂರ್ತಿ, ಲೋಕೇಶ್,ಬಿ.ಎಸ್.ರತ್ನಮ್ಮ, ಪವಿತ್ರಾ, ಎಸ್.ಚಂದ್ರಶೇಖರ್, ಎಂ.ಶ್ರೀನಿವಾಸ, ಎಸ್. ಮರಿಲಿಂಗಯ್ಯ, ಜಿ.ಸಿ.ಶ್ರುತಿ, ಎಚ್.ಡಿ.ಆಕಾಶ್, ಜವರೇ ಗೌಡ ಅನೇಕರಿದ್ದರು.

Leave a Reply