
ತಾಲೂಕು ಪಂಚಾಯಿತಿ ಮಂಡ್ಯ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಫೌಂಡೇಶನ್ ಸಂಸ್ಥೆ, ಡೆಲ್ ಸಂಸ್ಥೆಯ ಸಹಯೋಗದಲ್ಲಿ ಡಿಜಿಟಲ್ ಸಖಿಯರಿಗೆ ತರಬೇತಿ ಕಾರ್ಯಕ್ರಮವನ್ನು ಮಂಡ್ಯ ತಾಲೂಕು ಪಂಚಾಯತಿಯ ಸಾಮರ್ಥ್ಯ ಸೌಧದಲ್ಲಿ ಏರ್ಪಡಿಸಲಾಗಿತ್ತು.
ತರಬೇತಿ ಕಾರ್ಯಕ್ರಮವನ್ನು ಮಂಡ್ಯ ತಾಲೂಕು ಪಂಚಾಯಿತಿ ಇಓ ಲೋಕೇಶ್ ಮೂರ್ತಿ ಉದ್ಘಾಟಿಸಿದರು.
ಕರ್ನಾಟಕ ರಾಜ್ಯದ್ಯಂತ 31 ಜಿಲ್ಲೆಗಳಲ್ಲಿ ಮೂರು ಲಕ್ಷ ಸಮುದಾಯದವರಿಗೆ ಹಾಗೂ ಸ್ವಸಹಾಯ ಸಂಘದ ಮಹಿಳೆಯರಿಗೆ ಡಿಜಿಟಲ್ ಸಾಕ್ಷರತೆ
ಮಾಹಿತಿಯನ್ನು ಒದಗಿಸುವುದು ಶಿಕ್ಷಣ ಪೌಂಡೇಶನ್ ನ ಉದ್ದೇಶವಾಗಿರುತ್ತದೆ.
AI ಯುಗದಲ್ಲಿ ಮೊಬೈಲ್ ಗಳನ್ನು ಹೇಗೆ ಬಳಸುವುದು ಸುರಕ್ಷತಾ ಕ್ರಮಗಳ ಬಗ್ಗೆ ಉಚಿತವಾಗಿ ಜಾಗೃತಿ ತರಬೇತಿಯನ್ನು ನೀಡಲಾಗುತ್ತಿದೆ ಆದ್ದರಿಂದ ಸಮುದಾಯದ ಜನರು ಗ್ರಾಮ ಗ್ರಂಥಾಲಯಗಳ ಮೂಲಕ ಈ ಪ್ರಯೋಜನಗಳನ್ನು ಪಡೆಯಬೇಕೆಂದು ತಿಳಿಸಲಾಯಿತು.
ಮಂಡ್ಯ ತಾಲೂಕಿನ 42 ಡಿಜಿಟಲ್ ಸಖಿ ರವರು ಭಾಗವಹಿಸಿ ತರಬೇತಿಯನ್ನು ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಮಂಡ್ಯ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮೂರ್ತಿ, ಶಿಕ್ಷಣ ಪೌಂಡೇಶನ್ ಸಂಸ್ಥೆಯ ಜಿಲ್ಲಾ ಸಂಯೋಜಕ ರಮೇಶ್ ಡಿ.ಎಸ್ ಮತ್ತು ಶಿಕ್ಷಣ ಫೌಂಡೇಶನ್ ಸಂಸ್ಥೆಯ ಹಿರಿಯ ತರಬೇತುದಾರರಾದ ರಂಜಿನಿ ಹಾಗೂ ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳಾದ ನವೀನ್,ವೀರಣ್ಣ,ನಿತ್ಯಾನಂದ ಭಾಗವಹಿಸಿದ್ದರು

Leave a Reply