
ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ರವರು ಮಂಡ್ಯ ನಗರದಲ್ಲಿರುವ ಡಯಟ್ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಕ್ಷರದಾಸೋಹ ಮತ್ತು ಬಿಇಓಗಳೊಂದಿಗೆ ಸಭೆ ನಡೆಸಿದರು.
ಸರ್ಕಾರ ನೀಡುತ್ತಿರುವ ಎಲ್ಲಾ ಸೌಲಭ್ಯಗಳು ಸಮರ್ಪಕವಾಗಿ ಶಾಲಾ ಮಕ್ಕಳಿಗೆ ತಲುಪಬೇಕು, ಸಾಕಷ್ಟು ಶಾಲೆಗಳಿಗೆ ಭೇಟಿ ನೀಡಿದಾಗ ಲೋಪಗಳು ಕಂಡುಬರುತ್ತಿದ್ದು,ಅಕ್ಷರದಾಸೋಹದ ಯೋಜನೆಯಲ್ಲಿ ಅಡುಗೆ ಮನೆ ಮತ್ತು ಶಾಲಾ ಶೌಚಾಲಯ ಸ್ವಚ್ಚತೆಯಿಂದ ಕೂಡಿರಬೇಕು ಎಂದು ಸೂಚಿಸಿದರು.ನಮ್ಮ ಬಳಿಗೆ ವಿದ್ಯಾರ್ಥಿಗಳಿಂದ ಅಥವಾ ಪೋಷಕರಿಂದ ಹಾಗೂ ಶಾಲಾಭಿವೃದ್ದಿ ಸಮಿತಿಯಿಂದ ದೂರು ಬಂದರೆ ತಕ್ಷಣವೇ ಯಾವುದೇ ಮುಲಾಜು ಇಲ್ಲದೆ ಕ್ರಮಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮುಂದಿನ ತಿಂಗಳು ಮತ್ತೊಂದು ಸಭೆ ನಿಗಧಿಯಾಗಿದ್ದು, ಬಿಇಓಗಳು ಮತ್ತು ಅಕ್ಷರ ದಾಸೋಹ ಅಧಿಕಾರಿಗಳು ತಪಾಸಣೆ ನಡೆಸಿ, ವರದಿ ಸಿದ್ದಪಡಿಸಿಕೊಂಡಿರಬೇಕು, ಮುಂದಿನ ಬಾರಿ ಶಾಲೆಗಳಿಗೆ ಭೇಟಿ ನೀಡಿದಾಗ ಬಿಸಿಯೂಟ ಅಡುಗೆ ತಯಾರಕರು ಆರೋಗ್ಯಕರವಾಗಿ, ಡ್ರೆಸ್ಕೋಡ್ನಲ್ಲಿದ್ದು ಅಡುಗೆ ನಿಯಮಗಳನ್ನು ಪಾಲಿಸಿರಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಡಿಡಿಪಿಐ ಲೋಕೇಶ್, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ರವಿಕುಮಾರ್, ಪಡಿತರ ಇಲಾಖೆ ಜಂಟಿ ನಿರ್ದೇಶಕ ಪ್ರತೀಕ್ಹೆಗ್ಗಡೆ ಮತ್ತು ಬಿಇಓಗಳು ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

Leave a Reply