
ಮಂಡ್ಯ ತಾಲೂಕು ತಹಸೀಲ್ದಾರ್ ಎಸ್.ವಿಶ್ವನಾಥ್‌ರನ್ನು ಶಂಭೂನಹಳ್ಳಿ ಗ್ರಾಮಸ್ಥರು ಅಭಿನಂಧಿಸಿ, ಅವರ ಜನಪರ ಸೇವೆಯನ್ನು ಶ್ಲಾಘಿಸಿದರು.
ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಭೂನಹಳ್ಳಿ ಕೃಷ್ಣ ಮತ್ತು ಗ್ರಾಮಸ್ಥರು ಅಭಿನಂದಿಸಿದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಭೂನಹಳ್ಳಿ ಕೃಷ್ಣ ಮಾತನಾಡಿ ಗ್ರಾಮದಲ್ಲಿರವ ಸುಮಾರು 80 ಎಕರೆ ಜಮೀನಿಗೆ ಸುಗಮವಾದ ರಸ್ತೆ ವ್ಯವಸ್ಥೆ ಇರಲಿಲ್ಲ, ಸಾಕಷ್ಟು ಬಾರಿ ಮನವಿ ಮಾಡಿ, ಹೋರಾಟವನ್ನು ಮಾಡುತ್ತಾ ಬಂದಿದ್ದೆವು ಎಂದು ತಿಳಿಸಿದರು.
ರೈತರ ನೋವು ಮತ್ತು ಸಂಕಷ್ಟವನ್ನು ಅರಿತ ತಾಲೂಕು ತಹಸೀಲ್ದಾರ್ ಎಸ್.ವಿಶ್ವನಾಥ್ ದಾಖಲೆಗಳನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಸೂಚನೆ ನೀಡಿ, ಮೂಲ ನಕ್ಷೆಯಂತೆ ಸರ್ವೆಯರ್ ಮೂಲಕ ಅಳತೆ ಮಾಡಿಸಿ, ಒತ್ತುವರಿಯಾಗಿದ್ದ ರಸ್ತೆಯನ್ನು ಬಿಡಿಸುವುದರ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು
ಇದೇ ಸಂದರ್ಭದಲ್ಲಿ ಶಂಭೂನಹಳ್ಳಿ ಗ್ರಾಮಸ್ಥರಾದ ಅಶೋಕ್, ಉದಯಕುಮಾರ್, ಚನ್ನೇಗೌಡ, ಬೋರೇಗೌಡ ಮತ್ತಿತರರಿದ್ದರು.

Leave a Reply