
ಅವರು ಕಂದಾಯ ಇಲಾಖೆ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ತಾಲೂಕಿನ ಯಲಿಯೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಯಲಿಯೂರು ಗ್ರಾಮ ಪಂಚಾಯಿತಿ ಮಟ್ಟದ ಜನತಾದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದರು.
ಜನರಿಗೆ ಅನುಕೂಲವಾಗಲೆಂದು ಪೌತಿಖಾತೆ ಆಂದೋಲನವನ್ನು ಸರ್ಕಾರ ಮಾಡಿಸುತ್ತಿದೆ.
ಯಲಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 51 ಪೌತಿಖಾತೆ ಪ್ರಕರಣಗಳು ನ್ಯಾಯಾಲಯ ದಲ್ಲಿವೆ.ಇಂತಹ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಂಡು ಅಥವಾ ಅಧಿಕಾರಿಗಳ ಮೂಲಕ ಕುಳಿತು ಬಗೆಹರಿಸಿಕೊಂಡು ಒಂದು ದಿನಾಂಕ ನಿಗದಿ ಮಾಡಿ ಪೌತಿ ಖಾತೆ ಮಾಡಿಸಿಕೊಳ್ಳಿ.ಸರ್ಕಾರದ ಸೌಲಭ್ಯ ಹಾಗೂ ಸರ್ಕಾರದ ಸಹಾಯಧನ ಪಡೆಯಲು ಆರ್ಟಿಸಿ ಬೇಕು, ಅದಕ್ಕಾಗಿ ಸಂಬಂಧ ಪಟ್ಟವರು, ವಾರಸುದಾರರು ಪೌತಿಖಾತೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ರೈತ ಸಮುದಾಯ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಇಲಾಖಾ ಅಧಿಕಾರಿ ಗಳನ್ನು ಮನೆ ಬಾಗಿಲಿಗೆ ಬಂದು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಜನ ಸಂಪರ್ಕ ಸಭೆಯನ್ನು ನಡೆಸಲಾಗುತ್ತಿದೆ.ಈಗಾಗಲೇ ಸಭೆ ನಡೆಸಿ ಸಮಸ್ಯೆಗಳ ಅರ್ಜಿಗಳನ್ನು ಸ್ವೀಕರಿಸಿ,ಸೂಕ್ತ ಪರಿಹಾರ ಒದಗಿಸಲಾಗಿದೆ ಎಂದು ತಿಳಿಸಿದರು
ಯಲಿಯೂರು ಗ್ರಾಮದ ಕೋಡಿಯಿಂದ ಯಲಿಯೂರು ಗ್ರಾಮದವರೆಗೂ ರಸ್ತೆ ಅಭಿವೃದ್ಧಿ, ಯಲಿಯೂರು -ಎಲೆಚಾಕನಹಳ್ಳಿ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು ಶೀಘ್ರದಲ್ಲೇ ಟೆಂಡರ್ ಮಾಡಿಸಿ ಅಭಿವೃದ್ಧಿ ಮಾಡಲಾಗುವುದು. ಯಡಿಯೂರು- ವೈ.ಯರಹಳ್ಳಿ ರಸ್ತೆ, ಯಲಿಯೂರು ಗ್ರಾಮದ ಒಳಗಡೆ ರಸ್ತೆಗಳು ಸೇರಿದಂತೆ ಎಲ್ಲವನ್ನು ಅಭಿವೃದ್ಧಿಪಡಿಸಿ ಸಮಸ್ಯೆಗಳು ಇದ್ದರೆ ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿ,ಗ್ರಾಮೀಣ ಭಾಗದ ಜನರು ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಲು ತಾಲೂಕು ಕಚೇರಿಗೆ ಬರುತ್ತೀರಿ.ಆದ್ದರಿಂದ ಜನತಾದರ್ಶನ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಆಲಿಸಿ ಇಲ್ಲಿಯೇ ಬಗೆಹರಿಸಲು ಕಾರ್ಯ ಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಸ್.ವಿಶ್ವನಾಥ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮೂರ್ತಿ, ಎಡಿಎಲ್ ಆರ್ ಮಮತಾ, ಸಹಾಯಕ ಕೃಷಿ ಅಧಿಕಾರಿ ಸುನಿತಾ, ತಾಲೂಕು ಆರೋಗ್ಯ ಅಧಿಕಾರಿ ಜವರೇಗೌಡ,ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ್,ಉಪ ತಹಶೀಲ್ದಾರ್ ಗೌರಮ್ಮ, ಕಂದಾಯ ಅಧಿಕಾರಿ ವೆಂಕಟೇಶ್,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಬಿ.ಪ್ರಸನ್ನ ಕುಮಾರ್, ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply