
ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿಯಮಿತ ಅಧ್ಯಕ್ಷರಾಗಿ ಹೆಚ್.ಎಸ್.ದೀಪಕ್ ಹಾಗೂ ಉಪಾಧ್ಯಕ್ಷರಾಗಿ ಮಂಜುಳಾ ಕೃಷ್ಣೇಗೌಡ ಅವರು ಅವಿರೋಧವಾಗಿ ಆಯ್ಕೆಯಾದರು.
೧೭ ಮಂದಿ ನಿರ್ದೇಶಕರಿರುವ ೨೦೨೫- ೨೦೩೦ ನೇ ಸಾಲಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದೀಪಕ್ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಮಂಜುಳಾ ನಾಮಪತ್ರ ಸಲ್ಲಿಸಿದರು.ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅನಿತಾ ಅವರು ಇವರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ದೀಪಕ್ ಮಾತನಾಡಿ ಎಲ್ಲರ ಸಹಕಾರದಿಂದ ಅಧ್ಯಕ್ಷ ಸ್ಥಾನ ಸಿಕ್ಕಿದೆ.ಸಂಘದ ಹಿರಿಯರ ಮಾರ್ಗದರ್ಶನದಲ್ಲಿ ಅಭಿವೃದ್ದಿ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿರ್ದೇಶಕ ಬೇಲೂರು ಸೋಮಶೇಖರ್ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಗಣಿಗ ರವಿಕುಮಾರ್ , ಉದಯ್,ಪಕ್ಷಾತೀತವಾಗಿ ಹಾಗೂ ೧೭ ಜನ ನಿರ್ದೇಶಕರ ಸಹಕಾರದೊಂದಿಗೆ ನಾಮ ನಿರ್ದೇಶಕ ಸದಸ್ಯರಾದ ದೀಪಕ್ ಅವರು ಕಳೆದ ಬಾರಿ ಅಧ್ಯಕ್ಷರಾಗಲು ಅವಕಾಶ ವಂಚಿತರಾಗಿದ್ದರು.ಈ ಬಾರಿ ದೀಪಕ್ ಅವರನ್ನು ಒಮ್ಮತವಾಗಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿಯೇ ಶಿರಸಿ ಹಾಗೂ ಮಂಡ್ಯ ಅತ್ಯಂತ ಹಳೇಯದಾದ ಮುದ್ರಣ ಸಹಕಾರಿ ಸಂಸ್ಥೆಯಾಗಿದೆ. ಇಂತಹ ಮಂಡ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗೆ ಹೊಸ ಪ್ರಿಂಟಿಂಗ್ ಪ್ರೆಸ್ ತಂದಿದ್ದೇವೆ.ಇಂತಹ ಸಹಕಾರ ಸಂಸ್ಥೆ ಉಳಿಯಬೇಕು.ಸಂಘದ ಹಿರಿಯರ ಮಾರ್ಗದರ್ಶನದಲ್ಲಿ ಅಭಿವೃದ್ದಿ ಕೆಲಸ ಮಾಡಲು ನೂತನ ಆಡಳಿತ ಮಂಡಳಿ ಪ್ರಯತ್ನ ಪಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿಯಮಿತ ನಿರ್ದೇಶಕರಾದ ಎನ್.ದಾಸೇಗೌಡ,ಹೆಚ್.ಎಂ.ಸಿದ್ದರಾಜು, ಬಿ.ವಿ.ಹರೀಶ್, ಎ.ಆರ್. ರಾಜ ನಾಯಕ, ಕೆ.ಟಿ.ಗಿರೀಶ್, ಟಿ.ಬಿ. ಚೈತ್ರ , ಡಿ.ಕೃಷ್ಣೇಗೌಡ, ಪಿ.ಕೆ.ಚಂದ್ರಶೇಖರ್, ಉಮೇಶ್, ಟಿ.ಎಲ್.ನಾಗರಾಜ, ಎಂ.ಎನ್.ಶಿವನಾಗರಾಜು, ಬಿ.ಡಿ.ಧನಂಜಯ,ರೇಣುಕಾ, ಲತಾಮುರಳಿ ಅಭಿನಂದಿಸಿದರು.

Leave a Reply