
ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಬಂಡಿಸಿದ್ದೇಗೌಡ ಫೌಂಡೇಶನ್ ವತಿಯಿಂದ ಮಂಡ್ಯ ನಗರದ ಮರೀಗೌಡ ಬಡಾವಣೆಯಲ್ಲಿರುವ ಆಶಾ ಸದನ ವಿಶೇಷ ಚೇತನ ಮಕ್ಕಳ ಶಾಲೆಗೆ 9ಲಕ್ಷ ರೂ. ವೆಚ್ಚದ ನೂತನ ಶಾಲಾ ವಾಹನವನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಉಚಿತವಾಗಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಂಡಿಸಿದ್ದೇಗೌಡ ಫೌಂಡೇಶನ್ ವತಿಯಿಂದ ಹಲವು ಜನೋಪಯೋಗಿ ಕೆಲಸಕ್ಕೆ ಚಾಲನೆ ನೀಡಿದ್ದೇವೆ. ಆಶಾ ಸದನ ಶಾಲೆಯು ಈ ಭಾಗದಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ಒಳ್ಳೆಯ ಸೇವೆ ಮಾಡುತ್ತಿದ್ದು,ಅಂಗವಿಕಲರು ಹಾಗೂ ಬುದ್ದಿಮಾಂದ್ಯ ಮಕ್ಕಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸಣ್ಣ ಕೊಡುಗೆಯಾಗಿ ಬಂಡಿಸಿದ್ದೇಗೌಡ ಫೌಂಡೇಶನ್ ವತಿಯಿಂದ ಶಾಲಾ ವಾಹನ ವಿತರಣೆ ಮಾಡಿದ್ದೇವೆ ಎಂದು ಹೇಳಿದರು.
ಬಂಡಿಸಿದ್ದೇಗೌಡ ಫೌಂಡೇಶನ್ ವತಿಯಿಂದ ಲ್ಯಾಪ್ಟಾಪ್ ವಿತರಣೆ ಮಾಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಿದ್ದು,ಈಗಾಗಲೇ ರೂ.1300ಕ್ಕೂ ಅರ್ಜಿಗಳು ಬಂದಿದ್ದು ಮೊದಲ ಹಂತವಾಗಿ ಫೆಬ್ರವರಿ ಕೊನೆಯ ವಾರದಲ್ಲಿ ಸಮಯ ನಿಗದಿ ಮಾಡಿ ಪ್ರಥಮ ವರ್ಷದ ಬಿಇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬಂಡಿ ಸಿದ್ದೇಗೌಡ ಫೌಂಡೇಶನ್ ವತಿಯಿಂದ 500 ಲ್ಯಾಪ್ಟಾಪ್ ಕೊಡುವ ಕಾರ್ಯಕ್ರಮಕ್ಕೂ ಚಾಲನೆ ನೀಡುತ್ತೇವೆ.
ನಂತರ ಹಂತ ಹಂತವಾಗಿ ಉಳಿದವರಿಗೂ ಲ್ಯಾಪ್ ಟಾಪ್ ಕೊಡುವ ಕಾರ್ಯಕ್ರಮಕ್ಕೂ ಚಾಲನೆ ನೀಡುತ್ತೇವೆ ಎಂದರು.
ಈ ವೇಳೆ ಮುಖಂಡರಾದ ಕಾಳೇನಹಳ್ಳಿ ಮಂಜುನಾಥ್, ಎಂ.ಯಶಸ್,ಕೃಷ್ಣ,ಸೆಂಟ್ ಥಾಮಸ್ ಮಿಷನ್ ಸೊಸೈಟಿ ಅಧ್ಯಕ್ಷ ಫಾ.ಸೌಜನ್, ಕಾರ್ಯದರ್ಶಿ ಜಿ.ಬಿ.ಅಂಟೆ ನಿರ್ದೇಶಕ ಫಾ.ಹಬಿ,ಪ್ರಾಂಶುಪಾಲ ಪಾಜಾಯಿಸನ್ ಜೋಸ್ ಸೇರಿದಂತೆ ಇತರರು ಇದ್ದರು

Leave a Reply