Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಚಿಕ್ಕಬಾಣಸವಾಡಿ ಡೈರಿ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ

ಮಂಡ್ಯ ತಾಲೂಕಿನ ಚಿಕ್ಕಬಾಣಸವಾಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆಯನ್ನು ಮಂಡ್ಯ ಶಾಸಕ ರವಿಕುಮಾರ್ ಗೌಡ ನೆರವೇರಿಸಿದರು

ನಂತರ ಮಾತನಾಡಿದ ಶಾಸಕ ರವಿಕುಮಾರ್ ಮಾತನಾಡಿ ಮುಂದಿನ ದಿನಗಳಲ್ಲಿ ಹಾಲಿನ ಡೇರಿಗಳು ಆರ್ಥಿಕತೆ ಶಕ್ತಿ ಕೇಂದ್ರಗಳಾಗಲಿವೆ. ಒಂದು ಡೇರಿ ಬಂದರೆ ಆ ಗ್ರಾಮ ಅಭಿವೃದ್ಧಿಯಾಗುತ್ತದೆ. ಅದಲ್ಲದೆ ಬೇರೆ ಬೇರೆ ಅಭಿವೃದ್ಧಿಗಳು ಹಾಲಿನ ಡೇರಿಯಲ್ಲಿ ಆಗಲಿದ್ದು, ಅದಕ್ಕೆ ಅನುಗುಣವಾಗಿ ಕಟ್ಟಡವನ್ನು ರೂಪಿಸಿಕೊಳ್ಳಿ, ನಿರ್ಮಾಣದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಸಿ.ಕೆ ಮಾತನಾಡಿ ಗ್ರಾಮದಲ್ಲಿ ಹಾಲಿನ ಡೇರಿಯು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಸುಮಾರು ₹15 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪ್ರಕಾಶ್, ನಿರ್ದೇಶಕರುಗಳಾದ ಜಗದೀಶ್, ಪಾಪೇಗೌಡ,ಲಿಂಗಪ್ಪ, ರಮೇಶ್, ಸುಜಾತ ಸೋಮೇಗೌಡ,ಮಮತಾ ಪಂಚಲಿಂಗ, ಪ್ರಸನ್ನ ಕುಮಾರ್, ಆನಂದ,ಶಂಕರ್ ನರಸಿಂಹಮೂರ್ತಿ, ವಿಸ್ತರಣಾಧಿಕಾರಿ ಇಂದ್ರ,ಕಾರ್ಯದರ್ಶಿ ವೇಣು ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *

error: Content is protected !!