Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ವಿಶೇಷ ಚೇತನರನ್ನು  ಸಮಾಜದ ಮುಖ್ಯವಾಹಿನಿಗೆ ತರಬೇಕು – ಡಾ.ಕುಮಾರ

ವಿಶೇಷ ಚೇತನರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಮತ್ತು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ರವರು ತಿಳಿಸಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಕಾರ್ಮಿಕ ಇಲಾಖೆ, ಅಂಗವಿಕಲರ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಮಂಡ್ಯ ಇವರ ಸಂಯುಕ್ತ ಆಶ್ರಯದಲ್ಲಿ ವಿಶೇಷಚೇತನರಿಗೆ ಕಾರ್ಪೋರೇಟ್ ಹಾಗೂ ಇತರೆ ಖಾಸಗಿ ಕಂಪನಿಗಳ ಕಾರ್ಪೋರೇಟ್ ನಿಧಿಯಿಂದ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಶೇಷ ಚೇತನರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರತಿಯೊಬ್ಬರ ಸಹಕಾರ ತುಂಬಾ ಅಗತ್ಯ ಎಂದು ಹೇಳಿದರು.

ಸಂಸ್ಥೆಗಳ ಅನುದಾನ ಬಳಸಿಕೊಂಡು ತ್ರಿಚಕ್ರ ವಾಹನವನ್ನು ವಿಶೇಷ ಚೇತನ ಪಲಾನುಭವಿಗೆ ನೀಡಲಾಗುತ್ತಿದ್ದು,ಅದರಿಂದ ವಿಶೇಷ ಚೇತನರು ಅವರ ಬದುಕಿನಲ್ಲಿ ಸ್ವಾವಲಂಬಿಗಳ ಆಗುವಂತೆ ಪ್ರೇರೇಪಿಸಬೇಕು ಎಂದು  ಹೇಳಿದರು.

ವಿಶೇಷ ಚೇತನರನ್ನು ಗೌರವಿಸಬೇಕು ಮತ್ತು ಹೆಚ್ಚು ಹೆಚ್ಚು ಅವಕಾಶಗಳನ್ನು ಕಲ್ಪಿಸಬೇಕು ಶೈಕ್ಷಣಿಕ ಅರ್ಹತೆ ಅನುಗುಣವಾಗಿ ಬೇರೆ ಬೇರೆ ಕಡೆ ಉದ್ಯೋಗ ಅವಕಾಶಗಳನ್ನು ನೀಡಿ ಸ್ವಾವಲಂಬಿಯಾಗಿ ಜೀವನ ನಡೆಸುವಂತೆ ಮಾಡಬೇಕು. ಸರ್ಕಾರದ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಚೇತನ ಫಲಾನುಭವಿಯಾದ ರಾಮಕೃಷ್ಣ ರವರಿಗೆ ತ್ರಿಚಕ್ರ ವಾಹನ ನೀಡಿಲಾಯಿತು.

ಕಾರ್ಯಕ್ರಮದಲ್ಲಿ ಮಂಡ್ಯ ಡಯೋಗ್ನೋಸ್ಟಿಕ್ ಸೆಂಟರ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಎಂ ಎಸ್ ಸಿದ್ದೇಗೌಡ, ಡಯಾಗ್ನೋಸ್ಟಿಕ್ ಸೆಂಟರ್ ಅಧ್ಯಕ್ಷರಾದ ಡಾ. ಬಿ ಡಿ ಕೃಷ್ಣಪ್ಪ, ಡಾ.ನಂದೀಶ್ ಮಂಡ್ಯ  ಕಾರ್ಮಿಕ ಅಧಿಕಾರಿ ಡಾ. ಎಂ ಸವಿತ ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!