Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಬಿಜೆಪಿ ಸಹ ಪ್ರಭಾರಿಯಾಗಿ ಡಾ.ಈ.ಸಿ.ನಿಂಗರಾಜ್ ಗೌಡ ನೇಮಕ


ಭಾರತೀಯ ಜನತಾ ಪಾರ್ಟಿಯ ಮೈಸೂರು ವಿಭಾಗದ ಸಹ ಪ್ರಭಾರಿಯಾಗಿ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡರವರನ್ನೂ ಬಿಜೆಪಿಯ ರಾಜ್ಯ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರು ನೇಮಿಸಿದ್ದಾರೆ.

ಡಾ.ಈ.ಸಿ.ನಿಂಗರಾಜ್ ಗೌಡರವರು ಬಿ.ಎಸ್ಸಿ., ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ದಲ್ಲಿ ಸ್ನಾತಕೋತ್ತರ ಪದವಿ.,  ಎಂ.ಎ ರಾಜ್ಯಶಾಸ್ತ್ರ.,  ಎಂ.ಎ ಪತ್ರಿಕೋದ್ಯಮ., ಗ್ರಾಮೀಣ ಅಭಿವೃದ್ದಿ., ಮಾನವ ಸಂಪನ್ಮೂಲ., ಎಂ. ಫಿಲ್., ಪತ್ರಿಕೋದ್ಯಮ ವಿಷಯದಲ್ಲಿ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ತಲೆಬರಹದ ಮೇಲೆ ಪಿ.ಹೆಚ್.ಡಿ ಸೇರಿದಂತೆ 9 ವಿಷಯಗಳಲ್ಲಿ ಅಧ್ಯಯನ ಮಾಡಿ ಪದವಿ ಪಡೆದಿದ್ದಾರೆ.  

ಕಳೆದ 37 ವರ್ಷಗಳಿಂದ ಸಂಘ – ಪರಿವಾರದ ಸಕ್ರೀಯ ಕಾರ್ಯಕರ್ತರಾಗಿರುವ ಇವರು ಪ್ರೌಢಶಾಲೆಯ ವಿದ್ಯಾರ್ಥಿ ಆಗಿದ್ದಾಗಲೇ ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ (RSS), ಮಂಡ್ಯದ ಪಿ.ಇ.ಎಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತೀದಾಗಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ (ABVP) ಕಾರ್ಯಕರ್ತರಾಗಿ ಮಂಡ್ಯ ನಗರ ಕಾರ್ಯದರ್ಶಿ, ಮಂಡ್ಯ ಜಿಲ್ಲಾ ಪ್ರಮುಖ್, ಮೈಸೂರು ಜಿಲ್ಲಾ ಪ್ರಮುಖ್, ರಾಜ್ಯ ಸಹ ಕಾರ್ಯದರ್ಶಿ, ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಒಳಗೊಂಡಂತಹ ಮೈಸೂರು ವಿಭಾಗ ಪ್ರಮುಖ್ ಆಗಿ, ಹೀಗೆ ಎಬಿವಿಪಿಯಲ್ಲಿ ಹಲವಾರು ಜವಬ್ದಾರಿಗಳನ್ನೂ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅದಲ್ಲದೇ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ರಾಜ್ಯ ಅಧ್ಯಕ್ಷರಾಗಿದ್ದ ಪದ್ಮಶ್ರೀ ಪುರಸ್ಕೃತರಾದ ಡಾ.ದೊಡ್ಡರಂಗೇಗೌಡರವರ ಅವಧಿಯಲ್ಲಿ,  ಪ್ರಧಾನ ಕಾರ್ಯದರ್ಶಿಯಾಗಿ ಡಾ.ಈ.ಸಿ.ನಿಂಗರಾಜ್ ಗೌಡರವರು ಮೈಸೂರಿನಲ್ಲಿಯೇ ನಡೆದ ರಾಜ್ಯ ಸಮ್ಮೇಳನವೂ ಯಶಸ್ವಿಯಾಗುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಸಮ್ಮೇಳನದಲ್ಲಿ ಡಾ.ಎಸ್.ಎಲ್.ಭೈರಪ್ಪ, ಪ್ರೊ. ಪ್ರೇಮಶೇಖರ್, ಪ್ರೊ.ಸಿ.ಪಿ.ಕೆ, ರಘುನಂದನ್ ಭಟ್, ನಾರಾಯಣ ಶೇವಿರೆ, ಶ್ರೀಮತಿ ಪ್ರಮೋದದೇವಿ ಒಡೇಯರ್ ಮುಂತಾದವರು ಭಾಗವಹಿಸಿದ್ದನ್ನೂ ಸ್ಮರಿಸಬಹುದಾಗಿದೆ. ಅದಲ್ಲದೇ ಭಾರತೀಯ ಕಿಸಾನ್ ಸಂಘ, ವಿಶ್ವ ಹಿಂದೂ ಪರಿಷದ್, ವನವಾಸಿ ಕಲ್ಯಾಣ ಆಶ್ರಮ, ಸಂಸ್ಕೃತ ಭಾರತಿ, ಭಾರತೀಯ ಮಜ್ದೂರ್ ಸಂಘ ಸೇರಿದಂತೆ ಸಂಘ – ಪರಿವಾರದ ಹಲವಾರು ಸಂಘಟನೆಗಳಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಿದ್ದಾರೆ.

ಸಂಘಟನಾ ಚತುರ ಎಂದೇ ಗುರುತಿಸಲ್ಪಟ್ಟಿರುವ ಡಾ.ಈ.ಸಿ.ನಿಂಗರಾಜ್ ಗೌಡ ಅವರು ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಈರೇಗೌಡನಕೊಪ್ಪಲು ಗ್ರಾಮದವರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ.  ಮಂಡ್ಯದ ಪ್ರತಿಷ್ಠಿತ ಪಿಇಎಸ್‌ ಕಾಲೇಜಿನಲ್ಲಿ ಪಿಯುಸಿ,  ಬಿಎಸ್‌ಸಿ (ಪಿಸಿಎಂ) ಕಲಿತವರು.  ಮಂಡ್ಯ ಜಿಲ್ಲೆಯಲ್ಲಿ ಎಬಿವಿಪಿ ಸಂಘಟಿಸಿದವರಲ್ಲಿ ಪ್ರಮುಖರು. ಎಬಿವಿಪಿ ಸಂಘಟನೆ ವೇಳೆ ನಿರಂತರವಾಗಿ ಹೋರಾಟ ರೂಪಿಸಿದವರು. ಎಡಪಂಥೀಯ ಸಂಘಟನೆಗಳು ಕಾಲೇಜಿನಲ್ಲಿ ಎಬಿವಿಪಿ ಸಂಘಟಿಸಲು ಅಡ್ಡಿಪಡಿಸಿದಾಗ ಎದೆಗುಂದದೆ ದಿಟ್ಟವಾಗಿ ಎದುರಿಸಿದವರು. ಆ ಕಾರಣಕ್ಕೆ ಆದಾಗಲೇ ರಾಜ್ಯಮಟ್ಟದ ನಾಯಕರ ಗಮನ ಸೆಳೆದಿದ್ದರು.

ನಂತರ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿಯೂ ಎಬಿವಿಪಿ ಸಂಘಟನೆಯಲ್ಲಿ ಪ್ರಭಾವ ತೋರಿದವರು. ಮೈಸೂರು ವಿವಿಯ ಮಾನಸ ಗಂಗೋತ್ರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಾಮಿ ವಿವೇಕಾನಂದ ಜಯಂತಿ, ಸುಭಾಷ್ ಚಂದ್ರ ಬೋಸ್ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದರು. ಆದರೆ, ಕೆಲವರ ಕೆಂಗಣ್ಣಿಗೂ ಗುರಿಯಾದರು. ಈ ವೇಳೆ, ಅವರ ಬೆಂಬಲಿಗರ ಮೇಲೆ ಹಲ್ಲೆ ಕೂಡ ನಡೆದಿತ್ತು. ಅಂದಿನ ಕೇಂದ್ರ ಗೃಹ ಸಚಿವರಾದ ಲಾಲ್ ಕೃಷ್ಣ ಆಡ್ವಾನಿ ಅವರೇ ಮೈಸೂರು ಪೋಲಿಸ್ ಕಮಿಷನರ್ ಗೆ ಪೋನ್ ಮಾಡಿ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೂಳ್ಳುವಂತೆ ಸೂಚಿಸಿದ್ದರು. ಅನಂತರ ಡಾ. ಈ.ಸಿ. ನಿಂಗರಾಜ್ ಗೌಡರವರ ಹೋರಾಟ ಮತ್ತಷ್ಟು ಪ್ರಖರತೆ ಪಡೆದುಕೊಂಡಿತ್ತು.

ಮಂಡ್ಯದ ಪಿಇಎಸ್ ಪ್ರತಿಷ್ಠಿತ ಕಾಲೇಜು. ಈ ಕಾಲೇಜಿನಲ್ಲಿ ಕಲಿಯುತ್ತೀರುವಾಗಲೇ ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡಿದ್ದ ನಿಂಗರಾಜ್ ಗೌಡ ಅವರು,  ಸಂಘಟನೆ ಮೂಲಕವೇ ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ  ಬಹುತೇಕ ಹಳ್ಳಿಗಳ ಮನೆ ಮನೆಗೆ ಭೇಟಿ ನೀಡುತ್ತೀದ್ದ ಅವರು ನಾಲ್ಕು ಜಿಲ್ಲೆಗಳಲ್ಲೂ ಚಿರಪರಿಚಿತರಾಗಿ ತಮ್ಮದೇ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ಅಪಾರ ಸ್ನೇಹಿತರು, ಪದವೀಧರರು, ಶಿಕ್ಷಕರು, ಎಲ್ಲಾ ಸಂಘಟನೆಗಳ ಕಾರ್ಯಕರ್ತರು, ಮುಖಂಡರ ನಡುವೆ ಉತ್ತಮ ಒಡನಾಟ ಹೊಂದಿದ್ದಾರೆ ಹಾಗೂ ದೊಡ್ಡ ಅಭಿಮಾನಿ ಪಡೆಯನ್ನೇ ನಿಂಗರಾಜ್ ಗೌಡರು ಹೊಂದಿದ್ದಾರೆ. ಈಗ ಬಿಜೆಪಿ ಹೈಕಮಾಂಡ್ ಅವರನ್ನೂ ಮೈಸೂರು ವಿಭಾಗದ ಸಹ ಪ್ರಭಾರಿಯಾಗಿ ನೇಮಕ ಮಾಡಿದೆ. ಈ ನೇಮಕದಿಂದ ಮೈಸೂರು ವಿಭಾಗದ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿದೆ.

ಮೈಸೂರು ವಿವಿಯ ಸಿಸ್ಟ್ ನಲ್ಲಿ ಗ್ರಂಥಪಾಲಕರಾಗಿ ಮತ್ತು ಕರ್ನಾಟಕ ಸರ್ಕಾರದ ಆಡಳಿತ ತರಬೇತಿ ಸಂಸ್ಥೆಯಲ್ಲಿ ಮುಖ್ಯ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತೀರುವಾಗಲೇ ವಿಧಾನ ಪರಿಷತ್ ನ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸುವ ಸಲವಾಗಿಯೇ ಡಿಸೆಂಬರ್ 2022 ನೇ ಇಸವಿಯಲ್ಲಿ ಸರ್ಕಾರಿ ಊದ್ಯೋಗದಿಂದ ಸ್ವಯಂನಿವೃತ್ತಿ ಪಡೆದು ಕೊಂಡಿದ್ದಾರೆ. ತದನಂತರ ಬಿಜೆಪಿ ಹೈಕಮಾಂಡ್ ನಿಂದ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೇ ಟಿಕೇಟ್ ಘೋಷಣೆ ಮಾಡಿ ನಾಮಪತ್ರವನ್ನೂ ಸಲ್ಲಿಸಿದ್ದರು.   ಆದರೆ ಎನ್. ಡಿ. ಎ ಗೆ ಸೀಟು ಬಿಟ್ಟುಕೊಡಬೇಕೇಂಬ ವರಿಷ್ಠರ ಮನವಿಗೆ ಸ್ಪಂದಿಸಿ, ಬೇಷರತ್ ಆಗಿ ನಾಮಪತ್ರ ಹಿಂತೆಗೇದು ಕೊಳ್ಳುವುದರ ಮೂಲಕ ವ್ಯಕ್ತಿಗಿಂತ ಪಕ್ಷ ಮುಖ್ಯ ಅನ್ನುವ ತತ್ತ್ವ-ಸಿದ್ಧಾಂತಕ್ಕೇ ಉತ್ತಮ ಉದಾಹರಣೆ ಆಗುವ ಮೂಲಕ ವರಿಷ್ಠರ ಪ್ರಶಂಸೆಗೆ ಡಾ.ಈ.ಸಿ.ನಿಂಗರಾಜ್ ಗೌಡರವರು ಪಾತ್ರರಾಗಿದ್ದಾರೆ.  1994 ರಿಂದಲೂ ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭೆ ಸೇರಿದಂತೆ ಎಲ್ಲಾ ಸಾರ್ವತಿಕ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕ್ರೀಯಾಶೀಲವಾಗಿ ಶ್ರಮಿಸಿದ್ದಾರೆ. ಅಲ್ಲದೇ ಪಕ್ಷದಲ್ಲಿ ನಾನಾ ಹುದ್ದೆಗಳನ್ನು ಪಡೆದು ಪಕ್ಷದ ಸಂಘಟನೆಗೆ ದುಡಿದಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿ ಸದಸ್ಯರಾಗಿ, ಹಣಕಾಸು ಸಮಿತಿ ಸದಸ್ಯರಾಗಿ, ಕ್ರೀಡಾ ಸಮಿತಿ ಸದಸ್ಯರಾಗಿ, ಸಿಂಡಿಕೇಟ್ ಸದಸ್ಯರಾಗಿ ಯಶಸ್ವಿಯಾಗಿ, ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸಿ ವಿದ್ಯಾರ್ಥಿಗಳ, ಅಧ್ಯಾಪಕರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ. ಇದಲ್ಲದೇ ಕರ್ನಾಟಕ ಒಕ್ಕಲಿಗ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್, ರೋಟರಿ ಇಂಟರ್ ನ್ಯಾಷನಲ್,
ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್, ಮೈಸೂರು ಗ್ರಂಥಪಾಲಕರ ಮತ್ತು ಮಾಹಿತಿ ವಿಜ್ಞಾನಿಗಳ ಸಂಘದ (ಮೈಲಿಸಾ) ಅಧ್ಯಕ್ಷರಾಗಿ, ಪೂರ್ಣ ವಿಕಾಸ ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿ, ಮಂಡ್ಯದ ಕಲಾ ತಪಸ್ವಿ ಟ್ರಸ್ಟ್ , ಡಾ.ಜೀಶಂಪ ವೇದಿಕೆ ಮತ್ತು ಮೈಸೂರಿನ ವಿಶ್ವಮಾನವ ಟ್ರಸ್ಟ್ ನ ಗೌರವ ಅಧ್ಯಕ್ಷರಾಗಿ, ಕೆಬಿಎಲ್ ಸಿಧ್ದಿ ವಿನಾಯಕ ದೇವಸ್ಥಾನ ಟ್ರಸ್ಟ್ ನ ಕಾರ್ಯದರ್ಶಿಯಾಗಿ, ಇದರೊಂದಿಗೆ  ನಾನಾ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸೇವಾ ಚಟುವಟಿಕೆಗಳಲ್ಲಿ ಸದಾ ನಿರಂತರವಾಗಿ ಸಕ್ರಿಯರಾಗಿದ್ದಾರೆ.

ಕಳೆದ 37 ವರ್ಷಗಳಿಂದಲೂ ಸಂಘ – ಪರಿವಾರದ ಹಲವಾರು ಸಂಘಟನೆಗಳಲ್ಲಿ ಸಕ್ರೀಯವಾಗಿರುವ ಡಾ.ಈ.ಸಿ.ನಿಂಗರಾಜ್ ಗೌಡ ರವರು, 1992ರಲ್ಲಿ ಆಯೋಧ್ಯೆಯಲ್ಲಿ ನಡೆದ ಬಾಬ್ರಿ  ಮಸೀದಿ ವಿರುದ್ಧದ ಚಳುವಳಿ, ಜಮ್ಮು ಕಾಶ್ಮೀರದಲ್ಲಿ 370 ವಿಧಿ ರದ್ಧತಿ ಹೋರಾಟ, ರಾಮಮಂದಿರ ಹೋರಾಟ, 1996 ರಲ್ಲಿ ನಡೆದ ವಿಶ್ವ ಸೌಂದರ್ಯ ಸ್ಪರ್ಧೆ ವಿರೋಧಿ ಹೋರಾಟ, ರಾಷ್ಟ್ರೀಯ ಶಿಕ್ಷಣ ನೀತಿ (NEP), ರಾಷ್ಟ್ರೀಯ ಜಲನೀತಿ , ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೇ ಹೋರಾಟ, ರೈತ ಚಳುವಳಿ, ಕಾವೇರಿ ಹೋರಾಟಗಳಲ್ಲಿ ಸಕ್ರೀಯವಾಗಿ, ಕ್ರೀಯಾಶೀಲವಾಗಿದ್ದರು.  ಏಲ್ಲಾ ಹೋರಾಟಗಳಲ್ಲೂ ಮಂಚೂಣಿಯಲ್ಲಿದ್ದು ನೇತೃತ್ವವಹಿಸುತ್ತೀದ್ದರು. ಗ್ರಾಮೀಣ ಪ್ರದೇಶದ ಸಾಮಾನ್ಯ ರೈತ ಕುಟುಂಬದಿಂದ ಬಂದ ಡಾ.ಈ.ಸಿ.ನಿಂಗರಾಜ್ ಗೌಡರವರಿಗೆ ಸಾಮಾನ್ಯ ಜನರ ನೋವು- ನಲಿವಿನ ಜೊತೆಗೆ ಅವರ ನಾಡಿ ಮಿಡಿತವೂ ಚೆನ್ನಾಗಿಯೇ ತಿಳಿದಿದೆ.

ಓದು – ಬರಹ,  ಓಡಾಟ-ಪ್ರವಾಸ, ಸುತ್ತಾಟದ ಅಭಿರುಚಿ ಬೆಳೆಸಿಕೊಂಡಿರುವ ಡಾ.ಈ.ಸಿ.ನಿಂಗರಾಜ್ ಗೌಡ ಆವರು ವಿದ್ಯಾರ್ಥಿ ದೆಸೆಯಿಂದಲೂ ದೇಶದ ಬಹುತೇಕ ನಗರಗಳಿಗೂ ಶೈಕ್ಷಣಿಕ ಪ್ರವಾಸ ಮಾಡಿದ್ದಾರೆ. ಕಳೆದ ವರ್ಷ ನಡೆದ ಪ್ರಯಾಗರಾಜ್ ನ ಮಹಾ ಕುಂಭಮೇಳ ಸೇರಿದಂತೆ ಎಲ್ಲಾ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆದಿದ್ದಾರೆ. ಲಕ್ಷ ದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಿಗೂ ಬೇಟಿ ನೀಡುವುದರ ಮೂಲಕ ಸಾಮಾಜಿಕ ಜನ ಜೀವನ ಮತ್ತು ರಾಜಕೀಯ ಅನುಭವವನ್ನೂ ಪಡೆದಿದ್ದಾರೆ. ಭಾರತ ದೇಶದ ಜೊತೆಗೆ ಜಪಾನ್, ಇಂಡೋನೇಶಿಯಾ, ಶ್ರೀಲಂಕಾ, ಮಾಲ್ಡಿವ್ಸ್,
ರಷ್ಯಾ, ಉಜ್ಬೇಕಿಸ್ದಾನ್,  ಕಜಕೀಸ್ಡಾನ್,  ಕಿರ್ಗೀಸ್ಥಾನ್,  ಹಾಕಾಂಗ್, ಮಾಖವೋ,
ಯುಎಇ, ಕತಾರ್ , ಟರ್ಕಿ, ಜಾರ್ಜೀಯಾ, ಅರ್ಮೇನಿಯಾ, ಅಜರ್ ಬೈಜಾನ್, ಜರ್ಮನಿ, ಇಟಲಿ, ಪ್ರಾನ್ಸ್,  ಬೆಲ್ಜೀಯಮ್, ನೇದರ್ ಲ್ಯಾಂಡ್,
ಸ್ಸೀಟ್ಜರ್ ಲ್ಯಾಂಡ್ ಸೇರಿದಂತೆ ಸುಮಾರು 28 ದೇಶಗಳಿಗೆ  ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ.

ಬಿಜೆಪಿಯ ರಾಜ್ಯ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.
ಸಂತೋಷ್ ಜಿ, ಮಾಜಿ ಮುಖ್ಯಮಂತ್ರಿಯವರಾದ ಬಿ.ಎಸ್.
ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ವಿ.ಸೋಮಣ್ಣ, ಶೋಭಾ ಕರದ್ಲಾಂಜೆ, ಮಾಜಿ ಉಪ ಮುಖ್ಯಮಂತ್ರಿಯವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಆರ್‌.ಅಶೋಕ್,  ಗೋವಿಂದ ಕಾರಜೋಳ, ಶ್ರೀರಾಮಲು, ಸಿ.ಟಿ.ರವಿ, ಎನ್. ರವಿಕುಮಾರ್,
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೀತಮ್ ಗೌಡ, ವಿ.ಸುನೀಲ್ ಕುಮಾರ್, ಪಿ.ರಾಜೀವ್, ನಂದೀಶ್ ರೆಡ್ಡಿ, ತಮ್ಮೇಶ ಗೌಡ, ಶಾಸಕರಾದ ಟಿ.ಎಸ್.ಶ್ರೀವತ್ಸ, ಸಕಲೇಶಪುರದ ಸಿಮೆಂಟ್ ಮಂಜು, ಬೇಲೂರಿನ ಸುರೇಶ್‌ , ಸಂಸದರಾದ ಶ್ರೀ ಕೃಷ್ಣದತ್ತ ಯಧುವೀರ್ ಒಡೇಯರ್ ಸೇರಿದಂತೆ ಮಾಜಿ ಶಾಸಕರು, ಮಾಜಿ ಸಂಸದರು, 5 ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರು, ಎಲ್ಲಾ ಪದಾಧಿಕಾರಿಗಳು, ಎಲ್ಲಾ ಬಿಜೆಪಿಯ ಹಿರಿಯ ಕಾರ್ಯಕರ್ತರು, ಸಂಘ- ಪರಿವಾರದ ಎಲ್ಲಾ ಹಿರಿಯರೊಂದಿಗೂ ಉತ್ತಮ ಒಡನಾಟ ಮತ್ತು ಭಾಂಧವ್ಯವನ್ನೂ ಡಾ.ಈ.ಸಿ. ನಿಂಗರಾಜ್ ಗೌಡರವರು ಹೊಂದಿರುವುದು ಬಿಜೆಪಿ ಸಂಘಟನೆಯ ಬೆಳವಣೆಗೆಗೆ ಆನೂಕೂಲವಾಗಲಿದೆ.

Leave a Reply

Your email address will not be published. Required fields are marked *

error: Content is protected !!