Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸಂತಲಾಲ್ ಮಹಾರಾಜರ ಆದರ್ಶ, ಮೌಲ್ಯಗಳನ್ನು ಅಳವಡಿಸಿಕೊಳ್ಳಿ : ಶಾಸಕ ರವಿಕುಮಾರ್

ಮಂಡ್ಯ : ಸಂತಲಾಲ್ ಮಹಾರಾಜ ಅವರು ನೀಡಿದ ತತ್ವಗಳು , ಆದರ್ಶ, ಸಾಮಾಜಿಕ ಹೋರಾಟ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಅವರ ಆದರ್ಶ, ಮೌಲ್ಯಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಂಡ್ಯ ವಿಧಾನ ಕ್ಷೇತ್ರದ ಶಾಸಕರಾದ ಪಿ.ರವಿಕುಮಾರ್ ಅವರು ಹೇಳಿದರು.

ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ ಜಿಲ್ಲೆ ಲಂಬಾಣಿ (ಬಂಜಾರ )ಸೇವಾ ಸಂಘ ಮಂಡ್ಯ ಇವರ ವತಿಯಿಂದ ನಗರದ ಹೊರವಲಯದಲ್ಲಿರುವ ಜಿ.ಟಿ ಲಲಿತ ನಾಯಕ್ ಬಡಾವಣೆಯಲ್ಲಿ ನಡೆದ ಶ್ರೀ ಸಂತ ಸೇವಾಲಾಲ್ ರವರ 287 ನೇ ಜಯಂತೋತ್ಸವವನ್ನು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಲೆಮಾರಿ ಬಂಜಾರ ಜನರನ್ನು ಒಗ್ಗೂಡಿಸಿ ಅವರಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಿ ತಾಂಡಾಗಳಲ್ಲಿ ಸ್ಥಿರ ಜೀವನ ನಡೆಸಲು ಪ್ರೇರೇಪಿಸಬೇಕು.
ಸಂತ ಸೇವಾಲಾಲ್ ಮಹಾರಾಜ ರವರು ಸರಳ ಜೀವನ, ಉನ್ನತ ಚಿಂತನೆ, ಪ್ರಾಣಿ ಬಲಿ ವಿರೋಧ, ಮದ್ಯಪಾನ ನಿಷೇಧ ಮತ್ತು ಮಹಿಳೆಯರಿಗೆ ಗೌರವ ನೀಡುವ ಬೋಧನೆಯನ್ನು ಮಾಡಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಬಿ. ವಿ.ನಂದೀಶ್, ಜಿಲ್ಲಾ ಲಂಬಾಣಿ (ಬಂಜಾರ) ಸೇವಾ ಸಂಘದ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ನಾಯಕ್, ಮುಖಂಡರುಗಳಾದ ಸುಂದರ್, ಮಮತಾ, ಆನಂದ್,ಪೂರ್ಣಚಂದ್ರ, ರುದ್ರಪ್ಪ,ಮಾನಪ್ಪ, ಲಂಬಾಣಿ ಸಿದ್ದನಾಯಕ್ ರಾಮದಾಸ್ ನಾಯಕ್ ಕುಮಾರ್ ನಾಯಕ್, ಜಯರಾಮ್ ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!