
ಮಂಡ್ಯ: ಮೆದುಳು ಹಾಗೂ ಹೃದಯ ಸಂಬಂಧಿತ ತುರ್ತು ಪರಿಸ್ಥಿತಿಯ ಮೊದಲ ಒಂದು ಗಂಟೆಯೊಳಗೆ (ಗೋಲ್ಡನ್ ಅವರ್) ಚಿಕಿತ್ಸೆ ಒದಗಿಸುವುದು ಅನಿವಾರ್ಯವಾಗಿರುತ್ತದೆ ಎಂದು ಮೈಸೂರಿನ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಬಿ.ಜೆ.ಸಂದೀಪ್ ಪಟೇಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಮಣಿಪಾಲ್ ಆಸ್ಪತ್ರೆಯನ್ನು ಅರಸಿ ಮಂಡ್ಯದಿಂದ ಹೆಚ್ಚು ರೋಗಿಗಳು ಭೇಟಿ ನೀಡುತ್ತಾರೆ. ಆದ ಕಾರಣ ಮೆದುಳಿನ ತುರ್ತು ಪರಿಸ್ಥಿತಿ ಹಾಗೂ ಹಠಾತ್ ಹೃದಯ ಸಂಬಂಧಿತ ಸಮಸ್ಯೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಎಂದರು.
ಬದಲಾದ ಜೀವನ ಶೈಲಿ, ಬಿಪಿ, ಮಧುಮೇಹದಂತಹ ಸಮಸ್ಯೆಗಳಿಂದಾಗಿ ಹೃದಯಾಘಾತಕ್ಕೆ ಹೆಚ್ಚು ಮಂದಿ ಒಳಗಾಗುತ್ತಿದ್ದಾರೆ. ಮಂಡ್ಯ ಮತ್ತು ಮೈಸೂರಿನಲ್ಲಿ ಪ್ರತಿ ೫ ಮಂದಿಯಲ್ಲಿ ಒಬ್ಬರು ಮಧುಮೇಹಕ್ಕೆ ಒಳಗಾಗಿರುತ್ತಾರೆ. ಹೃದಯ ಸಂಬಂಧ ಯಾವುದೇ ಲಕ್ಷಣಗಳನ್ನು ನಿರ್ಲಕ್ಷಿಸದೇ ಹತ್ತಿರದ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಬೇಕು. ಮಣಿಪಾಲ್ ಆಸ್ಪತ್ರೆಯಲ್ಲಿ ನುರಿತ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಸಮಸ್ಯೆ ಪತ್ತೆಯಾದ ಕೂಡಲೇ ದಾಖಲಾದಲ್ಲಿ ರೋಗಿಗಳನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದರು.
ನ್ಯೂರೋಸರ್ಜನ್ ಡಾ.ಎ.ಆರ್.ಮಕ್ಸೂದ್ ಅಹ್ಮದ್ ಮಾತನಾಡಿ, ಮೆದುಳು ಮತ್ತು ಹೃದಯ ಸಂಬಂಧಿತ ಅಟ್ಯಾಕ್ಗಳು ಒಂದೇ ಮಾದರಿಯವಾಗಿವೆ. ಎರಡಕ್ಕೂ ರಕ್ತನಾಳಗಳಲ್ಲಿ ರಕ್ತ ಸಂಚಲಕ್ಕೆ ಅಡ್ಡಿ ಉಂಟಾದಾಗ ಸಮಸ್ಯೆ ಎದುರಾಗುತ್ತದೆ. ಹೃದಯಕ್ಕೆ ಈಗಾಗಾಗ ಹೃದಯ ಸ್ತಂಭನವಾಗುತ್ತದೆ. ಆದರೆ ಮೆದುಳಿನಲ್ಲಿ ಆಯಾ ಭಾಗಕ್ಕೆ ರಕ್ತ ಸಂಚಲನ ನಿಂತಾಗ ದೇಹದ ಇದಕ್ಕೆ ಸಂಬಂಧಿತ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ ಎಂದು ಮಾಹಿತಿ ನೀಡಿದರು.
ತಲೆಗೆ ಪೆಟ್ಟಾದಾಗ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಅಗತ್ಯ. ಮೊದಲ ಎರಡು ಗಂಟೆಯಲ್ಲಿ ರೋಗಿಗೆ ಏನಾಗಿದೆ ಎಂಬುದನ್ನು ಪತ್ತೆಹಚ್ಚಲು ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು. ಇಲ್ಲವಾದಲ್ಲಿ ಎರಡನೇ ಹಂತದ ಬ್ರೈನ್ ಡ್ಯಾಮೆಜ್ ಆಗುವ ಸಾಧ್ಯತೆಗಳಿರುತ್ತವೆ. ಮೆದುಳಿಗೆ ಸಂಬಂಧಿಸದಂತೆ ಬಿ ಫಾಸ್ಟ್ (ಃಇ ಈಂSಖಿ) ವಿಧಾನದ ಮೂಲಕ ತರ್ತು ಚಿಕಿತ್ಸೆಯ ಅವಶ್ಯಕತೆ ತಿಳಿಯಬಹುದು. ಸ್ಥಿರತೆ, ಕಣ್ಣೋಟ, ಮುಖದಲ್ಲಿ ಸೆಳೆತ, ಅಂಗಗಳ ಅಲುಗಾಡಿಸುವಿಕೆ, ತೊದಲುವಿಕೆ, ಪರೀಕ್ಷೆ ಮೂಲಕ ಬ್ರೈನ್ ಸ್ಟ್ರೋಕ್ಗೆ ಚಿಕಿತ್ಸೆ ನೀಡಿ ಜೀವ ಉಳೀಸಬಹುದು ಎಂದು ಹೇಳಿದರು.
ಮಣಪಾಲ್ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಅಥವಾ ಬಡತನ ರೇಖೆಗಿಂತ ಕೆಳಗಿರುವವರಿಗೆ ಮಣಿಪಾಲ್ ಫೌಂಡೇಷನ್ನಿಂದ ಸಂಸ್ಥೆ ಸಿಆರ್ಎಸ್ ನಿಧಿಯಿಂದ ೧.೫ ಲಕ್ಷ ರೂ. ವರೆಗೆ ಚಿಕಿತ್ಸಾ ವೆಚ್ಚಕ್ಕೆ ನೆರವು ಮಾಡಲಾಗುವುದು. ಪ್ರತಿ ತಿಂಗಳು ಈ ರೀತಿ ೪೫ರಿಂದ ೫೦ ಲಕ್ಷ ರೂ.ಗಳ ವರೆಗೆ ಚಿಕಿತ್ಸೆ ವೆಚ್ಚ ಭರಿಸಲಾಗುತ್ತಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಗೋಷ್ಠಿಯಲ್ಲಿ ವೈದ್ಯರಾದ ಡಾ.ಸಿ.ಬಿ.ಕೇಶವಮೂರ್ತಿ, ಡಾ.ಕುಪೇಂದ್ರ ಶಣೈ ಇದ್ದರು.

Leave a Reply