Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಕ್ಷುಲ್ಲಕ ಕಾರಣಕ್ಕೆ ಸಾಮಾಜಿಕ ಹೋರಾಟಗಾರ ಎಚ್.ಎಸ್ ಸಾಗರ್ ಹಲ್ಲೆ : ಪ್ರಕರಣ ದಾಖಲು

ಕ್ಷುಲ್ಲಕ ಕಾರಣಕ್ಕೆ ಸಾಮಾಜಿಕ ಹೋರಾಟಗಾರ ಹುಲಿವಾನ ಗ್ರಾಮದ ಎಚ್ ಎಸ್ ಸಾಗರ್ ಅವರ ಮೇಲೆ ಮೂರು ಜನ ಅಪರಿಚಿತ ಯುವಕರು ಹಲ್ಲೆ ನಡೆಸಿದ್ದಾರೆ.
ಮಂಗಳವಾರ ರಾತ್ರಿ 8:30 ಸಮಯದಲ್ಲಿ ಮಂಡ್ಯ ನಗರದ ಕಾಳಿಕಾಂಬ ದೇವಾಲಯದ ರಸ್ತೆಯ ಹುಲಿವಾನ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿಮನೆ ಗೇಟ್ ಸಮೀಪ ಸ್ಪ್ಲೆಂಡರ್ ಬೈಕಿನಲ್ಲಿ ಬಂದ ಅಪರಿಚಿತ ಯುವಕರು ಸಾಗರ್ ಅವರ ಬೈಕ್ ಗೆ   ಡಿಕ್ಕಿ ಹೊಡೆದಿದ್ದಾರೆ.  ಆಗ ಸಾಗರ್ ಯಾಕೆ ನನ್ನ ಬೈಕಿಗೆ ಗುದ್ದಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.  ಸ್ವಲ್ಪ ದೂರ ಹೋದ ಯುವಕರು ಬೈಕನ್ನು ಹಿಂತಿರುಗಿಸಿಕೊಂಡು ಬಂದು ಸಾಗರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಅಷ್ಟರಲ್ಲಿ ಅಲ್ಲಿಗೆ ಬಂದ ಸಾಗರ್ ಅವರ ಪರಿಚಿತರು ಸಾಗರ್ ಅವರನ್ನು ಉಪಚರಿಸಿದ್ದಾರೆ.  ಪೊಲೀಸ್ ವಾಹನವು  ಬರುವುದನ್ನು ನೋಡಿದ ಯುವಕರು ಸ್ಥಳದಿಂದ ಹೊರಟು ಹೋಗಿದ್ದಾರೆ. ಪೊಲೀಸರು ತಮ್ಮ ವಾಹನದಲ್ಲಿ ಸಾಗರ್ ರವರನ್ನು ಕರೆದುಕೊಂಡು ಹೋಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಸಾಗರ್ ಅವರು ಇತ್ತೀಚೆಗೆ ಮಿಮ್ಸ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಮೇಲೆ  ಲೋಕಾಯುಕ್ತ ಸೇರಿದಂತೆ   ಸರ್ಕಾರದ ಮಟ್ಟದಲ್ಲಿ ದಾಖಲೆಗಳನ್ನು ದೂರುಗಳನ್ನು ನೀಡಿದ್ದರೂ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!