
ಮಂಡ್ಯ:ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮಂಡ್ಯ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಯಲಿಯೂರು ಪಿಡಿಒ ಸಿ.ಬಿ.ಪ್ರಸನ್ನ ಆಯ್ಕೆಯಾಗಿದ್ದಾರೆ.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದೇವೇಗೌಡರವರ
ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಘದ ಗೌರವಾಧ್ಯಕ್ಷರಾಗಿ ಬಿ.ವಿ.ಶ್ರೀಧರ್,ಅಧ್ಯಕ್ಷರಾಗಿ ಸಿ.ಬಿ.ಪ್ರಸನ್ನ,ಉಪಾಧ್ಯಕ್ಷರಾಗಿ ಅಶೋಕ್,ಮಹಿಳಾ ಉಪಾಧ್ಯಕ್ಷರಾಗಿ ಕೋಮಲ ಎಲ್.ಪಿ,ಪ್ರಧಾನ ಕಾರ್ಯದರ್ಶಿಯಾಗಿ ಪೂರ್ಣಿಮಾ ಖಜಾಂಚಿಯಾಗಿ ಶಿವಕುಮಾರ್,ಸಂಘಟನಾ ಕಾರ್ಯದರ್ಶಿಯಾಗಿ ನಿರಂಜನ್,ಮಹಿಳಾ ಸಂಘಟನಾ ಕಾರ್ಯದರ್ಶಿ ಯಾಗಿ ಚಿಕ್ಕತಾಯಮ್ಮ ಕ್ರೀಡಾ ಕಾರ್ಯದರ್ಶಿಯಾಗಿ ರಾಮಕೃಷ್ಣ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಡಾ.ಅಶ್ವಿನಿ ಅವರು ಅವಿರೋಧವಾಗಿ ಆಯ್ಕೆ ಯಾದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಸಿ.ಬಿ.ಪ್ರಸನ್ನ ಅವರು ಸಂಘದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಜಿಲ್ಲೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳಿಗೆ ಹಾಗೂ ತಾಲೂಕು ಸಂಘದ ಎಲ್ಲಾ ಹಿಂದಿನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್,ಹರೀಶ್, ರಫೀಕ್, ಸುರೇಂದ್ರ, ಮಂಜಮ್ಮ, ಸುರೇಶ್, ವಿನಯ್ ಕುಮಾರ್,ಸುನಿಲ್ ಕುಮಾರ್,ಪವಿತ್ರ, ಪಿ.ಸಿ.ಕುಮಾರ್,ಮತ್ತಿತರರು ಹಾಜರಿದ್ದರು.
ತಾಪಂ ಇಒ ಲೋಕೇಶ್ ಮೂರ್ತಿ ಅವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

Leave a Reply