Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಬಸವಣ್ಣನವರ ಕಾಯಕ,ದಾಸೋಹದ ಪರಿಕಲ್ಪನೆ ಶ್ರೇಷ್ಠ – ಎಂ. ಶಿವಕುಮಾರ್

ಹನ್ನೆರಡನೇ ಶತಮಾನದಲ್ಲೇ ಮಹಿಳೆ ಮತ್ತು ಪುರುಷರು ಎಂಬ ಭೇದ ಭಾವವನ್ನು ಬದಿಗೊತ್ತಿ ಪ್ರತಿಯೊಬ್ಬರು ಕಾಯಕ ಮಾಡಿ, ಜೀವನ ನಡೆಸಬೇಕು ಎನ್ನುವ ಬಸವಣ್ಣನವರ ಕಾಯಕ ಮತ್ತು ದಾಸೋಹದ ಪರಿಕಲ್ಪನೆ ಶ್ರೇಷ್ಠವಾಗಿದೆ ಎಂದು ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ತಿಳಿಸಿದರು.
ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಕರ್ನಾಟಕರತ್ನ, ತ್ರಿವಿಧದಾಸೋಹಿ ಪರಮಪೂಜ್ಯ ಡಾ.ಶ್ರೀಶ್ರೀ ಶಿವಕುಮಾರಸ್ವಾಮೀಜಿಯವರ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್ ಹಾಗೂ ಸಿದ್ದಗಂಗಾಶ್ರೀ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ `ದಾಸೋಹಹುಣ್ಣಿಮೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

೯೦೦ ವರ್ಷಗಳ ಹಿಂದೆ ತಾಂಡವವಾಡುತ್ತಿದ್ದ ಸಾಮಾಜಿಕ ಅಸಮಾನತೆ, ಮೌಢ್ಯ, ಕಂದಾಚಾರಗಳನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಬಸವಣ್ಣನವರ ಸಾರಥ್ಯದಲ್ಲಿ ಶರಣರು ಮಾಡಿದ ಸಾಮಾಜಿಕ ಕ್ರಾಂತಿ ಅದ್ಬುತ. ಪ್ರತಿಯೊಬ್ಬರು ತಾವು ದುಡಿದು ಇತರರಿಗೂ ನೀಡಬೇಕು ಎಂಬುದು ಬಸವಣ್ಣನವರ ಕನಸಾಗಿತ್ತು. ದುಡಿದು ತಿನ್ನುವ ಕಾಯಕ ಹಾಗೂ ಹಂಚಿ ಬದುಕುವ ದಾಸೋಹದ ಪರಿಕಲ್ಪನೆಯ ಕುರಿತು ಜಾಗೃತಿ ಮೂಡಿಸಿದ ಶರಣರ ಆದರ್ಶ ಅನುಕರಣೀಯ ಎಂದರು.
ಪ್ರತಿತಿಂಗಳ ಹುಣ್ಣಿಮೆಯಂದು ಉದ್ಯಾನವನದಲ್ಲಿ `ದಾಸೋಹ ಹುಣ್ಣಿಮೆ’ ಮೂಲಕ ಶರಣರ ಆಶಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಸಿದ್ದಗಂಗಾಶ್ರೀಗಳ ಆಶಯದಂತೆ ಹಸಿದು ಬಂದವರಿಗೆ ಅನ್ನ ನೀಡುವುದೇ ಧರ್ಮ ಎಂಬ ತತ್ವದಡಿಯಲ್ಲಿ ಪ್ರತಿಯೊಬ್ಬರೂ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕೆಂದರು.
ನಗರಸಭೆ ಸದಸ್ಯ ಸುಮನ್ ಕ್ರಿಸ್ಟೋಫರ್,ನಗರಸಭೆ ಸದಸ್ಯೆ ಕೆ.ವಿದ್ಯಾಮಂಜುನಾಥ್,ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ,ಯೋಗಶಿಕ್ಷಕರಾದ ಶಿವರುದ್ರಸ್ವಾಮಿ,ಕಾಂಗ್ರೆಸ್ ಮುಖಂಡ ಸೋಮಶೇಖರ್, ಸಮಾಜಸೇವಕ ರವಿತೇಜ್, ಬಿಜೆಪಿ ಮುಖಂಡ ಜಗದೀಶ್, ಆಟೋ ರಾಜಣ್ಣ, ಬೆಳ್ಳಪ್ಪ, ಬಸವಲಿಂಗು ಅವ್ವೇರಹಳ್ಳಿ, ತಬ್ರೆöಸ್‌ಖಾನ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!