Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಪಿ ಎಲ್ ಡಿ ಬ್ಯಾಂಕ್ ಗೆ ನಾಮ ನಿರ್ದೇಶಕರಾಗಿ ಆಲಕೆರೆ ಕೃಷ್ಣೇಗೌಡ ನೇಮಕ – ಅಭಿನಂದನೆ

ಮಂಡ್ಯತಾಲೂಕು ಪಿಎಲ್‌ಡಿ (ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌) ಬ್ಯಾಂಕ್‌ ಆಡಳಿತ ಮಂಡಳಿಯ ನಾಮ ನಿರ್ದೇಶಿತ ಸದಸ್ಯರಾಗಿ ಸರ್ಕಾರದಿಂದ ನೇಮಕಗೊಂಡಿರುವ ಆಲಕೆರೆ ಕೃಷ್ಣೇಗೌಡ ಅವರನ್ನು ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಹೊಸಹಳ್ಳಿ ಶಿವಲಿಂಗೇಗೌಡ ಮಾತನಾಡಿ ಸರ್ಕಾರದ ವತಿಯಿಂದ
ಪಿಎಲ್‌ಡಿ ಬ್ಯಾಂಕ್ ಗೆ ನೂತನ ನಿರ್ದೇಶಕರಾಗಿ ನೇಮಕವಾಗಿರುವ ಕೃಷ್ಣೆಗೌಡ ಅವರು ಬ್ಯಾಂಕಿನ ಅಭಿವೃದ್ಧಿಗೆ ತಮ್ಮ ಸಲಹೆ ಸಹಕಾರವನ್ನು ಕೊಟ್ಟು ಶ್ರಮಿಸಲಿ ಎಂದು ಹೇಳಿದರು.

ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬೇಲೂರು ಸೋಮಶೇಖರ್ ಮಾತನಾಡಿ ಶಾಸಕ ಗಣಿಗ ರವಿಕುಮಾರ್ ಅವರು ಆಲಕೆರೆ ಕೃಷ್ಣೇಗೌಡ ಅವರ ಮೇಲೆ ವಿಶ್ವಾಸವಿಟ್ಟು ಸರ್ಕಾರದ ವತಿಯಿಂದ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿಸಿದ್ದಾರೆ.ಮುಂದಿನ ದಿನಗಳಲ್ಲಿ ಕೃಷ್ಣೇಗೌಡರು ಶಾಸಕರಿಂದ ಹೆಚ್ಚಿನ ಅನುದಾನ ಕೊಡಿಸುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಸರಸ್ವತಿ ಶೇಖರ್‌, ನಿರ್ದೇಶಕರಾದ ಸಿ.ಎ.ಅರವಿಂದ್‌
ಟಿ.ಬಿ.ಶಿವಲಿಂಗೇಗೌಡ,ಬಿ.ಎಲ್.ಬೋರೇಗೌಡ, ಸುನಂದಮ್ಮ ಸಿದ್ದರಾಮು,ಮರೀಗೌಡ, ಎಂ.ಯೋಗೇಶ್‌, ಬಿ.ಕೆ.ರಾಮೇಗೌಡ, ಚಿಕ್ಕಬೆಟ್ಟಯ್ಯ, ಸವಿತ ಶಂಕರ್‌, ನಂಜುಂಡ, ಪ್ರಕಾಶ,ಶೇಖರ್, ವ್ಯವಸ್ಥಾಪಕಿ ಡಿ.ನಾಗವೇಣಿ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!