Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಕೆರೆಗೆ ಕಾಲು ಜಾರಿ ಬಿದ್ದು ಯುವಕ ಸಾವು

ಪಾಂಡವಪುರ ತಾಲ್ಲೂಕಿನ ಚಂದ್ರೆ ಗ್ರಾಮದ ಕೆರೆಗೆ ಕಾಲು ಜಾರಿ ನೀರಿಗೆ ಬಿದ್ದು ಗಜೇಂದ್ರ ಎಂಬ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ

ಪಾಂಡವಪುರ ಪಟ್ಟಣದ ವಿಜಯ ಪದವಿ ಪೂರ್ವ ಕಾಲೇಜಿನಿಂದ ಚಂದ್ರೆ ಗ್ರಾಮದಲ್ಲಿ 25.10.2024 ರಿಂದ 31.10.20240 ವರೆಗೆ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ಏರ್ಪಡಿಸಲಾಗಿತ್ತು ಶಿಕ್ಷಕರ ಜೊತೆ ಮಕ್ಕಳು ಸೇರಿ ಬೆಳಿಗ್ಗೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಗ್ರಾಮವನ್ನು ಸ್ವಚ್ಛಗೊಳಿಸಿ ಮಧ್ಯಾಹ್ನ ಊಟಕ್ಕೆ ಎಂದು ಬಿಟ್ಟ ಸಮಯದಲ್ಲಿ ಶಿಕ್ಷಕರಿಗೆ ತಿಳಿಸದೆ ಸ್ನಾನ ಮಾಡಲು ಹೋಗಿದ್ದ ಯುವಕ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರಿಂದ ತಿಳಿದುಬಂದಿದೆ. ಸಾವನ್ನಪ್ಪಿರುವ ಯುವಕ ಮೈಸೂರು ಜಿಲ್ಲೆ ಇಲವಾಲ ಗ್ರಾಮದ ಯುವಕ ಗಜೇಂದ್ರ ಎಂದು ತಿಳಿದು ಬಂದಿದೆ

Leave a Reply

Your email address will not be published. Required fields are marked *

error: Content is protected !!