
ಕನ್ನಡ ವಿಷಯದ ಬಗ್ಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಡಿಸೆಂಬರ್ 20,21,22 ರಂದು ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಜಿಲ್ಲೆಯ ಜನರು ಭಾಗವಹಿಸಬೇಕೆಂದು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ಮನವಿ ಮಾಡಿದರು.
ಅವರು ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಪ್ರಚಾರ ರಥವನ್ನು ಸ್ವಾಗತಿಸಿ ಮಾತನಾಡಿದರು. ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಮಂಡ್ಯ ಜಿಲ್ಲಾಧಿಕಾರಿಗಳು, ಸಿಇಓ ರವರು, ಕನ್ನಡ ಸಾಹಿತ್ಯ ಪರಿಷತ್ ನ ಪದಾಧಿಕಾರಿಗಳು ಪರಿಶ್ರಮವನ್ನು ಪಡುತ್ತಿದ್ದಾರೆ. ಸಮ್ಮೇಳನವು ಯಶಸ್ವಿಯಾಗಬೇಕಾದರೆ ಜಿಲ್ಲೆಯ ಜನತೆ ತಮ್ಮ ಕುಟುಂಬಸ್ಥರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ರಾಜಕೀಯ ನಾಯಕರು ಭಾಗವಹಿಸಲ್ಲಿದ್ದು, ಹಿರಿಯ ಕನ್ನಡ ಸಾಹಿತಿಗಳು ಕನ್ನಡದ ಭಾಷೆಯ ಬಗ್ಗೆ ಹರಿವು ಮೂಡಿಸಲ್ಲಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಮೀರಾಶಿವಲಿಂಗಯ್ಯ ಮಾತನಾಡಿ ಹಿರಿಯ ನಾಯಕರ ಹೋರಾಟದ ಪರಿಶ್ರಮದಿಂದ ಹರಿದು ಹಂಚಿ ಹೋಗಿದ್ದ ಜಿಲ್ಲೆಯನ್ನು ಒಟ್ಟು ಗೂಡಿಸಿದ್ದಾರೆ.ಯಾವುದೇ ಜಾತಿ ಮತ ಪಂಥ ಭೇದವಿಲ್ಲದೆ ಕನ್ನಡ ಪ್ರೇಮಿಗಳಾಗಿ ಕೆಲಸ ಮಾಡೋಣ, ನಮ್ಮ ಮುಂದಿನ ಪೀಳಿಗೆಗೆ ಸಾಹಿತ್ಯದ ಮಹತ್ವವನ್ನು ತಿಳಿಸೋಣ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ ಮಾತನಾಡಿ ಕಲೆ ,ನಾಟಕ ,ಸಂಸ್ಕೃತಿ ಕ್ಷೇತ್ರಕ್ಕೆ ಮಂಡ್ಯ ಜಿಲ್ಲೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ ಕೆರಗೋಡು ಸಂಚಿಹೊನ್ನಮ್ಮ ತ್ರಿವೇಣಿ ಅಂತ ಕವಿಗಳನ್ನು ಕೊಟ್ಟ ತವರೂರಾಗಿದೆ .ಸಾಹಿತ್ಯ ಸಮ್ಮೇಳನದಲ್ಲಿ ಚಿಂತನ ಮಂಥನ ನಡೆದು ಹಲವು ಸಮಸ್ಯೆಗಳನ್ನು ಚರ್ಚೆಗೆ ತಂದು ಬಗೆಹರಿಸುವ ಕೆಲಸವನ್ನು ಒಟ್ಟಾಗಿ ಮಾಡೋಣ ಇಲ್ಲಿ ನಡೆಯುವ ವಿಷಯಾಧಾರಿತ ಚರ್ಚೆಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಸುದ್ದಿಗಳಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೈತ ನಾಯಕಿ ಸುನಂದ ಜಯರಾಮ್, ಕೆರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರ ಅಧ್ಯಕ್ಷ ಚಂದ್ರಲಿಂಗು,ಧನಂಜಯ ಧರಸಗುಪ್ಪೆ, ಸಿಪಿಐ ಮಹೇಶ್, ಪಿಎಸ್ಐ ದೀಕ್ಷಿತ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಗರತ್ನ, ಸದಸ್ಯರಾದ ಶಾಂತಮ್ಮ ,ಮಹೇಶ್,ಶಾಂತಗಿರಿ, ಪಿಡಿಒ ವಿನಯ್ ಕುಮಾರ್ ಭಾಗವಹಿಸಿದ್ದರು.

Leave a Reply