
ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಸಮೂಹವು ಪುಸ್ತಕಗಳನ್ನು ಓದುವ ಮೂಲಕ ಬದಲಾಗಬೇಕು ಎಂದು ಬುದ್ಧ ಪೌಂಡೇಷನ್ ಅಧ್ಯಕ್ಷ ಹಾಗೂ ವಕೀಲ ಜೆ.ರಾಮಯ್ಯ ಮನವಿ ಮಾಡಿದರು.
ಅವರು ಮಂಡ್ಯ ನಗರದಲ್ಲಿರುವ ಕಚೇರಿಯಲ್ಲಿ ಮಾತನಾಡಿ ಯುವ ಸಮೂಹ ಕ್ರಿಕೆಟ್ ಬೆಟ್ಟಿಂಗ್ ಮದ್ಯಪಾನ, ಧೂಮಪಾನ, ಅತಿಯಾದ ಮೊಬೈಲ್ ಬಳಕೆ ಸೇರಿದಂತೆ ವಿವಿಧ ದುಶ್ಚಟಗಳಿಗೆ ಒಳಗಾಗುತ್ತಿರುವುದು ಬೇಸರದ ಸಂಗತಿಯಾಗಿರುದವುದರಿಂದ ಯುವಕರು ಪುಸ್ತಕಗಳ ಓದುವ ಕಡೆ ಆಸಕ್ತಿ ತೋರಬೇಕು. ಇದಕ್ಕಾಗಿ ಬುದ್ಧ ಭಾರತ ಪೌಂಡೇಷನ್‌ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಆರ್.ಲತಾ ಅವರು 50 ಸಾವಿರ ಬೆಲೆ ಬಾಳುವ ಪುಸ್ತಕಗಳನ್ನು ನೀಡಿದ್ದಾರೆ.ಯುವ ಸಮೂಹಕ್ಕೆ ಒಳಿತಾಗಲಿ ಎಂಬುವ ನಿಟ್ಟಿನಲ್ಲಿ ಪುಸ್ತಕಗಳನ್ನು ನೀಡಿರುವ ಆರ್.ಲತಾ ಅವರ ಕೆಲಸ ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪೌಂಡೇಷನ್‌ನ ಲೋಕೇಶ್, ಬೆಂಜಮಿನ್ ಥಾಮಸ್, ಸುರೇಶ್, ಅಮೀರ್, ಜವರಪ್ಪ ಭಾಗವಹಿಸಿದ್ದರು.

Leave a Reply