
ಮಂಡ್ಯ: ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗಳಿಗೆ ಚಿಕಿತ್ಸೆ ಕೊಡಿಸಲು ಆರ್ಥಿಕ ನೆರವು ನೀಡುವಂತೆ ಪೋಷಕರಾದ ಸದಾನಂದ ಹಾಗೂ ಹೇಮಾ ಮನವಿ ಮಾಡಿದರು.
ಮಂಡ್ಯ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶ್ರೀರಂಗಪಟ್ಟಣ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಮಗಳು ವಿನುತಾಗೆ ಮೂಳೆ ಕ್ಯಾನ್ಸರ್ ಇರುವುದಾಗಿ ಕಂಡು ಬಂದಿದ್ದು, ಕಳೆದ ಎರಡು ವರ್ಷಗಳಿಂದ ಬಳಲುತ್ತಿದ್ದಾಳೆ ಎಂದು ತಿಳಿಸಿದರು.
ಈಗಾಗಲೇ ದಾನಿಗಳ ಸಹಾಯದಿಂದ ಮಗಳ ಚಿಕಿತ್ಸೆಗೆ 20 ಲಕ್ಷ ರೂ ವೆಚ್ಚ ಮಾಡಿದ್ದು, ಮತ್ತೆ ನೋವು ಕಂಡದ್ದರಿಂದ ಪರೀಕ್ಷೆ ಮಾಡಲಾಗಿ, ನಾರಾಯಣ ಹೃದಯಾಲಯದ ವೈದ್ಯರು ಮರು ಶಸ್ತ್ರ್ ಚಿಕಿತ್ಸೆಗೆ ಒಳ ಪಡಿಸುವಂತೆ ಹೇಳಿದ್ದಾರೆ. ಇದಕ್ಕೆ ಸುಮಾರು 2 ಲಕ್ಷ ರೂ ಬೇಕಾಗಿದ್ದು,ದಾನಿಗಳು ಸಹಯಾಸ್ತ ನೀಡುವಂತೆ ಮನವಿ ಮಾಡಿದ್ದಾರೆ.
ಸಹಾಯ ಮಾಡಲು ಇಚ್ಚಿಸುವವರು ಹೇಮಾ ಹೆಸರಿನ ಶ್ರೀರಂಗಪಟ್ಟಣ ಬ್ರಾಂಚ್ ನ ಕೆನರಾ ಬ್ಯಾಂಕ್ ಖಾತೆ 7092500101895101, IFSC ಸಂಖ್ಯೆ KARB0000709 ಗೆ ಅಥವಾ 7090221842 ಸಂಖ್ಯೆಗೆ ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ ಧನ ಸಹಾಯ ಮಾಡುವಂತೆ ಕೋರಿದ್ದಾರೆ.

Leave a Reply