Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಮಂಡ್ಯ ತಾಲೂಕು ಸರ್ಕಾರಿ ನೌಕರರ ಸಂಘದ ಐದು ಸ್ಥಾನಗಳಿಗೆ ಚುನಾವಣೆ

ತೀರ್ವ ಕುತೂಹಲ ಕೆರಳಿಸಿದ್ದ ಮಂಡ್ಯ ತಾಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ 60 ಜನ ನಿರ್ದೇಶಕರು ಅಚ್ಚರಿಯ ಬೆಳವಣಿಗೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಇತಿಹಾಸವನ್ನೇ ನಿರ್ಮಿಸಿದೆ.

ಒಟ್ಟು 66 ಸ್ಥಾನಗಳಿದ್ದು, 60 ಸ್ಥಾನಗಳಿಗೆ ಅವಿರೋಧ ಆಯ್ಕೆವಾಗಿದ್ದು, ಐದು ಸ್ಥಾನಗಳಿಗೆ 16/11/2024 ರ ಶನಿವಾರದಂದು ಚುನಾವಣೆ ನಡೆಯಲಿದೆ.

ಚುನಾವಣೆ ಘೋಷಣೆಯಾದ ನಂತರ ಶಂಭುಗೌಡ ಹಾಗು ನಾಗೇಶ್ ರವರ ಬಣಗಳಲ್ಲಿ ಗುರುತಿಸಿಕೊಂಡ ಎಲ್ಲಾ ಇಲಾಖೆಗಳ ಸರ್ಕಾರಿ ನೌಕರರು ಚುನಾವಣೆಯಲ್ಲಿ ಸ್ಪರ್ಧಿಸಲು ಭರ್ಜರಿ ತಯಾರಿ ನಡೆಸಿ, ತಮ್ಮ ತಮ್ಮ ಮುಖಂಡರ ನೇತೃತ್ವದಲ್ಲಿ ನಾಮಪತ್ರವನ್ನು ಸಲ್ಲಿಸಿದ್ದರು.

ಚುನಾವಣೆ ಘೋಷಣೆಯಾದ ಬಳಿಕ ನಾಗೇಶ್ ಮತ್ತು ಶಂಭುಗೌಡರವರು ಪರಸ್ಪರ ಆರೋಪ – ಪ್ರತ್ಯಾರೋಪ ಮಾಡಿದ್ದು, ಚುನಾವಣೆಯ ಬಗ್ಗೆ ಸರ್ಕಾರಿ ನೌಕರರಿಗೆ ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ಕುತೂಹಲ ಮೂಡುವಂತೆ ಮಾಡಿತ್ತು.

ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಮುಗಿದು,ನಾಮಪತ್ರ ವಾಪಸ್ ಪಡೆಯಲು ಇದ್ದ ಅವಧಿಯ ಒಳಗೆ ಅಚ್ಚರಿಯ ಬೆಳವಣಿಗೆ ನಡೆದು, ನೌಕರರ ಸಂಘಕ್ಕೆ 60 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿ, ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಲಾಗಿದೆ ಎಂದು ಮಂಡ್ಯ ಶಾಸಕ ರವಿಕುಮಾರ್ ಅವರ ನೇತೃತ್ವದಲ್ಲಿ ನಾಗೇಶ್ ಮತ್ತು ಶಂಭುಗೌಡ ಇಬ್ಬರು ಒಟ್ಟಾಗಿ ಸುದ್ದಿಗೋಷ್ಠಿ ನಡೆಸಿ ಪ್ರಕಟಿಸಿದ್ದಾರೆ .

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಯವರು ಮಂಡ್ಯ ಜಿಲ್ಲೆಯ ಶಾಸಕರುಗಳ ಸಮ್ಮುಖದಲ್ಲಿ ಎರಡು ಬಣಗಳ ಮುಖಂಡರುಗಳನ್ನು ಕರೆಸಿ, ಚುನಾವಣೆಯಲ್ಲಿ ಅವಿರೋಧ ಆಯ್ಕೆಯನ್ನು ಮಾಡಿಕೊಳ್ಳಲು ಅಧಿಕಾರ ಹಂಚಿಕೆಯ ಒಡಂಬಡಿಕೆಯನ್ನು ಮಾಡಿಸಿದರು ಎಂಬುವುದನ್ನು ಸ್ವತಹ ನಾಗೇಶ್ ರವರೆ ಹೇಳಿ ಕೊಂಡಿದ್ದಾರೆ .

ನವೆಂಬರ್ 16 ರಂದು ತೋಟಗಾರಿಕೆ ಇಲಾಖೆ, ಪಶುಪಾಲನಾ ಇಲಾಖೆ, ಗ್ರಂಥಾಲಯ ಇಲಾಖೆಯಿಂದ ತಲಾ ಒಂದು ಸ್ಥಾನಗಳಿಗೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಮತ್ತು ಆಡಳಿತ ಕಚೇರಿಯಿಂದ ಎರಡು ಸ್ಥಾನಗಳು ಸೇರಿದಂತೆ ಒಟ್ಟು ಐದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಉಳಿದ ಸಹಕಾರ ಕ್ಷೇತ್ರದ ಅಭ್ಯರ್ಥಿಯ ನಾಮಪತ್ರವು ತಿರಸ್ಕೃತಗೊಂಡಿರುವುದರಿಂದ ಒಂದು ಸ್ಥಾನಕ್ಕೆ ಚುನಾವಣೆ ನಡೆಯುತ್ತಿಲ್ಲ ಎಂದು ಚುನಾವಣಾ ಅಧಿಕಾರಿ ಕೆ.ಕೃಷ್ಣ ತಿಳಿಸಿದರು.

ಚುನಾವಣೆ ಪ್ರಕ್ರಿಯೆ ಮುಗಿದ ನಂತರ ನೂತನ ಆಡಳಿತ ಮಂಡಳಿಯವರು ಸರ್ಕಾರಿ ನೌಕರರ ಮತ್ತು ಸಾರ್ವಜನಿಕರ ಧ್ವನಿಯಾಗಿ ಕೆಲಸ ನಿರ್ವಹಸಲಿ ಎಂಬುವುದು ಸಾರ್ವಜನಿಕರ ಆಶಯವಾಗಿದೆ.

Leave a Reply

Your email address will not be published. Required fields are marked *

error: Content is protected !!