
ಮಂಡ್ಯ ತಾಲ್ಲೂಕಿನ ಬಿ.ಹೊಸೂರು ಗ್ರಾ.ಪಂ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸಿ.ಬೋರಯ್ಯ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ಬಿ.ಕೆ ಕುಮಾರ್ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿದ್ದು, 21 ಸದಸ್ಯರಲ್ಲಿ 15 ಜನ ಸದ್ಯಸರು ಮಾತ್ರ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.ಅಧ್ಯಕ್ಷ ಸ್ಥಾನಕ್ಕೆ ಸಿ.ಬೋರಯ್ಯ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಗಣೇಶ್ ಹೆಗ್ಡೆ ಅವರು ಸಿ.ಬೋರಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.
ನಂತರ ನೂತನ ಅಧ್ಯಕ್ಷ ಸಿ.ಬೋರಯ್ಯ ಮಾತನಾಡಿ, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರ ಸಹಕಾರದಿಂದ ಅವಿರೋಧವಾಗಿ ಆಯ್ಕೆ ಆಗಿದ್ದು, ಅವಿರೋಧವಾಗಿ ಆಯ್ಕೆ ಮಾಡಿದ ಸದಸ್ಯರಿಗೆ ಧನ್ಯವಾದಗಳು, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಸದಸ್ಯರ ಜೊತೆಗೂಡಿ ಪಂಚಾಯಿತಿಯನ್ನು ಅಭಿವೃದ್ಧಿಯತ್ತ ಸಾಗಿಸುತ್ತೇನೆ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಬಿಳಿದೇಗಲು ಪ್ರತಾಪ್ ಮಾತನಾಡಿ , ಬಿ.ಹೊಸೂರು ಗ್ರಾ.ಪಂ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸಿ.ಬೋರಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಬಿ.ಹೊಸೂರು ಗ್ರಾ.ಪಂ ವ್ಯಾಪ್ತಿಯ ಎಲ್ಲ ಗ್ರಾಮಸ್ಥರಿಗೂ, ಜಿಡಿಎಸ್ ಮುಖಂಡರುಗಳಾದ ಬಿ.ಆರ್.ರಾಮಚಂದ್ರ , ವಿಜಯಾನಂದ, ಕೆಬ್ಬಳ್ಳಿ ಆನಂದ್ , ಸ್ಥಳೀಯ ಮುಖಂಡರಾದ ಮಹೇಶ್ , ಶ್ರೀಧರ್, ಬಿ.ಹೊಸೂರು ರಾಮಣ್ಣ ಅವರುಗಳ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಅವರಿಗೆ ಜೆಡಿಎಸ್ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರ ಜೊತೆಗೂಡಿ ಮೂಲಭೂತ ಸೌಲಭ್ಯಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಸಿ.ಬೋರಯ್ಯ ಅವರು ಪಂಚಾಯಿತಿಯನ್ನು ಅಭಿವೃದ್ಧಿ ಮಾಡಲಿದ್ದಾರೆ ಎಂದರು.
ಈ ವೇಳೆ ನೂತನ ಅಧ್ಯಕ್ಷ ಸಿ.ಬೋರಯ್ಯರನ್ನು ಗ್ರಾ.ಪಂ ಸದಸ್ಯರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರುಗಳು,ಗ್ರಾಮಸ್ಥರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ದೊಡ್ಡಮ್ಮ ತಾಯಿ , ಜಿ.ಪಿ.ಮಹೇಶ್ , ಹೊಸೂರು ಶ್ರೀಧರ್ , ಕೃಷ್ಣೇಗೌಡ , ರಾಮೇಗೌಡ , ಕೆಬ್ಬಳ್ಳಿ ರಮೇಶ್ , ಕೆಬ್ಬಳ್ಳಿ ಶಿವಲಿಂಗೇಗೌಡ , ಹಂಚನಹಳ್ಳಿ ಜಯೇಂದ್ರ , ಶಂಕರಾಚಾರಿ , ನಂದೀಶ್ , ದಿವ್ಯ , ಪವಿತ್ರ , ಕೆ.ಗೌಡಗೆರೆ ಮನು , ಶ್ರೀಧರ್ , ಕಾಂತರಾಜು , ಸೇರಿದಂತೆ ಸದಸ್ಯರುಗಳು , ಪಿಡಿಓ ಮಹೇಶ್ ,ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply