
ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿಯಲ್ಲಿ ಅಕ್ರಮ, ಭ್ರಷ್ಠಾಚಾರ ನಡೆದಿರುವ ಕುರಿತು ತನಿಖೆಗೆ ಸೂಚಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಗ್ರಾಪಂ ಪಿಡಿಒ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಬೂದನೂರು ಗ್ರಾಪಂನ ಆಡಳಿತ ಮಂಡಳಿ, ಪಿಡಿಒ ಅವರು ಕಳೆದ ೪ ವರ್ಷಗಳಿಂದ ಅಕ್ರಮ, ಭ್ರಷ್ಟಾಚಾರ ನಡೆಸಿದ್ದಾರೆ. ಇವರ ವಿರುದ್ಧ ತನಿಖೆಗೆ ಸಮಿತಿ ರಚಿಸಿದರೂ, ತನಿಖೆಗೆ ಮುಂದಾಗದೆ ಜಿಪಂ ಸಿಇಒ ಅಮಿಷ, ಪ್ರಭಾವಕ್ಕೆ ಒಳಗಾಗಿ ಅನ್ಯಾಯವೇಸಗುತ್ತಿದ್ದಾರೆ ಎಂದು ಆರೋಪಿಸಿ ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿ ಸದಸ್ಯರು ಕೆಲ ದಿನಗಳಿಂದ ಅನಿರ್ಧಿಷ್ಠಾವಧಿ ಧರಣಿ ನಡೆಸಿ ಜಿಪಂ ಕಚೇರಿ ಮುಂದೆ ಹೋರಾಟ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಬುಧವಾರ ಜಿಪಂ ಸಿಇಒ ಅವರು ಹೋರಾಟ ಸಮಿತಿಯ ಮುಖಂಡ ಬಿ.ಕೆ.ಸತೀಶ್ ಹಾಗೂ ತಂಡದವರೊAದಿಗೆ ಮಾತುಕತೆ ನಡೆಸಿ, ನೀವು ಸಲ್ಲಿಸಿರುವ 17 ವಿಷಯಗಳ ದೂರಿನಲ್ಲಿರುವ ಅಂಶಗಳ ಕುರಿತು ತನಿಖೆ ಮಾಡಲು ಈ ಕಚೇರಿಯ ಆದೇಶದಲ್ಲಿ ರಚಿಸಲಾಗಿರುವ ತನಿಖಾ ತಂಡದ ಅಧಿಕಾರಿಗಳಿಂದ ತುರ್ತಾಗಿ ವರದಿಯನ್ನು ಪಡೆದುಕೊಂಡು ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ತಮ್ಮ ಆದೇಶದಲ್ಲಿ ಬೂದನೂರು ಗ್ರಾಪಂ ಪಿಡಿಒ ವೈ.ಎಸ್.ವಿನಯ್‌ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.

Leave a Reply