Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಜಿಲ್ಲಾ ಗಂಗಾಮತಸ್ಥರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಡಿ.ಎಸ್.ರಾಮಕೃಷ್ಣ, ಕಾರ್ಯಾಧ್ಯಕ್ಷರಾಗಿ ರಾಮಲಿಂಗಯ್ಯ ಆಯ್ಕೆ

ಮಂಡ್ಯ: ಮಂಡ್ಯ ಜಿಲ್ಲಾ ಗಂಗಾಮತಸ್ಥರ ( ಬೆಸ್ತರ್ / ನಾಯಕ) ನೌಕರರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕರ್ನಾಟಕ ಸಂಘದ ಕೆ.ಟಿ.ಶಿವಲಿಂಗಯ್ಯ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ 15 ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸರ್ವಾನುಮತದಿಂದ ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷರಾಗಿ ಡಿ.ಎಸ್.ರಾಮಕೃಷ್ಣ, ಕಾರ್ಯಾಧ್ಯಕ್ಷರಾಗಿ ರಾಮ ಲಿಂಗಯ್ಯ,ಪ್ರಧಾನ ಕಾರ್ಯದರ್ಶಿಯಾಗಿ ಲಿಂಗರಾಜು, ಖಜಾಂಚಿಯಾಗಿ ಹೆಚ್.ಗಿರೀಶ್ ಅವರನ್ನು ಆಯ್ಕೆಮಾಡಲಾಯಿತು ಸಹ ಕಾರ್ಯದರ್ಶಿಗಳಾಗಿ ಕೇಶವ.ಪಿ, ಕೆ.ಬಿ.ಕೃಷ್ಣ, ಉಪಾಧ್ಯಕ್ಷರುಗಳಾಗಿ ಕನ್ನಂಬಾಡಿ ಕುಮಾರ್, ಪುಷ್ಪಲತಾ, ಸಂಘಟನಾ ಕಾರ್ಯದರ್ಶಿಗಳಾಗಿ ಉಮಾವತಿ,ಎಸ್.ಮಧು, ಜಿ.ಕೆ.ಶ್ರೀನಿವಾಸ್, ಕುಮಾರ್ ಸಿ.ಎಂ, ನಿರ್ದೇಶಕರಾಗಿ ಧನಂಜಯ, ನಾಗೇಶ್, ಸುಧಾಕರ್, ಗೌರವಾಧ್ಯಕ್ಷರಾಗಿ ಟಿ.ಕೃಷ್ಣಯ್ಯ, ಗೌರವ ಸಲಹೆಗಾರರಾಗಿ ಡಾ.ಎಂ.ಪಿ. ಚಂದ್ರಶೇಖರ್, ಎಂ.ಸಿ.ಶ್ರೀನಿವಾಸ್, ಅವರುಗಳನ್ನು ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜು ಅವರು ತಿಳಿಸಿದರು.
ನಂತರ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಗಂಗಾಮತಸ್ಥರ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಡಿ.ಎಸ್. ರಾಮಕೃಷ್ಣ ಮಾತನಾಡಿ ಸರ್ಕಾರಿ ಗಂಗಾಮತಸ್ಥ ನೌಕರರ ಹಿತ ಕಾಯುವ ಜೊತೆಗೆ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಉನ್ನತವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಜಿಲ್ಲಾ ಗಂಗಾಮತಸ್ಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೂತನ ಕಾರ್ಯಾಧ್ಯಕ್ಷ ಹಾಗೂ ಮದ್ದೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮಲಿಂಗಯ್ಯ ಮಾತನಾಡಿ ಹೊಸದಾಗಿ ಮುಂದಿನ ಮೂರು ವರ್ಷಗಳ ಅವಧಿಗೆ 15 ಮಂದಿ ಜಿಲ್ಲಾ ಗಂಗಾಮತಸ್ಥರ ನೌಕರರ ಹೊಸ ತಂಡವನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು ಎಂದರು.
ಗಂಗಾಮತಸ್ಥರ ನೌಕರ ಬಂಧುಗಳು ಒಗ್ಗಟ್ಟಿನಿಂದ ಕೆಲಸ ಮಾಡಲು ಹಾಗೂ ನೌಕರರ ಹಿತ ಕಾಯುವ, ನೌಕರರನ್ನು ಒಗ್ಗೂಡಿಸಿ ಒಗ್ಗಟ್ಟಿನಿಂದ ಕ್ಷೇಮಾಭಿವೃದ್ಧಿ ಸಂಘದ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ.ನೌಕರರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅತಿ ಹೆಚ್ಚು ಅಂಕ ಪಡೆದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲಾ ಕೇಂದ್ರದಲ್ಲಿ ಗಂಗಾಮತಸ್ಥರ ನೌಕರರ ಭವನ ನಿರ್ಮಾಣ ಮಾಡಲು ನಿವೇಶನ ಖರೀದಿಸಲು ಕನಸು ಕಂಡಿದ್ದೇವೆ ಇದಕ್ಕೆ ಸಮಾಜ ಹಾಗೂ ನೌಕರರು ಸಹಕರಿಸಬೇಕು, ಹಾಗೂ ದಾನಿಗಳು ಸಹಾಯ ಮಾಡಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!