Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಗೋಪಾಲಪುರ ಗ್ರಾ. ಪಂ. ನಲ್ಲಿ ನಿಯಮಬಾಹಿರವಾಗಿ ಇ-ಸ್ವತ್ತು ವಿತರಣೆ – ಪಿಡಿಒ,ಕಾರ್ಯದರ್ಶಿ ಅಮಾನತಿಗೆ ಅಗ್ರಹಿಸಿ ಪ್ರತಿಭಟನೆ

ಮಂಡ್ಯ ತಾಲೂಕಿನ ಗೋಪಾಲಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಯು ಕಾನೂನು ಬಾಹಿರವಾಗಿ 139 ಇ ಸ್ವತ್ತುಗಳನ್ನು ವಿತರಣೆ ಮಾಡಿದ್ದು, ಕೊಡಲೇ  ಅವರುಗಳನ್ನು ಅಮಾನತ್ತು ಮಾಡುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಮಂಡ್ಯ ನಗರದ  ಜಿಲ್ಲಾ ಪಂಚಾಯತಿ ಕಚೇರಿ ಮುಂದೆ  ಪ್ರತಿಭಟನೆ ನಡೆಸಿ ಮಂಡ್ಯ ತಾಲೋಕಿನ ಗೋಪಾಲಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳ ಪಡುವ ಸರ್ವೆ ನಂಬರ್ 87 ಹಾಗೂ ಸುತ್ತಮುತ್ತಲಿನ ಸರ್ವೆ ನಂಬರ್ ಗಳಲ್ಲಿ ಮೇ : ಶ್ರೀ ವಜ್ರ ಇನ್ಸಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ರವರು ಕಾನೂನಿಗೆ ವಿರುದ್ಧವಾಗಿ  ಬಡಾವಣೆಯನ್ನು ನಿರ್ಮಿಸಿದ್ದ್ದು, ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಇದ್ದಿದ್ದರಿಂದ, ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಜೊತೆಗೂಡಿ ಸ್ಥಳ ಪರಿಶೀಲನೆ ನಡೆಸಿದ ನಂತರ ಗ್ರಾಮ ಪಂಚಾಯಿತಿಯಲ್ಲಿ ಖಾತೆಗಳನ್ನು ನಮೂದಿಸಿ ಇ ಸತ್ತುಗಳನ್ನು ವಿತರಿಸಲು ನಿರ್ಣಯಿಸಲಾಗಿತ್ತು.
ಗ್ರಾಮ ಪಂಚಾಯತಿ ಪಿಡಿಒ ಅನಿತಾ ರಾಜೇಶ್ವರಿ ಗ್ರಾಮ ಪಂಚಾಯತಿ ಸಭೆಯ ನಿರ್ಣಯಕ್ಕೆ ಬೆಲೆ ಕೊಡದೇ ಪಿಡಿಒ,ಕಾರ್ಯದರ್ಶಿ ಸೇರಿಕೊಂಡು ಈ ಸ್ವತ್ತುಗಳನ್ನು ವಿತರಿಸಿರುವುದರಿಂದ ಕೊಡಲೇ ಅವರನ್ನು ಅಮನತುಗೊಳಿಸಿ, ಮಾಡಿರುವ ಖಾತೆಗಳನ್ನು ರದ್ದುಪಡಿಸಬೇಕು ಎಂದು ಅಗ್ರಹಿಸಿದರು.
ಅಲ್ಲದೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ನಿಯಮ ಬಾಹಿರವಾಗಿ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡುವುದರಿಂದ ಕೂಡಲೇ ಅವರನ್ನು ಅಮಾನತ್ತು ಮಾಡುವಂತೆ ಅಗ್ರಹಿಸಿದರು.
ಮನವಿ ಸ್ವೀಕರಿಸಿದ ಕೇಂದ್ರ ಸಚಿವ ಹೆಚ್‍ಡಿ ಕುಮಾರ ಸ್ವಾಮಿ ಅವರು ಕೂಡಲೇ ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಸಿಇಓ  ಶೇಕ್ ತನ್ವೀರ್ ಆಸೀಫ್ ರವರಿಗೆ ಸೂಚಿಸಿದರು. ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ್ ಇದ್ದರು.
ಪ್ರತಿಭಟನೆಯಲ್ಲಿ  ಅಧ್ಯಕ್ಷರಾದ ಸವಿತಾ, ಉಪಾಧ್ಯಕ್ಷರಾದ ಕೆಂಪಾಚಾರಿ, ಗ್ರಾಮ ಪಂಚಾಯತಿ ಸದಸ್ಯರಾದ ಸುಧಾ, ಜ್ಯೋತಿ, ಪುಟ್ಟಮ್ಮ, ಕವಿತಾ,ನಾಗರಾಜು  ಗ್ರಾಮಸ್ಥರುಗಳಾದ ಭಾನು ಪ್ರಕಾಶ್,ಚಿಕ್ಕ ಬೋರಯ್ಯ ಸಿದ್ದರಾಜು ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!