Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಮಹಿಳೆ ವಿರುದ್ಧ ಕ್ರಮಕ್ಕೆ ಶ್ರೀ ಓಂಕಾರೇಶ್ವರ ಸ್ವಾಮೀಜಿಯರಿಂದ ಎಸ್ಪಿ ಗೆ ದೂರು

ಮಂಡ್ಯ : ರಾಷ್ಟ್ರಪಿತ ಗಾಂಧೀಜಿ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡುವುದರ ಜೊತೆಗೆ ಧರ್ಮ, ಧರ್ಮದ ಮಧ್ಯ ಕೋಮುವಾದ ಸೃಷ್ಠಿ ಮಾಡಿರುವ ಪಾಂಡವಪುರ ತಾಲೂಕಿನ ಭೈರವಿ ಎಂಬ ಮಹಿಳೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಳವಳ್ಳಿ ತಾಲ್ಲೂಕಿನ ಎನ್.ಹಲಸಹಳ್ಳಿ ಗ್ರಾಮದಲ್ಲಿರುವ   ಶ್ರೀ ಕಲ್ಯಾಣ ಬಸವೇಶ್ವರ ಮಠದ ಶ್ರೀ ಓಂಕಾರೇಶ್ವರ ಸ್ವಾಮೀಜಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ  ಮನವಿ ಸಲ್ಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಧಾವಿಸಿದ ಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ  ಮನವಿ ಸಲ್ಲಿಸಿ, ಭೈರವಿ ಎಂಬ ಮಹಿಳೆ ರಾಷ್ಟ್ರಪಿತ ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇದರಿಂದ ದೇಶದ ಘನತೆ, ಗೌರವಕ್ಕೆ ಅಪಮಾನವುಂಟಾಗಿದೆ ಎಂದು ದೂರಿದರು.
ದೇಶದಲ್ಲಿ ಕೋಮುವಾದ ಸೃಷ್ಠಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಕೇವಲ ಒಂದು ಧರ್ಮ ಸಂಸ್ಕೃತಿ ಬಗ್ಗೆ ಮಾತನಾಡಿ, ಉಳಿದ ಎಲ್ಲಾ ಧರ್ಮದ ಬಗ್ಗೆ ಅಗೌರವದ ಮಾತು ಆಡುತ್ತಿದ್ದಾರೆ. ಇವರಿಗೆ ಆದಷ್ಟು ಬೇಗ ದೇಶದ ಎಲ್ಲಾ ಜನತೆಗೆ ಗಾಂಧೀಜಿ ಅವರಿಗೆ ಮಾಡಿದ ಅಪಮಾನಕ್ಕೆ ಕ್ಷಮೆ ಕೇಳಬೇಕು ಎಂದು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇನ್ನು ಮುಂದೆ ನಮ್ಮ ದೇಶದ ಯಾವುದೇ ದಾರ್ಶನಿಕರು ಹಾಗೂ ಹೋರಾಟಗಾರರಿಗೆ ಅವಮಾನ ಆಗದಂತೆ ಆದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮುಖಂಡ ಕನ್ನಲಿ ಚನ್ನಪ್ಪ ಇದ್ದರು.

Leave a Reply

Your email address will not be published. Required fields are marked *

error: Content is protected !!